newsfirstkannada.com

ಮದುವೆಯಾದ ಮಹಿಳೆ ಜೊತೆ ಲವ್ವಿ-ಡವ್ವಿ.. ಕೋಪಗೊಂಡ ಸಹೋದರ ಯುವಕನನ್ನ ಕೊಂದು ಕ್ವಾರಿಗೆ ಎಸೆದ

Share :

Published June 3, 2024 at 5:59am

  ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕ್ವಾರಿಗೆ ಎಸದೆ ಕೀಚಕರು

  ಫೋನ್ ಮಾಡಿ ಕರೆಯಿಸಿಕೊಂಡು ಜಗಳ ತೆಗೆದು ಕೊಲೆ ಮಾಡಿದ

  ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದೇ ರೋಚಕ ಕಹಾನಿ

ಮುಂಬೈ: ವಿವಾಹಿತ ಮಹಿಳೆಯನ್ನು ಯುವಕನೊಬ್ಬ ಪ್ರೀತಿಸಿದ ಕಾರಣಕ್ಕಾಗಿ ಆಕೆಯ ಸಹೋದರ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಭಿವಂಡಿಯಲ್ಲಿ ನಡೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತನನ್ನ ಆನಂದ್ ಗುಪ್ತಾ (25) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದವರು ಸುಜಿತ್ ಗಾಯಕ್ವಾಡ್ (25) ಹಾಗೂ ಈತನ ಮೂವರು ಸಹಚರರು ಎಂದು ಹೇಳಲಾಗಿದೆ. ಪ್ರಮುಖ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಮೃತ ಆನಂದ್ ಮುಂಬೈ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಭಿವಂಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ತನ್ನ ಸಹೋದರಿಯನ್ನು ಆನಂದ್ ಪ್ರೀತಿಸುತ್ತಿದ್ದಕ್ಕಾಗಿ ಮಾತಾಡಬೇಕು ಎಂದು ಫೋನ್ ಮಾಡಿ ಭಿವಂಡಿಯ ಲೋಧಾ ಧಾಮ್‌ ಬಳಿಗೆ ಕರೆಯಿಸಿದ್ದನು. ಈ ವೇಳೆ ಇಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದು ಗಲಾಟೆ ಅತಿರೇಕಕ್ಕೆ ಹೋದಾಗ ಸುಜಿತ್, ಆನಂದ್​ನನ್ನ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವಕಪ್​​​ನ ಮೊದಲ ಪಂದ್ಯದಲ್ಲೇ ಅಮೆರಿಕ ಸೆನ್ಸೇಷನ್.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಆ್ಯರೋನ್ ಜೇನ್ಸ್​

ಬಳಿಕ ಆರೋಪಿಗಳು ಮೃತದೇಹವನ್ನು ಕಾರಿನಲ್ಲಿ ಪುಣೆಗೆ ತೆಗೆದುಕೊಂಡು ಹೋಗಿ ಅಲ್ಲಿ ಕಲ್ಲು ಕ್ವಾರಿಯಲ್ಲಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಮೃತನ ಸಂಬಂಧಿಕರು ನಾರ್ಪೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಕರಣದ ಮುಖ್ಯ ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್​ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದೆ. ಇನ್ನು ತಲೆಮರೆಯಿಸಿಕೊಂಡಿರುವ ಉಳಿದ ಮೂವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾದ ಮಹಿಳೆ ಜೊತೆ ಲವ್ವಿ-ಡವ್ವಿ.. ಕೋಪಗೊಂಡ ಸಹೋದರ ಯುವಕನನ್ನ ಕೊಂದು ಕ್ವಾರಿಗೆ ಎಸೆದ

https://newsfirstlive.com/wp-content/uploads/2024/04/Crime-1.jpg

Load More