/newsfirstlive-kannada/media/post_attachments/wp-content/uploads/2025/06/Ruangsak-Loychusak-plane-crash.jpg)
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ. ಆತನೇ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್.
ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್ ಪೇಪರ್ನಲ್ಲಿ ಸೇಮ್ ಟು ಸೇಮ್ ಜಾಹೀರಾತು!
ನಿಮಗೆ ಇದು ಅಚ್ಚರಿ ಎನಿಸಬಹುದು ಆದ್ರೂ ಇದು ಸತ್ಯ. ನೀವು ನಂಬುತ್ತೀರಾ ಬರೋಬ್ಬರಿ 27 ವರ್ಷಗಳ ಹಿಂದೆ ವಿಮಾನ ಅಪಘಾತದಿಂದ ಥಾಯ್ ನಟ-ಗಾಯಕರೊಬ್ಬರು ಪವಾಡದಂತೆ ಬದುಕುಳಿದ್ದರು. ಆದ್ರೆ ಕಾಕತಾಳೀಯ ಎಂಬಂತೆ ಮೊನ್ನೆ ನಡೆದ ಏರ್ ಇಂಡಿಯಾ ಘೋರ ದುರಂತದಲ್ಲಿ ವಿಶ್ವಾಸ್ ಕುಮಾರ್ ಅವರಂತೆ 27 ವರ್ಷದ ಹಿಂದೆ ಗಾಯಕ ರುವಾಂಗ್ಸಾಕ್ ಲೊಯ್ಚುಸಾಕ್ ಎಂಬುವವರು ಬಜಾವ್ ಆಗಿದ್ದರು. ಅಚ್ಚರಿ ವಿಚಾರ ಏನೆಂದರೆ ಈ ಇಬ್ಬರು ಬಜಾವ್ ಆಗಿದ್ದು ಆ ಒಂದು ನಂಬರಿನ ಸೀಟ್ನಿಂದ.
ಹೌದು, ಇದನ್ನೂ ಅಷ್ಟು ಬೇಗ ನಂಬೋದಕ್ಕೆ ಆಗೋದಿಲ್ಲ. ಆದರೆ ಏರ್ ಇಂಡಿಯಾ ದುರಂತ ಸಂಭವಿಸಿದಾಗ ಈ ಬಗ್ಗೆ ಖುದ್ದು ಥಾಯ್ ನಟ-ಗಾಯಕ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 11, 1998ರಂದು, 20 ವರ್ಷದ ರುವಾಂಗ್ಸಾಕ್ ಲೊಯ್ಚುಸಾಕ್ ಸಾವಿನಿಂದ ಗೆದ್ದು ಬಂದಿದ್ದರು. ರುವಾಂಗ್ಸಾಕ್ ಲೊಯ್ಚುಸಾಕ್ ಅವರು ಪ್ರಯಾಣಿಸುತ್ತಿದ್ದ ಏರ್ವೇಸ್ ವಿಮಾನ TG261 ದಕ್ಷಿಣ ಥೈಲ್ಯಾಂಡ್‌ನಲ್ಲಿ ತಗ್ಗು ಪ್ರದೇಶಕ್ಕೆ ಉರುಳಿತ್ತು. ಆಗ ವಿಮಾನದಲ್ಲಿದ್ದ 146 ಜನರಲ್ಲಿ 101 ಜನರು ಜೀವಬಿಟ್ಟಿದ್ದರು. ಆಗ ರುವಾಂಗ್ಸಾಕ್ ಲೊಯ್ಚುಸಾಕ್ ಅವರು 11A ಸೀಟ್ನಲ್ಲಿ ಕುಳಿತುಕೊಂಡಿದ್ದರಿಂದ ಬಜಾವ್ ಆಗಿದ್ದರಂತೆ.
ಇನ್ನೂ, ಏರ್ ಇಂಡಿಯಾ ಫ್ಲೈಟ್ AI171 ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್, ವಿಮಾನ ಪತನವಾದಾಗ 11Aನಲ್ಲಿ ಕುಳಿತಿದ್ದರು ಎಂದು ತಿಳಿದ ನಂತರ ನನಗೆ ರೋಮಾಂಚನವಾಯಿತು ಎಂದು ಈಗ 47 ವರ್ಷ ವಯಸ್ಸಿನ ರುವಾಂಗ್ಸಾಕ್ ಹೇಳಿಕೊಂಡಿದ್ದಾರೆ. ಜೊತೆಗೆ 1998 ರಲ್ಲಿ ಪತ್ರಿಕೆಯಲ್ಲಿ ಪ್ರಕಟಣೆಯಾದ ಲೇಖನಗಳ ಫೋಟೋ ಹಾಗೂ ತನ್ನ ಸೀಟ್ ಸಂಖ್ಯೆ ಮತ್ತು ಬದುಕುಳಿದ ಸಮಯವನ್ನು ಉಲ್ಲೇಖಿಸಿದ್ದಾರೆ. ಥಾಯ್ ಭಾಷೆಯಲ್ಲಿ ಫೇಸ್‌ಬುಕ್ ಪೋಸ್ಟ್ ಪೋಸ್ಟ್ ಮಾಡಿಕೊಂಡ ರುವಾಂಗ್ಸಾಕ್, ಭಾರತದಲ್ಲಿ ವಿಮಾನ ಅಪಘಾತದಿಂದ ಬದುಕುಳಿದವನು. ಅವನು ನನ್ನಂತೆಯೇ ಅದೇ ಸೀಟಿನಲ್ಲಿ ಕುಳಿತಿದ್ದ. 11A." ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಚಿತಾ ರಾಮ್ ಗರಂ.. ಅಷ್ಟಕ್ಕೂ ಹುಲಿ ಕಾರ್ತಿಕ್ ಮಾಡಿದ್ದೇನು?
ಹೀಗಾಗಿ ವಿಮಾನ ದುರಂತದಲ್ಲಿ ಅಚ್ಚರಿ ಎಂಬಂತೆ ವಿಶ್ವಾಸ್ ಕುಮಾರ್ ರಮೇಶ್ ಬದುಕಿ ಬಂದಿರೋದು. ಇದೀಗ ಈ ರಮೇಶ್ ಅವರು ವಿಮಾನದಲ್ಲಿ ಕಳಿತುಕೊಂಡು ಪ್ರಯಾಣ ಮಾಡಿದ್ದ 11A ಸೀಟ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹೆಚ್ಚಿನ ಹಣ ಕೊಡ್ತೀವಿ, ನಮಗೆ ಅದೇ ಸೀಟ್ ಬೇಕು ಅಂತ ಬೇಡಿಕೆ ಇಡುತ್ತಿದ್ದಾರೆ. ಎಮರ್ಜೆನ್ಸಿ ಎಕ್ಸಿಟ್ ಬಳಿಯೇ ಇರೋದ್ರಿಂದ ಡಿಮ್ಯಾಂಡ್ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ