ಇಂಗ್ಲೆಂಡ್ ಪ್ರವಾಸಕ್ಕೆ ಬಲಿಷ್ಠ ಟೀಂ ಇಂಡಿಯಾ A ಪ್ರಕಟ.. ಕರುಣ್ ನಾಯರ್​ಗೆ ಸ್ಥಾನ..!

author-image
Ganesh
Updated On
ಕೊನೆಗೂ ಕನ್ನಡಿಗನಿಗೆ ನ್ಯಾಯ ಒದಗಿಸಿದ BCCI.. ಕರುಣ್ ಎದುರಿಸಿದ 7 ವರ್ಷಗಳ ಅಗ್ನಿ ಪರೀಕ್ಷೆ ಹೇಗಿತ್ತು..?
Advertisment
  • ಅಚ್ಚರಿ ಮೂಡಿಸಿದ ಕ್ಯಾಪ್ಟನ್ ಆಯ್ಕೆ ವಿಚಾರ
  • ಗಿಲ್, ಸಾಯಿ ಸುದರ್ಶನ್​​ ಆಯ್ಕೆ ಆಗಿಲ್ಲ
  • ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆಯಲಿಲ್ಲ

ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ A-ತಂಡ (ಇಂಡಿಯಾ A ಟೂರ್ ಆಫ್ ಇಂಗ್ಲೆಂಡ್) ಪ್ರಕಟಿಸಲಾಗಿದೆ. ತಂಡದ ಮೊದಲ ಪಂದ್ಯಕ್ಕೆ ಗಿಲ್ ಮತ್ತು ಸಾಯಿ ಸುದರ್ಶನ್ ಆಯ್ಕೆ ಆಗಿಲ್ಲ. ಇವರು ಎರಡನೇ ಪಂದ್ಯದಿಂದ ತಂಡವನ್ನು ಸೇರಿಕೊಳ್ಳಬಹುದು ಎನ್ನಲಾಗಿದೆ. ಶ್ರೇಯಸ್ ಅಯ್ಯರ್​ಗೆ ಸ್ಥಾನ ಸಿಕ್ಕಿಲ್ಲ. ಇಶಾನ್ ಕಿಶನ್ ಭಾರತದ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಾರಿಗೆಲ್ಲ ಅವಕಾಶ..?

ಈ ತಂಡವು ಇಂಗ್ಲೆಂಡ್‌ನಲ್ಲಿ 2 ಪ್ರಥಮ ದರ್ಜೆ ಪಂದ್ಯಗಳು ಮತ್ತು ಒಂದು ಇಂಟ್ರಾ ಸ್ಕ್ವಾಡ್ ಪಂದ್ಯ ಆಡಲಿದೆ. ಅಭಿಮನ್ಯು ಈಶ್ವರನ್ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ತನುಷ್ ಕೋಟ್ಯಾನ್, ಮುಖೇಶ್ ಕುಮಾರ್, ಮಾನವ್ ಸುತಾರ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಖಲೀಲ್ ಅಹಮದ್, ಋತುರಾಜ್ ದೇಶ್ ಖಾನ್, ಋತುರಾಜ್ ಗಾಯಕ್ವಾಡ್​ ತಂಡದಲ್ಲಿದ್ದಾರೆ.

ಮೇ 30 ರಿಂದ ಟೀಮ್ ಇಂಡಿಯಾ-ಎ ತಂಡದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ. ಭಾರತ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. ಜೂನ್ 13 ರಿಂದ ಇಂಟ್ರಾ ಸ್ಕ್ವಾಡ್ ಪಂದ್ಯ ನಡೆಯಲಿದೆ. ಐಪಿಎಲ್ (ಐಪಿಎಲ್ 2025) ಕಾರಣ ಗಿಲ್ ಮತ್ತು ಸಾಯಿ ಸುದರ್ಶನ್ ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲಿ ಇಲ್ಲ.

ಇದನ್ನೂ ಓದಿ: ಮಳೆ ಬಂತು ಅವಾಂತರ ಹೊತ್ತು ತಂತು.. ರಾಜ್ಯದಲ್ಲಿ ಏನೆಲ್ಲ ಆಗೋಯ್ತು..? ಇನ್ನೂ ಎಷ್ಟು ದಿನ ಮಳೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment