ದಳಪತಿ ವಿಜಯ್‌ಗೆ ಬಿಗ್ ಶಾಕ್‌.. ಮುಸ್ಲಿಂ ಸಮುದಾಯದ ಬೆಂಬಲ ಇಲ್ಲ ಎಂದು ಫತ್ವಾ! ಕಾರಣವೇನು?

author-image
admin
Updated On
ದಳಪತಿ ವಿಜಯ್‌ಗೆ ಬಿಗ್ ಶಾಕ್‌.. ಮುಸ್ಲಿಂ ಸಮುದಾಯದ ಬೆಂಬಲ ಇಲ್ಲ ಎಂದು ಫತ್ವಾ! ಕಾರಣವೇನು?
Advertisment
  • ದಳಪತಿ ವಿಜಯ್‌ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಸಮುದಾಯ
  • ಇಫ್ತಾರ್ ಕೂಟ ಆಯೋಜನೆ ಮಾಡಿ ವಿರೋಧ ಕಟ್ಟಿಕೊಂಡ ವಿಜಯ್
  • ವಿಜಯ್ ನಾಯಕತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬಿಗ್ ಶಾಕ್‌!

ತಮಿಳು ಚಿತ್ರರಂಗದ ಖ್ಯಾತ ನಟ, ಅಭಿಮಾನಿಗಳ ದಳಪತಿ ವಿಜಯ್‌ ವಿರುದ್ಧ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ವಿಜಯ್‌ ವಿರುದ್ಧ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ವಿಜಯ್‌ ಪಕ್ಷಕ್ಕೆ ಇದರಿಂದ ಬಿಗ್ ಶಾಕ್ ಎದುರಾಗಿದೆ.

ಉತ್ತರಪ್ರದೇಶದ ಅಖಿಲ ಭಾರತ ಮುಸ್ಲಿಂ ಜಮಾಅತ್ ಮೌಲ್ವಿ ನಟ ವಿಜಯ್ ವಿರುದ್ಧ ಫತ್ವಾ ಹೊರಡಿಸಿದೆ. ತಮಿಳುನಾಡಿನಲ್ಲಿ ವಿಜಯ್ ಅವರಿಗೆ ನಮ್ಮ ಸಮುದಾಯದ ಬೆಂಬಲ ಇಲ್ಲ ಅನ್ನೋ ಆದೇಶವನ್ನು ನೀಡಿದೆ.

publive-image

ಇಫ್ತಾರ್ ತಂದ ಫಜೀತಿ!
ಕ್ರಿಶ್ಚಿಯನ್ ಧರ್ಮದವರಾದ ಜೋಸೆಫ್‌ ವಿಜಯ್‌ ಅವರು ರಾಜಕೀಯಕ್ಕೆ ಬಂದ ಮೇಲೆ ಇತ್ತೀಚೆಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಆ ಇಫ್ತಾರ್ ಈಗ ವಿವಾದಕ್ಕೆ ಗುರಿಯಾಗಿದೆ. ವಿಜಯ್ ಆಯೋಜನೆ ಮಾಡಿದ್ದ ಇಫ್ತಾರ್‌ನಲ್ಲಿ ಸಮಾಜಘಾತುಕ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿತ್ತು. ಇಫ್ತಾರ್ ಸಂಪೂರ್ಣವಾಗಿ ಮುಸ್ಲಿಂ ವಿರೋಧಿ ಆಗಿತ್ತು ಎಂದು ಆರೋಪಿಸಲಾಗಿದೆ.


">April 17, 2025

ಇದನ್ನೂ ಓದಿ: ನಟ ವಿಜಯ್ ಐಷಾರಾಮಿ ಮನೆ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ.. ಕಾರಣ ಇದೆನಾ? 

ನಟ ವಿಜಯ್ ಅವರು ತಮ್ಮ ಇಫ್ತಾರ್‌ಗೆ ರಾಜಕೀಯ ಲಾಭಕೋಸ್ಕರ ಮದ್ಯವ್ಯಸನಿಗಳು, ಜೂಜುಕೋರರನ್ನು ಆಹ್ವಾನ ಮಾಡಿದ್ದರು. ಇದರಿಂದ ವಿಜಯ್ ಅವರು ಮುಸ್ಲಿಂ ಸಮುದಾಯದ ನಂಬಿಕೆಗೆ ಅರ್ಹರಲ್ಲ. ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಫತ್ವಾ ಹೊರಡಿಸಲಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸುನ್ನಿ ಮುಸ್ಲಿಂ ಮೌಲ್ವಿ ಮೌಲಾನಾ ಶಹಾಬುದ್ದೀನ್ ರಜ್ವಿ ತನ್ನ ಫತ್ವಾದಲ್ಲಿ ಈ ಆದೇಶ ನೀಡಿದ್ದಾರೆ. ಈ ಫತ್ವಾದಿಂದ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment