/newsfirstlive-kannada/media/post_attachments/wp-content/uploads/2024/12/VIJAY-TRISHA.jpg)
ಗಾಸಿಪ್​ ಪ್ರಪಂಚದಲ್ಲಿ ಚಿತ್ರರಂಗದ ತಾರೆಯರು ಬದುಕಲೇಬೇಕಾದ ಪರಿಸ್ಥಿತಿ ತುಂಬಾನೇ ಕಾಮನ್. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಸಣ್ಣ ಸ್ಟೆಪ್​ ಟ್ರೋಲಿಗರಿಗೆ ಆಹಾರ ಸಿಕ್ಕಂತೆ. ಅಂಥದ್ದೇ ಒಂದು ಗಾಸಿಪ್, ಗ್ಲಾಮರ್ ಗೊಂಬೆ ತ್ರಿಶಾ ಮತ್ತು ಇಳಯ ದಳಪತಿ ವಿಜಯ್ ಬಗ್ಗೆ ಎಲ್ಲೆಡೆ ಹರಿದಾಡುತ್ತದೆ.
ತ್ರಿಷಾ ಮತ್ತು ಇಳಯ ದಳಪತಿ ಡೇಟಿಂಗ್​​​ ಮಾಡ್ತಿದ್ದಾರೆ ಅನ್ನೋ ಮಾತು ಇಂದು, ನಿನ್ನೆಯದ್ದಲ್ಲ. ವರ್ಷಾನುವರ್ಷಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಒಂದೊಂದು ಬಾರಿ ಪತ್ನಿ ಸಂಗೀತಾಗೆ ವಿಚ್ಛೇದನ ಕೊಡ್ತಾರೆ ಅನ್ನೋ ಮಾತು ಆಗಾಗ ಸದ್ದು ಮಾಡಿದ್ದು ಇದೆ.
ಸಿನಿಮಾ ನಂತರ ರಾಜಕೀಯಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್ ಇತ್ತೀಚೆಗೆ ಒಂದಷ್ಟು ಗಾಸಿಪ್‌ಗಳಿಗೆ ಆಹಾರ ಆಗಿದ್ದಾರೆ. ಅದರಂತೆ ವಿಜಯ್ ಮತ್ತು ತ್ರಿಷಾ ಇಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿ ಅಕ್ಕಪಕ್ಕದಲ್ಲಿ ವಾಸವಾಗಿದ್ದಾರೆ ಎಂಬ ಸುದ್ದಿ ಇತ್ತು. ಈಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವಂತಹ ಘಟನೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
/newsfirstlive-kannada/media/post_attachments/wp-content/uploads/2024/12/VIJAY-TRISHA-1.jpg)
ಡೇಟಿಂಗ್ ವದಂತಿ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಜೋಡಿ!
ವಿಜಯ್ ಈಗ ತ್ರಿಷಾ ಜೊತೆ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಗೋವಾದಲ್ಲಿ ಡಿಸೆಂಬರ್ 12 ರಂದು ನಡೆದ ಕೀರ್ತಿ ಸುರೇಶ್ ಮದುವೆಗೆ ತಮ್ಮ ಪತ್ನಿ ಸಂಗೀತಾ ಜೊತೆ ತೆರಳದೇ ತ್ರಿಷಾ ಜೊತೆ ಪ್ರತ್ಯೇಕವಾಗಿ ತೆರಳಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್ ಪಾಯಿಂಟ್ ಬಳಿ ಇಬ್ಬರು ಇರುವ ಫೋಟೊಸ್​ ವೈರಲ್ ಆಗಿವೆ. ಫ್ಲೈಟ್ ಟಿಕೆಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಐಕಾನ್​ ಸ್ಟಾರ್ ಬಂಧನದ ಹಿಂದೆ ರಾಜಕೀಯನಾ.. ಅಲ್ಲು ಅರ್ಜುನ್- CM ರೇವಂತ್ ರೆಡ್ಡಿ ಮಧ್ಯೆ ಆಗಿದ್ದೇನು?
ಪತ್ನಿ ಸಂಗೀತಾಗೆ ವಿಚ್ಛೇದನ ನೀಡಿ ವಿಜಯ್ ತ್ರಿಷಾ ಜೊತೆ ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿತ್ತು. ಇದೆಲ್ಲದರ ನಡುವೆ we stand with sangeeth ಅನ್ನೋ ಹ್ಯಾಶ್​ ಟ್ಯಾಗ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡ್ತಿದೆ. ವಿಜಯ್​ ಅಭಿಮಾನಿಗಳು ನಾವು ಅತ್ತಿಗೆ ಸಂಗೀತಾ ಪರ ಅಂತ ಕಮೆಂಟ್​ಗಳ ಸುರಿಮಳೆಗೈತಿದ್ದಾರೆ.
ಇದನ್ನೂ ಓದಿ:ಜಾಮೀನು ಸಿಕ್ಕ ಮೇಲೆ ನಟ ದರ್ಶನ್‌ಗೆ ಸರ್ಜರಿ ಆಗುತ್ತಾ? ಇಲ್ವಾ? ಡೆವಿಲ್‌ಗೆ ಬಿಗ್ ಟೆನ್ಷನ್!
ವಿಜಯ್ ಮತ್ತು ಸಂಗೀತಾ ದಾಂಪತ್ಯದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಗಂಡ ಹೆಂಡತಿ ನಡುವೆ ನಿಜಕ್ಕೂ ತ್ರಿಶಾ ಬಂದಿದ್ದಾರಾ? ಗೊತ್ತಿಲ್ಲ.. ಆದ್ರೆ, ಅನುಮಾನದ ಮೋಡ ಅಂತು ಕಟ್ಕೊಂಡಿದೆ.. ಆದ್ರೆ, ಈ ಮೋಡ ಕರಗಿಸುವ ಗೋಜಿಗೆ ಇಬ್ಬರೂ ಹೋಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us