/newsfirstlive-kannada/media/post_attachments/wp-content/uploads/2024/03/Gobi-3.jpg)
ಬೆಂಗಳೂರು: ಬಾಂಬೆ ಮಿಠಾಯಿ ಮತ್ತು ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವುದು ಗೋಬಿ ಪ್ರಿಯರನ್ನ ಆತಂಕಕ್ಕೆ ತಳ್ಳಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದ್ದು ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಂತೆಯೆ ರಾಜ್ಯದಲ್ಲಿ ಗೋಬಿ ನಿಷೇಧ ಆಗಲಿದೆ ಎಂಬ ಸುದ್ದಿ ಇದೆ. ಈ ಸಂಬಂಧ ಇಂದು ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳನ್ನ ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನು ಹೇಳಿದರು..?
- ಹೆಚ್ಚಿನ ಜನರು ಮನೆಯ ಬದಲು ಹೊರಗೆ ತಿನ್ನುವುದು ಹೆಚ್ಚಾಗಿದೆ
- ಆಹಾರ ಸರಿಯಾದ ರೀತಿಯಲ್ಲಿ ತಿನ್ನದಿದ್ರೆ ಆರೋಗ್ಯಕ್ಕೆ ಹಾನಿ ಆಗುತ್ತದೆ
- ಕೆಲವು ಕೆಮಿಕಲ್ ಬಳಕೆಯಿಂದ ಆರೋಗ್ಯಕ್ಕೆ ಹಾನಿ ಆಗುತ್ತೆ ಎಚ್ಚರಿಂದ ಇರಬೇಕು
- ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹ ಮಾಡಿದ್ದೇವೆ
- ಗೋಬಿ ಮಂಚೂರಿಯ 171 ಮಾದರಿಗಳ ಸಂಗ್ರಹ ಮಾಡಲಾಗಿತ್ತು
- ಈ ಪೈಕಿ 107 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ
- ಟಾರ್ ಟ್ರಾಸೈಲ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೋಸಿನ್ ಪತ್ತೆಯಾಗಿದೆ
- ಕಾಟನ್ ಕ್ಯಾಂಡಿಯ 25 ಮಾದರಿಯ ಸಂಗ್ರಹ ಮಾಡಲಾಗಿತ್ತು, 15 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ
- ರೋಡ್ ಮೈನ್-ಬಿ ಅಂಶ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ
- ಕಂಡು ಬಂದಿರುವ ಕೃತಕ ಬಣ್ಣಗಳ ಮಾದರಿ ಪುಡ್ ಸೇಫ್ಟಿ ಆ್ಯಕ್ಟ್ ಪ್ರಕಾರ ಅಸುರಕ್ಷಿತ
- 2011ರ ನಿಯಮದ ಪ್ರಕಾರ ಗೋಬಿ ಮಂಚೂರಿ ತಯಾರಿಕೆಯಲ್ಲಿ ಬಣ್ಣ ಬಳಸುವಂತಿಲ್ಲ
- ಕಾಟನ್ ಕ್ಯಾಂಡಿ ಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಬಳಸುವಂತಿಲ್ಲ
- ಈ ಪೈಕಿ 107 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ
- ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿರ್ಬಂಧ
- ಕಲರ್ ಹಾಕಿರುವ ಕಾಟನ್ ಕ್ಯಾಂಡಿ ನಿಷೇಧ ಮಾಡುತ್ತಿದ್ದೇವೆ
- ಕಲರ್ ಇಲ್ಲದ ಕಾಟನ್ ಕ್ಯಾಂಡಿ ಮಾರಾಟಕ್ಕೆ ಅವಕಾಶ ಇದೆ
- ಕೃತಕ ಬಣ್ಣ ಹಾಕಿ ಗೋಬಿ ಮಂಚೂರಿ ಮಾರಾಟ ನಿರ್ಬಂಧ
- ನಿಯಮ ಉಲ್ಲಂಘಿಸಿದ್ರೆ 10 ಲಕ್ಷ ಹಾಗೂ 7 ವರ್ಷ ಜೀವಾವಧಿ ಶಿಕ್ಷೆ
- ನಾವು ಸರ್ವೆ ಮಾಡ್ತೇವೆ, ಕೃತಕ ಬಣ್ಣ ಬಳಕೆ ಕಂಡು ಬಂದರೆ ಶಿಕ್ಷೆ
- ಗೋಬಿ ಮಂಚೂರಿ ಅಸುರಕ್ಷಿತ ಅಲ್ಲ, ಅದನ್ನ ಬ್ಯಾನ್ ಮಾಡಲ್ಲ
- ಯಾವುದೇ ಕಾರಣಕ್ಕೂ ಗೋಬಿ ಮಂಚೂರಿ ಬ್ಯಾನ್ ಮಾಡಲ್ಲ
- ಗೋಬಿ ಒಂದು ತರಕಾರಿ, ಅದನ್ನ ಬ್ಯಾನ್ ಮಾಡಲು ಆಗಲ
- ಕೃತಕ ಬಣ್ಣ ಬಳಕೆ ಮಾಡಿ ಗೋಬಿ ಮಂಚೂರಿ ಮಾರುವಂತಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ