ಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ್ದು ಯಾರೋ, ಬೆನ್ನು ತಟ್ಟಿಕೊಂಡಿದ್ದು ಮಾತ್ರ ಟ್ರಂಪ್​​..!

author-image
Ganesh
Updated On
ಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ್ದು ಯಾರೋ, ಬೆನ್ನು ತಟ್ಟಿಕೊಂಡಿದ್ದು ಮಾತ್ರ ಟ್ರಂಪ್​​..!
Advertisment
  • ಥೈಲ್ಯಾಂಡ್-ಕಾಂಬೋಡಿಯಾ ಮಧ್ಯೆ ಕದನ ವಿರಾಮ
  • ಮಲೇಷ್ಯಾ ಪ್ರಧಾನಿ ನೇತೃತ್ವದಲ್ಲಿ ಯುದ್ಧಕ್ಕೆ ತಿಲಾಂಜಲಿ​
  • ಕದನ ವಿರಾಮದಲ್ಲಿ ಡೊನಾಲ್ಡ್ ಟ್ರಂಪ್ ಕ್ರೆಡಿಟ್‌!

ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ಪುರಾತನ ದೇವಾಲಯಕ್ಕಾಗಿ ಯುದ್ಧ ಶುರುವಾಗಿತ್ತು. ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನ ಹೆಚ್ಚಿಸಿತ್ತು. ಈ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲೂ ಕೂಡಾ ಡೊನಾಲ್ಡ್ ಟ್ರಂಪ್​ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಥೈಲ್ಯಾಂಡ್-ಕಾಂಬೋಡಿಯಾ ಮಧ್ಯೆ ಕದನ ವಿರಾಮ

ಥೈಲ್ಯಾಂಡ್-ಕಾಂಬೋಡಿಯಾ ದೇಶಗಳು ದ್ವೇಷವನ್ನ ಮರೆತು ಕದನ ವಿರಾಮ ಘೋಷಿಸಿವೆ. ಐದು ದಿನಗಳ ಯುದ್ಧವನ್ನ ನಿಲ್ಲಿಸಿ ಕಾಂಪ್ರೊಮೈಸ್​ ಆಗಿವೆ. ಮಲೇಷಿಯಾದ ನಾಯಕ ಅನ್ವರ್ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಥೈಲ್ಯಾಂಡ್ ನಾಯಕರು.. ಕಾಂಬೋಡಿಯಾ ದೇಶದ ಪ್ರತಿನಿಧಿಗಳು ಭಾಗಿಯಾಗಿದ್ರು.. ಅನೇಕ ಚರ್ಚೆಗಳ ನಂತರ ಡಿಸಿಷನ್​ಗೆ ಬಂದು, ಕದನ ವಿರಾಮ​ ಘೋಷಣೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಮತ್ತು ಥಾಯ್ ಹಂಗಾಮಿ ಪ್ರಧಾನಿ ಫುಮ್ಥಾಮ್ ವೆಚಾಯಾಚೈ ಮಲೇಷಿಯಾದ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಹ್ಯಾಂಡ್ ಶೇಕ್​ ಮಾಡಿದ್ರು. ಬೇಷರತ್ತಾದ ಕದನ ವಿರಾಮಕ್ಕೆ ಒಪ್ಪಿಕೊಂಡ ಉಭಯ ನಾಯಕರ ನಡೆಗೆ ಅನೇಕ ರಾಷ್ಟ್ರಗಳು ಥಂಬ್ಸ್ ಅಪ್ ಕೊಟ್ರು.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿ ಸುದ್ದಿ.. ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಬೊಮ್ಮಾಯಿ ಮಹತ್ವದ ಮಾಹಿತಿ..!

publive-image

ಕದನ ವಿರಾಮದಲ್ಲಿ ಡೊನಾಲ್ಡ್ ಟ್ರಂಪ್ ಕ್ರೆಡಿಟ್‌!

ಎಲ್ಲೇ ಯುದ್ಧ ನಡೆದ್ರೂ ಮಧ್ಯಸ್ಥಿಕೆ ಎಂಬ ಮೂಗು ತೂರಿಸೋ ಅಮೆರಿಕ ಈ ಯುದ್ಧದಲ್ಲೂ ಅದೇ ಗೀಳನ್ನ ಮುಂದುವರಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಯುದ್ಧ ನಿಲ್ಲಿಸಿದ್ದು ಅಂತ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ತಮಗೆ ತಾವೇ President of Peace​ ಅಂತ ಕರೆದುಕೊಂಡಿದ್ದಾರೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ ನಂಬಿ ಲಿವರ್ ಕಳೆದುಕೊಂಡ ಮಹಿಳೆ.. ಅಂಥದ್ದೇನಾಯ್ತು..?

ಪ್ರೆಸಿಡೆಂಟ್ ಆಫ್ ಪೀಸ್!

ಇದು ತುಂಬಾ ಕೆಟ್ಟ ಯುದ್ಧವಾಗುತ್ತಿತ್ತು. ಸುಮಾರು ವರ್ಷಗಳ ಕಾಲ ನಡೆಯುತ್ತಿತ್ತು. ಲಕ್ಷಾಂತರ ಜನರನ್ನ ಕೊಲ್ಲುತಿತ್ತು. ನಾವು ಯುದ್ಧವನ್ನ ಕೊನೆಗೊಳಿಸಿದ್ದೇವೆ. ಈ ಬಗ್ಗೆ ನಾವು ತುಂಬಾ ಸಂತೋಷಪಡುತ್ತೇವೆ. ಕಳೆದ ಆರು ತಿಂಗಳಲ್ಲಿ ನಾವು ಅನೇಕ ಯುದ್ಧಗಳನ್ನ ನಿಲ್ಲಿಸಿದ್ದೇವೆ. ಇದನ್ನೆಲ್ಲಾ ನೋಡಿದ್ರೆ ನಮಗೆ ಪ್ರೆಸಿಡೆಂಟ್ ಆಫ್ ಪೀಸ್ ಅಂತ ಕರೆದುಕೊಳ್ಳಲು ಹೆಮ್ಮೆಯಾಗುತ್ತಿದೆ-ಡೊನಾಲ್ಡ್​ ಟ್ರಂಪ್​, ಅಮೆರಿಕ ಅಧ್ಯಕ್ಷ

ಕಾಂಬೋಡಿಯನ್-ಥೈಲ್ಯಾಂಡ್ 35 ಜನರು ಪ್ರಾಣ ಕಳೆದುಕೊಂಡಿದ್ರು.. ಸುಮಾರು 2 ಲಕ್ಷ ಜನರ ಸ್ಥಳಾಂತರವಾಗಿತ್ತು. ಇದಕ್ಕೆಲ್ಲ ಈಗ ಬ್ರೇಕ್​ ಅನ್ನೋ ಹಾಗೆ ಸೀಸ್​​ ಫೈರ್​ ಹಾಕಲಾಗಿದೆ. ಇದರಲ್ಲೂ ಅಮೆರಿಕ ಅಧ್ಯಕ್ಷ ಟ್ರಂಪ್​ ಬಂಡಲ್​ ಬಡಾಯಿ ಇಲ್ಲೂ ನಿಲ್ಲದಾಗಿದೆ. ಅದೇನೆ ಇರಲಿ ವಿಶ್ವದ ಆರು ಕಡೆ ಸೀಸ್​ ಫೈರ್​ ಮಾಡಿದ್ದು ನಾನೇ ಅಂತ ಜಂಬ ಕೊಚ್ಚಿಕೊಳ್ತಿರೋ ಟ್ರಂಪ್​, ಸುಳ್ಳಿನ ಪುಂಗಿ ಊದಲು ಶುರು ಮಾಡಿದ್ದಾರೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ ನಂಬಿ ಲಿವರ್ ಕಳೆದುಕೊಂಡ ಮಹಿಳೆ.. ಅಂಥದ್ದೇನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment