/newsfirstlive-kannada/media/post_attachments/wp-content/uploads/2024/06/VIJA_TRISHA.jpg)
ಬಹುಬಾಷಾ ನಟಿ ತ್ರಿಶಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸುವುದು ಕಡಿಮೆಯಾದರು ಇನ್ನು 18ರ ಯಂಗ್​ ಗರ್ಲ್​​ನಂತೆ ಕಾಣಿಸುತ್ತಾರೆ. ಆಗಾಗ ಇವರು ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತಾರೆ. ತಮಿಳು ಸ್ಟಾರ್ ನಟ ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾದಲ್ಲಿ ತ್ರಿಶಾ ಅದ್ಭುತವಾಗಿ ಅಭಿನಯ ಮಾಡಿದ್ದರು. ಇದೀಗ ಹೊಸ ವಿಷ್ಯ ಏನಂದರೆ ತ್ರಿಶಾ ಹಾಗೂ ದಳಪತಿ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.
ನಟಿ ತ್ರಿಶಾ ಕೃಷ್ಣನ್ ಮತ್ತು ದಳಪತಿ ವಿಜಯ್ ಡೇಟಿಂಗ್ ಮಾಡುತ್ತಿದ್ದಾರಾ ಹೀಗೊಂದು ಅನುಮಾನ ಅಭಿಮಾನಿ ವಲಯದಲ್ಲಿ ಕಾಡುತ್ತಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಫೋಟೋಗಳು ಎಂದು ಹೇಳಬಹುದು. ದಳಪತಿ ವಿಜಯ್ ಮೊನ್ನೆ ಮೊನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
View this post on Instagram
ಈ ಸಂದರ್ಭದಲ್ಲಿ ತ್ರಿಶಾ ಕೃಷ್ಣನ್ ಅವರು ನಟ ವಿಜಯ್​ಗೆ ಶುಭ ಹಾರೈಸಿದ್ದರು. ಇದೇ ಅಭಿಮಾನಿಗಳಲ್ಲಿ ಅನುಮಾನದ ವಾಸನೆ ಬರುವಂತೆ ಮಾಡಿದೆ. ವಿಜಯ್ ತಮ್ಮ ಮುಂಬರುವ ಚಿತ್ರ GOATಗೆ ಸಜ್ಜಾಗುತ್ತಿದ್ದಾರೆ. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ವೆಂಕಟ್ ಪ್ರಭು ನಿರ್ದೇಶಿಸುವ ಮತ್ತು AGS ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಮುಂಬರುವ ಭಾರತೀಯ ತಮಿಳು ಭಾಷೆಯ ವೈಜ್ಞಾನಿಕ ಆಕ್ಷನ್ ಮೂವಿಗಳು ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us