/newsfirstlive-kannada/media/post_attachments/wp-content/uploads/2025/01/DOG-AI.jpg)
/newsfirstlive-kannada/media/post_attachments/wp-content/uploads/2025/01/PRINCESS-DOG2.jpg)
ಸಾಕೋದಾಗಿರಬಹುದು ಅಥವಾ ಬೀದಿಲೀ ಓಡಾಡೋ ಶ್ವಾನಗಳಾಗಿರಬಹುದು. ಅದಕ್ಕೆ ನಿಷ್ಠೆ ಅನ್ನೋದು ಹುಟ್ಟಿದಾಗಲೇ ಶುರುವಾಗುತ್ತೆ. ಶ್ವಾನಗಳು ಬೆಳಿತಾ ಬೆಳಿತಾ, ನಿಷ್ಠೆಯಿಂದ ಸ್ವಾಭಿಮಾನಕ್ಕೆ ಟರ್ನ್ ಆಗುತ್ತೆ. ನಿಷ್ಠೆಗೆ, ಸ್ವಾಭಿಮಾನಕ್ಕೆ ಹಾಗೂ ಪ್ರೀತಿಗೆ ಹೆಸರುವಾಸಿ ಶ್ವಾನಗಳು. ಇದಕ್ಕೆ ಸಾಕ್ಷಿ ಎಂಬಂತೆ ಸಾಕಷ್ಟೂ ಸುದ್ದಿಗಳನ್ನ ನೋಡ್ತಾನೇ ಇರ್ತೀವಿ. ಮೂ ಡೇಂಗ್ ಅನ್ನೋ ಶ್ವಾನ ಅಂತಹದ್ದಕ್ಕೆ ಉದಾಹರಣೆಯಾಗಿದೆ. ಆ ಶ್ವಾನದ ಜೀವನದ ಅತೀ ದೊಡ್ಡ ದುಃಖಕ್ಕೆ ಈಗ ಅಂತ್ಯ ಸಿಕ್ಕಿದೆ. ವಜಿರಲೋಂಗ್‌ಕಾರ್ ರಾಜನ ಸೋದರ ಸೊಸೆ ಹಾಗೂ ಥೈಲ್ಯಾಂಡ್‌ನ ರಾಜಕುಮಾರಿ ಸಿರಿಭಾ ಚುಡಾಬೋರ್ನ್ ಮೂ ಅವರು, ಶ್ವಾನ ಮೂ ಡೇಂಗ್‌ನನ್ನು ದತ್ತು ತೆಗೆದುಕೊಂಡಿದ್ದಾರೆ.
ಮೂ ಡೇಂಗ್‌ನ ಕಥೆ.. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತನ್ನ ಮಾಲೀಕ ಸಾವನ್ನಪ್ಪಿದ್ದಾನೆಂದು ಗೊತ್ತಿಲ್ಲದೇ, 7-Eleven ಅಂಗಡಿಯ ಮುಂದೆ ಕಾಯ್ತಾ ಇತ್ತು. ನನ್ನ ಯಜಮಾನ ಬರ್ತಾನೆ ಅನ್ನೋ ನಿರೀಕ್ಷೆಯಲ್ಲಿ ಬಾಗಿಲ ಹತ್ರಾನೇ ಇತ್ತು. ದಿನಗಳು ಉರುಳಿದಂತೆ, ಮೂ ಡೇಂಗ್‌ನ ಕಥೆ ಗೊತ್ತಾದ ಜನರು, ಶ್ವಾನಕ್ಕೆ ಆರೈಕೆ ಮಾಡೋಕೆ ಶುರು ಮಾಡಿದ್ರು. 7-Eleven ಅಂಗಡಿಯ ಸಿಬ್ಬಂದಿ ಊಟ ಕೊಡ್ತಿದ್ರು. ಜೊತೆಗೆ ಆಟ ಆಡಿಸ್ತಿದ್ರು. ಆಟ, ಊಟ ಕೊಡ್ತಿದ್ರೂ ಡೇ ಮೂಂಗ್ಗೆ ಮಾತ್ರ, ತನ್ನ ಯಜಮಾನ ವಾಪಸ್ ಆಗದೇ ಇರೋದು ಮತ್ತಷ್ಟೂ ದುಃಖಕ್ಕೆ ಕರೆದುಕೊಂಡು ಹೋಯ್ತು.
ವೈರಲ್ ಆಗಿದ್ದ ಮೂ ಡೇಂಗ್ ಶ್ವಾನದ ಕಥೆ, ಥಾಯ್ಲೆಂಡ್ನ ಪ್ರಿನ್ಸೆಸ್ ಸಿರಿಭಾ ಅವರ ಗಮನಕ್ಕೆ ಬಂತು. ಅದಕ್ಕೋಸ್ಕರ, ಆ ಶ್ವಾನವನ್ನ ದತ್ತು ತೆಗೆದುಕೊಳ್ಳೋಣ ಅಂತ ನಿರ್ಧಾರ ಮಾಡಿದ್ರು. ತಮ್ಮ ಫೇಸ್ಬುಕ್ನಲ್ಲಿ ಈ ವಿಷಯವನ್ನು ಸಿರಿಭಾ ಅವರೇ ಹೇಳಿಕೊಂಡಿದ್ರು. ಮೂ ಡೇಂಗ್ ಶ್ವಾನದ ಅಭಿಮಾನಿಗಳು, ಅವನ ಬಗ್ಗೆ ಇನ್ಮುಂದೆ ಚಿಂತೆ ಮಾಡೋ ಅವಶ್ಯಕತೆ ಇಲ್ಲ ಅಂತ ಸಿರಿಭಾ ಹೇಳಿದ್ರು. ಅವನ ದೈಹಿಕ ಸ್ಥಿತಿ ಮಾತ್ರ ಅಲ್ಲ, ಅವನ ಮಾನಸಿಕ ಸ್ಥಿತಿ ಕೂಡ ನನಗೆ ಗೊತ್ತಾಯ್ತು ಅಂತ ಸಿರಿಭಾ ಹೇಳಿದ್ದಾರೆ.
ಈ ಮೂ ಡೇಂಗ್ ಶ್ವಾನದ ಕಥೆ, ಪಾನ್‌ನ ಹಚಿಕೋ ಕಥೆಯನ್ನು ನೆನಪಿಸುತ್ತೆ. ಯಜಮಾನ ಮೃತಪಟ್ಟಿದ್ದು ಗೊತ್ತಿಲ್ಲದೇ, ಒಂದಲ್ಲ.. ಎರಡಲ್ಲ.. ಹತ್ತು ವರ್ಷಗಳ ಕಾಲ ಮಾಲೀಕ ಬರ್ತಾನೆ ಅಂತ ಕಾದು ಕಾದು ನಿಷ್ಠಾವಂತ 'ಹಚಿಕೋ' ಶ್ವಾನ, ಜಪಾನ್‌ನಲ್ಲಿ ತುಂಬಾ ಸುದ್ದಿಯಾಗಿತ್ತು. ಹಾಲಿವುಡ್ನಲ್ಲಿ ಈ ಹಚಿಕೋ ಶ್ವಾನದ ಬಗ್ಗೆ ಸಿನಿಮಾ ಕೂಡ ಬಂದಿದೆ.
ಹಚಿಕೋ ಒಂದು ಅನಾಥ ಶ್ವಾನ. ಇದು ಜಪಾನ್ನ ಒಬ್ಬ ಕೃಷಿ ಪ್ರೊಫೆಸರ್ ಕೈಗೆ ಸಿಕ್ಕಿತ್ತು. ಅವರ ಆರೈಕೆಯಲ್ಲೇ ಬೆಳೆದ ಶ್ವಾನ ಹಚಿಕೋ, ಪ್ರತಿದಿನವೂ ಆ ಪ್ರೊಫೆಸರ್ ಓಡಾಡ್ತಿದ್ದ ರೈಲಿನಲ್ಲಿ ಸಿಕ್ಕಿತ್ತು. ಅವರ ಆರೈಕೆ, ಪ್ರೀತಿಯಲ್ಲಿ ಬೆಳೆದ ಹಚಿಕೋ, ಪ್ರೊಫೆಸರ್, ದಿನಾ ಕೆಲಸ ಮುಗಿಸಿಕೊಂಡು ವಾಪಸ್ ಆಗೋವರೆಗೂ ಕಾಯ್ತಾನೇ ಇತ್ತು. ಒಂದಿನ, ಕಾಲೇಜಿನಲ್ಲಿ ಪ್ರೊಫೆಸರ್ ಸಾವನ್ನಪ್ಪಿದ್ರು. ಅದ್ರಿಂದ ರೈಲಿನಲ್ಲಿ ಅವರು ಬರಲೇ ಇಲ್ಲ. ತನ್ನ ಯಜಮಾನ ಮತ್ತೆ ಬಂದೇ ಬರ್ತಾನೆ ಅಂತ ಬರೋಬ್ಬರಿ 10 ವರ್ಷಗಳ ಕಾಲ ಕಾಯ್ತಿದ್ದ ಹಚಿಕೋ, ಅಲ್ಲೇ ಒಂದು ದಿನ ಅದೇ ಟ್ರೈನ್ನಲ್ಲಿ ಸಾವನ್ನಪ್ಪಿತ್ತು. ಇಂದಿಗೂ ಈ ಶ್ವಾನದ ಕಥೆ ಜಪಾನ್‌ನಲ್ಲಿ ಚಾಲ್ತಿಯಲ್ಲಿದೆ. ಇದ್ರ ಜೊತೆಗೆ, ಈ ಹಚಿಕೋ ಶ್ವಾನದ ನೆನಪಿಗಾಗಿ ಪ್ರತಿಮೆಯನ್ನು ಕೆತ್ತಲಾಗಿದೆ. 2023ರಲ್ಲಿ ನೂರನೇ ವರ್ಷಾಚರಣೆಯನ್ನು ಮಾಡಿತ್ತು.
ಇಂದಿಗೆ ಟೋಕಿಯೋದ ಶಿಬುಯಾ ಅಂತರಾಷ್ಟ್ರೀಯ ರೈಲ್ವೆ ನಿಲ್ದಾಣದಲ್ಲಿ ಹಚಿಕೋನ ಕಂಚಿನ ಪ್ರತಿಮೆ ಇದೆ. ಯಾರೇ ಟೋಕಿಯೋಗೆ ಬಂದ್ರೂ, ಹಚಿಕೋ ಶ್ವಾನದ ಕಥೆ ಕೇಳಿ ಜನ ಕಣ್ಣೀರಾಕ್ತಾರೆ. ಪ್ರಾಣಿಗಳು ಗುಣಿದಲಿ ಮೇಲು ಅನ್ನೋ ಮಾತು, ಹಳೇದಾದ್ರೂ ಮುನ್ನುಗ್ಗುತ್ತಿರೋ ಈ ಜನರೇಷನ್ಗೆ ಒಳ್ಳೆ ಮೆಸೇಜ್ ಅಂತಾನೇ ಹೇಳಬಹುದು. ಥೈಲ್ಯಾಂಡ್‌ನ ಮೂ ಡೇಂಗ್ ಹಾಗೂ ಜಪಾನ್ನ ಹಚಿಕೋ ಶ್ವಾನದ ಕಥೆ ಮಾತ್ರ ಎಂಥವರಿಗೂ ಒಂದು ಕ್ಷಣ ಕಣ್ಣೀರು ಬರುತ್ತೆ. ಈ ಎರಡು ಶ್ವಾನಗಳು ಬರೀ ಹುಟ್ಟಿಲ್ಲ.. ಈ ಭೂಮಿ ಮೇಲೆ ಹುಟ್ಟಿ, ತನ್ನ ನಿಷ್ಠೆ ಹಾಗೂ ಸ್ವಾಭಿಮಾನದ ಪ್ರೀತಿಯನ್ನ ಮತ್ತಷ್ಟೂ ಗಟ್ಟಿಗೊಳಿಸಿದೆ. ಏನೇ ಆದ್ರೂ ಥೈಲ್ಯಾಂಡ್‌ನ ರಾಜಕುಮಾರಿಯ ಮಾನವೀಯತೆ ಗುಣಕ್ಕೆ ಥ್ಯಾಂಕ್ಯೂ ಪ್ರಿನ್ಸೆಸ್ ಅಂತ ಜನ ಹೇಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ