ಟೆಕ್ಸಾಸ್​ನಲ್ಲಿ ಭಾರೀ ಮಳೆ, ದಿಢೀರ್​ ಪ್ರವಾಹ.. ಹಲವಾರು ಮಂದಿ ನಾಪತ್ತೆ.. ಉಸಿರು ಚೆಲ್ಲಿದ 80 ಜನ!

author-image
Bheemappa
ಟೆಕ್ಸಾಸ್​ನಲ್ಲಿ ಭಾರೀ ಮಳೆ, ದಿಢೀರ್​ ಪ್ರವಾಹ.. ಹಲವಾರು ಮಂದಿ ನಾಪತ್ತೆ.. ಉಸಿರು ಚೆಲ್ಲಿದ 80 ಜನ!
Advertisment
  • ನಾಪತ್ತೆ ಆದವರ ಪತ್ತೆಗೆ ಹೆಲಿಕಾಪ್ಟರ್, ಡ್ರೋನ್​ಗಳಿಂದ ಹುಡುಕಾಟ
  • ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡಿದ ಡೊನಾಲ್ಡ್ ಟ್ರಂಪ್
  • ಅಮೆರಿಕಾದಲ್ಲೂ ನಿಖರ ಹವಾಮಾನ ಮುನ್ಸೂಚನೆ ನೀಡಲು ವಿಫಲ

ಅಮೆರಿಕಾದ ಟೆಕ್ಸಾಸ್​​ನಲ್ಲಿ ಭಾರೀ ಮಳೆ, ದಿಢೀರ್ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸೆಂಟ್ರಲ್ ಟೆಕ್ಸಾಸ್​ನಲ್ಲೇ ಒಂದು ಡಜನ್​ಗೂ ಹೆಚ್ಚು ಜನರು ನಾಪತ್ತೆ ಆಗಿದ್ದಾರೆ. ಭಾರೀ ಮಳೆ, ದಿಢೀರ್ ಪ್ರವಾಹದಿಂದ 28 ಮಕ್ಕಳು ಸೇರಿದಂತೆ 80 ಮಂದಿ ಜೀವ ಬಿಟ್ಟಿದ್ದಾರೆ. ಟೆಕ್ಸಾಸ್​ನಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದ್ದು, ಹಾನಿ ಮತ್ತಷ್ಟು ಹೆಚ್ಚಾಗಬಹುದು ಎಂದು ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಟೆಕ್ಸಾಸ್​ನ ಕೆರ ಕೌಂಟಿ ಪ್ರದೇಶದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಈ ಸ್ಥಳದಲ್ಲೇ 68 ಮಂದಿ ಉಸಿರು ಬಿಟ್ಟಿದ್ದಾರೆ. ನೈಋತ್ಯ ಟೆಕ್ಸಾಸ್​ನಲ್ಲಿ ಕನಿಷ್ಠ 14 ಮಂದಿ ಜೀವ ಬಿಟ್ಟಿದ್ದಾರೆ. ಟೆಕ್ಸಾಸ್​ನಲ್ಲಿ 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ಗರ್ವನರ್ ಗ್ರೆಗ್ ಅಬೌಟ್ ಹೇಳಿದ್ದಾರೆ.

publive-image

ನಾಪತ್ತೆಯಾದವರ ಪತ್ತೆಗಾಗಿ 17 ಹೆಲಿಕಾಪ್ಟರ್, ಡ್ರೋನ್​ಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ತಂಡಗಳು ಕೂಡ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಗುಡಲಪೆ ನದಿಯ ದಡದಲ್ಲಿದ್ದ ಕ್ರಿಶ್ಚಿಯನ್ ಸಮ್ಮರ್ ಕ್ಯಾಂಪ್ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಜನರ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಕ್ಯಾಂಪ್​ನಲ್ಲಿ 750 ಮಂದಿ ಇದ್ದು, ರಾತ್ರೋರಾತ್ರಿ ಪ್ರವಾಹ ಬಂದಿದ್ದರಿಂದ ನೀರಿನಲ್ಲಿ ಸಿಲುಕಿಕೊಂಡಿದ್ದರು. 10 ಬಾಲಕಿಯರು, ಒಬ್ಬ ಕೌನ್ಸಿಲರ್ ನಾಪತ್ತೆಯಾಗಿದ್ದಾರೆ.

ಟೆಕ್ಸಾಸ್​ನಲ್ಲಿ ಇದುವರೆಗೂ 850 ಮಂದಿಯನ್ನು ರಕ್ಷಿಸಲಾಗಿದೆ. ಎಮರ್ಜೆನ್ಸಿ ಸೇವೆಗಳು, ಬೋಟ್, ಹೆಲಿಕಾಪ್ಟರ್​ಗಳು, ಡ್ರೋನ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳಡಿ ಜನರು, ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೆಚ್ಚಾಗುತ್ತಿರುವ ಉಷ್ಣಾಂಶದ ಮಧ್ಯೆಯೂ ಹಾವಿನ ಕಾಟದ ಮಧ್ಯೆಯೂ ರಕ್ಷಣಾ ತಂಡಗಳು ನಾಪತ್ತೆ ಆದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಹಿಂದೆಂದೂ ಕಾಣದ ಭಾರೀ ಮಳೆಯಿಂದ ದಿಢೀರ್​ ಪ್ರವಾಹದ ಸ್ಥಿತಿ ಎದುರಾಗಿತ್ತು. ಒಂದೇ ಗಂಟೆಯಲ್ಲಿ 15 ಇಂಚು ಮಳೆಯಾಗಿದೆ. ಇದರಿಂದಾಗಿ ಗುಡಲಪೆ ನದಿಯು ಕೆಲವೇ ನಿಮಿಷಗಳಲ್ಲಿ 26 ಅಡಿ ಎತ್ತರ ಹೆಚ್ಚಾಗಿ ಹರಿದಿದೆ. ನದಿಯ ಅಕ್ಕಪಕ್ಕದ ಟೌನ್​ಗಳು ನದಿ ನೀರಿನಿಂದ ಜಲಾವೃತ್ತವಾಗಿದ್ದವು.

ಸ್ಥಳೀಯ ಮುನ್ನೆಚ್ಚರಿಕೆಯ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಬೇಕು, ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡುವ ನಿಖರತೆಯನ್ನು ಪುನರ್ ಪರಿಶೀಲಿಸಬೇಕು ಎಂದು ಟೆಕ್ಸಾಸ್ ಗರ್ವನರ್ ಅಬೌಟ್ ಹೇಳಿದ್ದಾರೆ. ಈ ಬಾರಿ ಮಳೆ, ದಿಢೀರ್​ ಪ್ರವಾಹದ ಬಗ್ಗೆ ಸರಿಯಾದ, ನಿಖರ ಮುನ್ನೆಚ್ಚರಿಕೆಯನ್ನು ನೀಡುವಲ್ಲಿ ಅಮೆರಿಕಾದ ಹವಾಮಾನ ಇಲಾಖೆಯು ವಿಫಲವಾಗಿದೆ.

ಇದನ್ನೂ ಓದಿ:ಗಂಡನ ಮನೆಯವ್ರೇ ಹುಷಾರ್..! ಮಶ್ರೂಮ್​​ನಿಂದ ಅತ್ತೆ, ಮಾವ, ನಾದಿನಿಯ ಜೀವ ತೆಗೆದ ಸೊಸೆ!

publive-image

ಇದು ಈಗ ಅಮೆರಿಕಾದ ಟೆಕ್ಸಾಸ್​ನಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಮುಂದುವರಿದ ಅಮೆರಿಕಾದಲ್ಲೂ ನಿಖರ ಹವಾಮಾನ ಮುನ್ಸೂಚನೆ ಇಲ್ಲದೇ, 80 ಮಂದಿ ಜೀವ ಬಿಟ್ಟಿದ್ದಾರೆ. ನಿಖರ ಮುನ್ನೆಚ್ಚರಿಕೆ ನೀಡಿದ್ದರೇ, ಮಳೆ, ಪ್ರವಾಹದ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಿತ್ತು ಎಂದು ಟೆಕ್ಸಾಸ್ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಾವು ಮುಂದಿನ ಶುಕ್ರವಾರ ಟೆಕ್ಸಾಸ್​ನ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ. ಈ ಭಾರೀ ಮಳೆ, ದಿಢೀರ್ ಪ್ರವಾಹವನ್ನು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಇದು ಬೈಡೆನ್ ಮಾಡಿದ ವ್ಯವಸ್ಥೆ ಎಂದು ಜೋ ಬೈಡೆನ್ ರತ್ತ ಡೋನಾಲ್ಡ್ ಟ್ರಂಪ್ ಬೊಟ್ಟು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment