newsfirstkannada.com

ಕೊನೇ ಟೆಸ್ಟ್​​​ಗೆ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟ; ಟೂರ್ನಿಯಿಂದಲೇ ಸ್ಟಾರ್​​​ ಪ್ಲೇಯರ್​ ಔಟ್​​!

Share :

Published February 29, 2024 at 8:16pm

  ಟೀಮ್​​ ಇಂಡಿಯಾ, ಪ್ರವಾಸಿ ಇಂಗ್ಲೆಂಡ್​​ ಮಧ್ಯೆ 5ನೇ ಟೆಸ್ಟ್​

  ಧರ್ಮಶಾಲಾದಲ್ಲಿ ನಡೆಯಲಿರೋ ಕೊನೇ ಟೆಸ್ಟ್​ ಮ್ಯಾಚ್​​!

  ಕೊನೆ ಟೆಸ್ಟ್​​ಗೆ ಬಿಸಿಸಿಯನಿಂದ ಟೀಮ್​ ಇಂಡಿಯಾ ಪ್ರಕಟ

ಮಾರ್ಚ್​​ 7ನೇ ತಾರೀಕಿನಿಂದ ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟೀಮ್​ ಇಂಡಿಯಾ, ಪ್ರವಾಸಿ ಇಂಗ್ಲೆಂಡ್​​​ ಮಧ್ಯೆ ಕೊನೇ ಟೆಸ್ಟ್​ ನಡೆಯಲಿದೆ. ಕೊನೇ ಟೆಸ್ಟ್​​ಗಾಗಿ ಬಿಸಿಸಿಐ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದೆ.

ಇನ್ನು, 4ನೇ ಟೆಸ್ಟ್​ನಿಂದ ಹೊರಗುಳಿದಿದ್ದ ವಿಶ್ವದ ನಂಬರ್​ 1 ಬೌಲರ್​ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಆದರೆ, ಇನ್ನೂ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ಕೆಎಲ್ ರಾಹುಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಜತೆಗೆ ತಂಡದಲ್ಲಿದ್ದ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಅವರನ್ನು ರಿಲೀಸ್​ ಮಾಡಲಾಗಿದೆ. ವಾಷಿಂಗ್ಟನ್​ ಸುಂದರ್​​ ಮಾರ್ಚ್​​ 2ನೇ ತಾರೀಕಿನಿಂದ ಮುಂಬೈ ತಂಡದ ವಿರುದ್ಧ ನಡೆಯಲಿರೋ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಪರ ಆಡಲಿದ್ದಾರೆ. ಅಗತ್ಯ ಇದ್ದಲ್ಲಿ ರಣಜಿ ಮುಗಿದ ಕೂಡಲೇ 5ನೇ ಟೆಸ್ಟ್‌ಗೆ ವಾಷಿಂಗ್ಟನ್ ಭಾರತ ತಂಡ ಸೇರಿಕೊಳ್ಳಲಿದ್ದಾರೆ.

5ನೇ ಟೆಸ್ಟ್‌ಗೆ ಭಾರತ ತಂಡ ಹೀಗಿದೆ..!

ರೋಹಿತ್ ಶರ್ಮಾ (ಕ್ಯಾಪ್ಟನ್​), ಜಸ್ಪ್ರೀತ್ ಬುಮ್ರಾ (ವೈಸ್​ ಕ್ಯಾಪ್ಟನ್​), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (WK), ಕೆಎಸ್ ಭರತ್ (WK), ದೇವದತ್ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೇ ಟೆಸ್ಟ್​​​ಗೆ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟ; ಟೂರ್ನಿಯಿಂದಲೇ ಸ್ಟಾರ್​​​ ಪ್ಲೇಯರ್​ ಔಟ್​​!

https://newsfirstlive.com/wp-content/uploads/2024/02/Team-India-Test-Squad.jpg

Load More