/newsfirstlive-kannada/media/post_attachments/wp-content/uploads/2025/06/INDIA-VS-ENGLAND.jpg)
ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ ಗೆಲ್ಲೋದು ಅಂದ್ರೆ ತಮಾಷೆಯ ವಿಷಯವಲ್ಲ. ಈ ಸಲ ಆಂಗ್ಲರ ನಾಡಿಗೆ ದಂಡಿತ್ತಿ ಹೋಗಿರುವ ಯುವ ಪಡೆ, ಇತಿಹಾಸ ಸೃಷ್ಟಿಸುವ ಕನಸಿನಲ್ಲಿದೆ. ಈ ಕನಸು ನನಸಾಗಬೇಕಾದ್ರೆ, ಐದು ಮಂತ್ರ ಚಾಚು ತಪ್ಪದೆ ಪಾಲಿಸಬೇಕಿದೆ..
ಇಂಡೋ, ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಜೂನ್20 ರಿಂದ ಶುರುವಾಗಲಿರುವ ಈ ಪ್ರತಿಷ್ಟೆಯ ಟೆಸ್ಟ್ ಗೆಲ್ಲೋಕೆ, ಟೀಮ್ ಇಂಡಿಯಾ ತೆರೆ ಹಿಂದೆಯೇ ನಾನಾ ಗೇಮ್ ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ರೂಪಿಸ್ತಿದೆ. ಆಂಗ್ಲರ ನಾಡದಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವ ಆಚರಿಸೋದು ನಿಜಕ್ಕೂ ಅಷ್ಟು ಸುಲಭದ ಮಾತಲ್ಲ. ಆ ಮಾತು ನಿಜವಾಗಬೇಕಾದ್ರೆ ಟೀಮ್ ಇಂಡಿಯಾ ಆಟಗಾರರು, ಈ ಐದೂ ರೂಲ್ಸ್ನ ಇಂಪ್ಲಿಮೆಂಟ್ ಮಾಡಬೇಕು.
ಇದನ್ನೂ ಓದಿ: ABD ಮೇಲೆ ಕೊಹ್ಲಿಗೆ ಕೋಪ.. ತಿಂಗಳುಗಟ್ಟಲೇ ಮಾತಿಲ್ಲ, ಕಥೆಯಿಲ್ಲ.. ಈ ಸ್ಟೋರಿ ಗೊತ್ತಾ ನಿಮಗೆ..?
ನಂಬರ್.01: ತಾಳ್ಮೆಯ ಆಟ..!
ಟೆಸ್ಟ್ ಕ್ರಿಕೆಟ್ ಅಂದ್ರೆ ತಾಳ್ಮೆ. ಈ ತಾಳ್ಮೆ ಕಾಯ್ದುಕೊಳ್ಳುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗಾಗಿ ಬ್ಯಾಟರ್ಗಳು ಎಚ್ಚರಿಕೆಯ ಆಟವಾಡಬೇಕಿದೆ. ರನ್ ಬರಲಿಲ್ಲ ಎಂಬ ಆತುರಕ್ಕೆ ಇಲ್ಲದ ಶಾಟ್ಗೆ ಯತ್ನಿಸಿ ಕೈಸುಟ್ಟುಕೊಳ್ಳುವ ಗೋಜಿಗೆ ಹೋಗದಂತೆ. ಮೊದಲು ಕ್ರೀಸ್ನಲ್ಲಿ ನೆಲಯೂರುವಂತಹ ಹೆಜ್ಜೆ ಹಾಕಬೇಕು. ಬ್ಯಾಟರ್ಗಳು ಮಾತ್ರವಲ್ಲ, ಬೌಲರ್ಗಳಿಗೂ ಇದು ಅನ್ವಯ. ವಿಕೆಟ್ ಬರ್ತಿಲ್ಲ ಎಂಬ ಕಾರಣಕ್ಕೆ ಒತ್ತಡಕ್ಕೊಳಗಾಗದಂತೆ ಲೈನ್ ಅಂಡ್ ಲೈನ್ ಕಾಯ್ದುಕೊಳ್ಳಬೇಕಿದೆ. ಆ ಮೂಲಕ ಎದುರಾಳಿ ಬ್ಯಾಟರ್ನ ಟೆಸ್ಟ್ ಮಾಡಬೇಕಿದೆ.
ನಂಬರ್.02: ಆತ್ಮವಿಶ್ವಾಸದಿಂದ ಆಟ ಮುಖ್ಯ
ಆಟಗಾರರ ಆತ್ಮವಿಶ್ವಾಸ ಹಾಗೂ ಮೈಂಡ್ಸೆಟ್. ಇದು ಆಟಗಾರರ ಪರ್ಫಾಮೆನ್ಸ್ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಟೀಮ್ ಇಂಡಿಯಾದಲ್ಲಿರುವ ಐದಾರು ಆಟಗಾರರು ಹೊರತುಪಡಿಸಿ, ಇನ್ನುಳಿದ ಎಲ್ಲರಿಗೂ ಇದೇ ಮೊದಲ ಇಂಗ್ಲೆಂಡ್ ಸಿರೀಸ್.. ಈ ಕಾರಣಕ್ಕೆ ಹೊಸ ಆಟಗಾರರು, ತಮ್ಮ ಮನದಲ್ಲಿರುವ ಅಳುಕು ದೂರ ಮಾಡಿ ಆತ್ಮವಿಶ್ವಾಸದ ಆಟವಾಡುವುದು ಬಹು ಮುಖ್ಯ.
ನಂಬರ್.03: ಕಂಡೀಷನ್ಸ್ನ ತಿಳಿದುಕೊಳ್ಳಬೇಕು
ಅನ್ಫೀಲ್ಡ್ಗೆ ಇಳಿಯುವ ಮುನ್ನ ತಿಳಿದುಕೊಳ್ಳಬೇಕಾದ ಮಹತ್ವದ ವಿಷ್ಯ ಕಂಡೀಷನ್ಸ್. ಈ ಕಂಡೀಷನ್ಸ್ಗೆ ತಕ್ಕಂತ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸುವುದು ಮಾತ್ರವಲ್ಲ. ಸ್ವೀಮ್ ಆ್ಯಂಡ್ ಸ್ವಿಂಗ್ ಕಂಡೀಷನ್ಸ್ಗೆ ತಕ್ಕಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ಗೆ ಮಾಡಬೇಕಿದೆ. ಕಾಲ ಕಳೆದಂತೆ ಗಟ್ಟಿಯಾಗುವ ಈ ಪಿಚ್ನಲ್ಲಿ ಪೇಸ್ ಅಂಡ್ ಬೌನ್ಸ್ ಸಿಗುತ್ತೆ. ಈ ಕಾರಣಕ್ಕೆ ಕಂಡೀಷನ್ಸ್ಗೆ ಅನುಗುಣವಾಗಿ ಅಡಪ್ಟ್ ಆಗಿ ಸ್ಟ್ರಾಟರ್ಜಿ ರೂಪಿಸುತ್ತ ಇಂಪ್ಲಿಮೆಂಟ್ ಮಾಡಬೇಕಿದೆ..
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ತೊರೆಯಲು ಸಂಜು ಸಜ್ಜು.. ಯಾವ ತಂಡ ಸೇರ್ತಾರೆ ಕ್ಯಾಪ್ಟನ್..?
ನಂಬರ್.04: ತಿರುಗೇಟು ನೀಡುವ ಸಾಮರ್ಥ್ಯ ಬೇಕು
ಟೀಮ್ ಇಂಡಿಯಾ ಮೇಲೆ ಇಂಗ್ಲೆಂಡ್ ಪ್ರಾಬಲ್ಯ ಮೆರೆಯಿತು. ಇದರಿಂದ ಟೀಮ್ ಇಂಡಿಯಾ ಆಟಗಾರರು ಕುಗ್ಗುವ ಬದಲಿಗೆ ತಿರುಗೇಟು ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದು ಅನ್ಫೀಲ್ಡ್ ಆಟದಲ್ಲಿ ಮಾತ್ರವಲ್ಲ. ಸ್ಲೆಡ್ಜಿಂಗ್ ವಿಚಾರದಲ್ಲೂ ಇದು ಅನ್ವಯಿಸುತ್ತೆ. ಇದಕ್ಕೆ ಬೆಸ್ಟ್ 2022ರ ಇಂಗ್ಲೆಂಡ್ ಟೂರ್ನಲ್ಲಿ ವಿರಾಟ್, ಆಂಗ್ಲರಿಗೆ ಆನ್ಫೀಲ್ಡ್ನಲ್ಲಿ ಬೇರ್ ಸ್ಟೋಗೆ ತಿರುಗೇಟು ನೀಡಿದ ಪರಿ.
ನಂಬರ್.05: ಸೋಲು ಎಂಬ ಮನಸ್ಥಿತಿಯಿಂದ ದೂರ
ಮೈಂಡ್ಸೆಟ್.. ತಂಡದ ಗೆಲುವು ಹಾಗೂ ಸೋಲು ನಿರ್ಧಾರಿಸುವುದೇ ಈ ಮೈಂಡ್ಸೆಟ್. ಈ ಕಾರಣಕ್ಕೆ ಆಟಗಾರರು ಸೋಲು ಎಂಬ ಮನಸ್ಥಿತಿಯಿಂದ ದೂರ ಉಳಿಯಬೇಕು. ಪಾಸಿಟಿವ್ ಮೈಂಡ್ಸೆಟ್ ಜೊತೆಗೆ ಗುರಿ ಸಾಧಿಸುವ ಛಲವೊಂದೇ ಧ್ಯೇಯವಾಗಿರಬೇಕು. ಸೋಲು ಗೆಲುವೆಂಬ ಒತ್ತಡದಲ್ಲಿ ನರುಳಾಡುವ ಬದಲಿಗೆ ಪುಟಿದೇಳುವ ಮನಸ್ಥಿತಿಯಲ್ಲಿ ಹೋರಾಟ ನಡೆಸಬೇಕಿದೆ. ಇಂಗ್ಲೆಂಡ್ ಟೂರ್ನಲ್ಲಿ ಟೆಸ್ಟ್ ಗೆಲ್ಲೋದು ಚಾಲೆಂಜ್ ಇರಬಹುದು. ಗೆಲುವು ಅಸಾಧ್ಯವೇನಲ್ಲ. ಹೀಗಾಗಿ ಹೋರಾಟದ ಛಲದೊಂದಿಗೆ ಯಂಗ್ ಇಂಡಿಯಾ ಮುನ್ನುಗ್ಗಿದ್ರೆ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: 6 ವರ್ಷ, 8 ತಿಂಗಳು.. ಸಿಕ್ಕಿಲ್ಲ ಮತ್ತೊಬ್ಬ ಪಾಂಡ್ಯ.. ಟೀಂ ಇಂಡಿಯಾದ ಈ ಕೊರಗಿಗೆ ಮುಕ್ತಿ ಯಾವಾಗ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ