/newsfirstlive-kannada/media/post_attachments/wp-content/uploads/2024/12/TEAM_INDIA_1.jpg)
ಡಿಸೆಂಬರ್ 26 ಎಂದರೆ ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡು ತಂಡಗಳೂ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಇಂದು ಕ್ರಿಸ್ಮಸ್ ದಿನವಾಗಿದ್ದರಿಂದ ಆಸ್ಟ್ರೇಲಿಯಾ ಆಟಗಾರರೆಲ್ಲ ಕುಟುಂಬದ ಜೊತೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಇದೆಲ್ಲದರ ಜೊತೆಗೆ 4ನೇ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಯಾಕೆ ಕರೆಯುತ್ತಾರೆ?.
ಪ್ರತಿವರ್ಷ ಡಿಸೆಂಬರ್ 25 ರಂದು ವಿಶ್ವದದ್ಯಾಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿದಂತೆ ಯುರೋಪಿಯನ್ನ ಬಹುತೇಕ ರಾಷ್ಟ್ರಗಳಲ್ಲಿ ಡಿಸೆಂಬರ್ 26 ರಂದು ಬಹುತೇಕ ಕಡೆ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿರುತ್ತದೆ. ಡಿಸೆಂಬರ್ 26 ಅನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:IND vs AUS; ಪ್ಲೇಯಿಂಗ್- 11ರಲ್ಲಿ ಯಂಗ್ ಬ್ಯಾಟರ್ ಆಡೋದು ಡೌಟ್.. ಕಾರಣವೇನು?
ಇದು ಅಲ್ಲದೇ ಕ್ರಿಸ್ಮಸ್ ದಿನ ಸ್ನೇಹಿತರು, ಬಂಧು-ಬಳಗದವರು ಕೊಟ್ಟ ಉಡುಗೊರೆಗಳನ್ನು ಮರುದಿನ ತೆರೆದು ನೋಡುತ್ತಾರೆ. ಇದರ ಜೊತೆಗೆ 26ರಂದು ಯಾವುದೇ ದೊಡ್ಡ ಕಾರ್ಯಕ್ರಮ, ಆಟ, ಸಮಾರಂಭ ನಡೆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆನಂದಿಸುತ್ತಾರೆ. ಅದರಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4ನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಅಂದರೆ ನಾಳೆ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಹೀಗಾಗಿ ಇದನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಯಾವಾಗ ಆರಂಭ?
1892ರಲ್ಲಿ ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಆರಂಭವಾಯಿತು. ಹೀಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಬಾಕ್ಸಿಂಗ್ ಡೇ ಟೆಸ್ಟ್‌ನ ತವರು ಎಂದು ಹಿಂದಿನಿಂದಲೂ ಕರೆಯಲಾಗುತ್ತಿದೆ. ಈ ಪಿಚ್ನಲ್ಲಿ 1892 ಆಸ್ಟ್ರೇಲಿಯಾದ ದೇಶಿಯ ಟೂರ್ನಿ ಶೆಫೀಲ್ಡ್ ಶೀಲ್ಡ್ ಪಂದ್ಯ ನಡೆದಿತ್ತು. ರಜೆ ಇರುವ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಪಂದ್ಯಕ್ಕೆ ಮೆರುಗು ಬರುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ