/newsfirstlive-kannada/media/post_attachments/wp-content/uploads/2025/02/TESLA.jpg)
ಭಾರತಕ್ಕೆ ಟೆಸ್ಲಾ ಸದ್ಯದಲ್ಲಿಯೇ ಎಂಟ್ರಿ ಕೊಡಲಿದೆ ಎಂಬ ಮಾತು ಕೊನೆಗೂ ನಿಜವಾಗಿದೆ. ಭಾರತಕ್ಕೆ ಟೆಸ್ಲಾ ಎಲೆಕ್ಟ್ರಕ್ ಕಾರ್ ಕಂಪನಿ ಪ್ರವೇಶ ಮಾಡುವುದು ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೋಟ್ಯಾಧಿಪತಿ ಹಾಗೂ ಉದ್ಯಮಿ ಎಲಾನ್ ಮಸ್ಕ್ ಯುಎಸ್ನಲ್ಲಿ ಭೇಟಿಯಾದ ಬೆನ್ನಲ್ಲಿಯೇ ಪ್ರಮುಖ ಬೆಳವಣಿಗೆ ಭಾರತದಲ್ಲಿ ಶುರುವಾಗಿದೆ.
ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯಿಂದ ಈಗಾಗಲೇ ನೇಮಕಾತಿಗೆ ಅರ್ಜಿ ಆಹ್ವಾನ ಶುರುವಾಗಿದೆ. ಲಿಂಕ್ಡ್ ಪೇಜ್ನಲ್ಲಿ ಹೊಸ ನೇಮಕಾತಿಗೆ ಟೆಸ್ಲಾ ಅರ್ಜಿ ಆಹ್ವಾನ ನೀಡಿದೆ. ಕೇಂದ್ರ ಹಣಕಾಸು ಇಲಾಖೆ ಹೇಳುವ ಪ್ರಕಾರ ಟೆಸ್ಲಾ ಭಾರತದಲ್ಲಿ ಒಟ್ಟು ಮೂರು ಘಟಕ ತೆರೆಯುವ ಉದ್ದೇಶ ಹೊಂದಿದೆ. ಗುಜರಾತ್, ಆಂಧ್ರಪ್ರದೇಶ ರಾಜ್ಯಗಳಲ್ಲಿ ತಲಾ ಒಂದೊಂದು ಘಟಕ ತೆರೆಯಲಿರುವ ಟೆಸ್ಲಾ ಮತ್ತೊಂದು ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಬೇಕು ಇನ್ನೂ ನಿರ್ಧರಿಸಿಲ್ಲ.
ಇದನ್ನೂ ಓದಿ:Tulasi Gabbard.. ಯುಎಸ್ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ.. ಹಿಂದೂ ಹೆಸರಿನ ಮಹಿಳೆಯ ಹಿಂದಿನ ಕಥೆಯೇನು?
ಮುಂಬೈ, ದೆಹಲಿ, ಹೈದ್ರಾಬಾದ್ ಸೇರಿದಂತೆ ಒಟ್ಟು ಮೂರು ನಾಲ್ಕು ನಗರಗಳಲ್ಲಿ ಶೋರೂಮ್ ತೆರೆಯಲು ಕೂಡ ಟೆಸ್ಲಾ ನಿರ್ಧರಿಸಿದೆ. ಈ ತಿಂಗಳ ಕೇಂದ್ರದ ಬಜೆಟ್ನಲ್ಲಿ ಹೈ ಎಂಡ್ ಕಾರ್ಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಶೇಕಡಾ 100 ರಿಂದ ಶೇಕಡಾ 70ಕ್ಕೆ ಇಳಿಕೆ ಮಾಡಲಾಗಿದೆ. ಜೊತೆಗೆ ಭಾರತದಲ್ಲಿಯೇ ತಯಾರಿಕಾ ಘಟಕ ತೆರೆದರೆ ಆಮದು ಸುಂಕ ಕಡಿತ ಮಾಡುವುದಾಗಿ ಭಾರತ ಹೇಳಿದೆ. ಭಾರತದಲ್ಲಿ ಒಟ್ಟು 41.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ತಯಾರಿಕಾ ಘಟಕ ತೆರೆದರೆ ಆಮದು ಸುಂಕ ಕಡಿತದ ಆಫರ್ ಕೂಡ ನೀಡಲಾಗಿದೆ. ಹೀಗಾಗಿ ಭಾರತದಲ್ಲಿ ಒಟ್ಟು ಮೂರು ಘಟಕ ತೆರೆಯಲು ಟೆಸ್ಲಾ ಕಂಪನಿ ಮುಂದಾಗಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಇದನ್ನೂ ಓದಿ:ಕೇವಲ 6 ಸಾವಿರದಲ್ಲಿ ವಿದೇಶಕ್ಕೆ ಹೋಗಬಹುದು: ಭಾರತೀಯರು ಈ ಆಫರ್ ಮಿಸ್ ಮಾಡಲೇಬೇಡಿ
ಟೆಸ್ಲಾ ಪ್ರಮುಖವಾಗಿ 13 ಪ್ರಮುಖ ಜವಾಬ್ದಾರಿ ನಿರ್ವಹಿಸುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಕಸ್ಟಮರ್ ಫೇಸಿಂಗ್ ಮತ್ತು ಬ್ಯಾಕ್ ಎಂಡ್ ಜಾಬ್ಗಳು ಇವುಗಳಲ್ಲಿ ಸೇರಿವೆ. ಇದರ ಜೊತೆಗೆ ಐದು ಪ್ರಮುಖ ಹುದ್ದೆಗಳಿಗೂ ಕೂಡ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ ಸರ್ವಿಸ್ ಟೆಕ್ನಿಷಿಯನ್ಸ್ ಮತ್ತು ವಿವಿಧ ಸಲಹಾ ಹುದ್ದೆಗಳನ್ನು ನಿರ್ವಹಿಸುವ ನುರಿತ ಕೆಲಸಗಾರರಿಗೆ ಆಫರ್ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ