ಕರುಳ ಬಳ್ಳಿಗೆ ಕುಡಿಯ ಸಂಕಟ ಅದ್ಹೇಗೆ ಗೊತ್ತಾಯ್ತೋ.. ಸುಟ್ಟ ಕರಕಲಾಗ್ತಿದ್ದ ಮಗನ ಬಳಿ ಬಿದ್ದಿದ್ದ ಮೊಬೈಲ್​ ರಿಂಗಣಿಸಿತ್ತು..

author-image
Veena Gangani
Updated On
ಕರುಳ ಬಳ್ಳಿಗೆ ಕುಡಿಯ ಸಂಕಟ ಅದ್ಹೇಗೆ ಗೊತ್ತಾಯ್ತೋ.. ಸುಟ್ಟ ಕರಕಲಾಗ್ತಿದ್ದ ಮಗನ ಬಳಿ ಬಿದ್ದಿದ್ದ ಮೊಬೈಲ್​ ರಿಂಗಣಿಸಿತ್ತು..
Advertisment
  • ಏರ್ ಇಂಡಿಯಾ ಘೋರ ದುರಂತದಲ್ಲಿ ಪ್ರಾಣಬಿಟ್ಟ 265 ಮಂದಿ
  • ಒಂದ್ಕಡೆ ಸುಟ್ಟು ಕರಕಲಾಗ್ತಿದ್ದ ಮಗ, ಮತ್ತೊಂದೆಡೆ ಅಮ್ಮನಿಂದ ಕರೆ
  • ತನ್ನ ಮಗ ಇನ್ನಿಲ್ಲ ಅನ್ನೋದು ಆ ತಾಯಿಗೆ ನಂಬಲು ಅಸಾಧ್ಯವಾಗಿತ್ತು

ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್​ ರಮೇಶ್ ಮಾತ್ರ ಬದುಕಿ ಉಳಿದಿದ್ದಾರೆ.

ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!

ಆದ್ರೆ ದಿನ ಕಳೆದಂತೆ ಮೃತರ ಹಿಂದಿನ ಕಣ್ಣೀರಿನ ಕಥೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಘೋರ ದುರಂತದಲ್ಲಿ ವಿಮಾನದ ಸಿಬ್ಬಂದಿ ಥಾಣೆ ನಿವಾಸಿ ದೀಪಕ್ ಪಾಠಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

publive-image

ಆದ್ರೆ, ಈ ಅಪಘಾತಕ್ಕೂ ಮುನ್ನ ದೀಪಕ್ ಪಾಠಕ್ ತಮ್ಮ ತಾಯಿಗೆ ಕರೆ ಮಾಡಿ 'ಗುಡ್ ಮಾರ್ನಿಂಗ್' ಅಂತ ಹೇಳಿದ್ದರಂತೆ. ಆದ್ರೆ, ಅಪಘಾತದ ನಂತರ ಅವರ ಫೋನ್ ರಿಂಗಣಿಸುತ್ತಲೇ ಇತ್ತು. ಆದರೆ ಯಾರೂ ಕೂಡ ಉತ್ತರಿಸಲಿಲ್ಲ. ಅವರ ಸಹೋದರಿ ಕೂಡ ಮಾತನಾಡಲು ಸಾಧ್ಯವಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಅವರ ತಾಯಿ ನಿರಂತರವಾಗಿ ಮಗನ ಬಗ್ಗೆಯೇ ಚಿಂತಿಸುತ್ತಿದ್ದರಂತೆ.ಅವನು ಎಲ್ಲಿದ್ದಾನೆ, ಅವನು ಹಿಂತಿರುಗಿದ್ದಾನೆಯೇ ಎಂದು ಕನವರಿಸುತ್ತಿದ್ದರು. ಆದ್ರೆ, ಮಗ ಇನ್ನಿಲ್ಲ ಅನ್ನೋದು ತಾಯಿಗೆ ನಂಬಲು ಅಸಾಧ್ಯವಾಗಿತ್ತು.

publive-image

ಭೀಕರ ವಿಮಾನ ದುರಂತದಲ್ಲಿ ಅಲ್ಲಿದ್ದೋರೆಲ್ಲಾ ಅಕ್ಷರಶಃ ಸುಟ್ಟು ಹೋಗಿದ್ದರು. ಹೆಣದ ರಾಶಿಯ ಬೂದಿ ಮಧ್ಯೆ ಫೋನ್ ರಿಂಗ್ ಆಗ್ತಾನೇ ಇತ್ತು. ಸ್ಕ್ರೀನ್​​​ ಮೇಲೆ ಅಮ್ಮ ಅನ್ನೋ ಹೆಸರು ಎದ್ದು ಕಂಡಿತ್ತು. ಪ್ರತಿ ಸಲ ನೋವಿನಲ್ಲಿದ್ದಾಗ, ಖುಷಿಯಲ್ಲಿದ್ದಾಗ, ಎಡವಿದಾಗ, ಎದ್ದಾಗ, ಬಿದ್ದಾಗ, ನಕ್ಕಾಗ, ಹಸಿದಾಗ, ಕುಸಿದಾಗ, ಕಣ್ಣೀರಿಟ್ಟಾಗ ಅಮ್ಮಾ ಅನ್ನೋ ಇದೇ ದೈವ ನೆನಪಾಗುತ್ತೆ. ಅದೇನೋ ಹೇಳ್ತಾರಲ್ವಾ? ಕಣ್ಣು ಅರಿಯದಿದ್ರೂ ಕರುಳು ಅರಿಯುತ್ತೆ ಅಂತ.. ಹಾಗೆಯೇ ಈ ಮಹಾತಾಯಿಗೆ ತನ್ನ ಮಗ ಸಂಕಷ್ಟದಲ್ಲಿದ್ದಾನೆ ಅನ್ನೋದು ಹೇಗೆ ಗೊತ್ತಾಯ್ತೋ? ಏನೋ? ಕೂಡಲೇ ಫೋನ್ ಮಾಡಿದ್ದಳು. ಆದ್ರೆ ಮಗ ಅಕ್ಷರಶಃ ಬೆಂಕಿಯಲ್ಲಿ ಬೇಯುತ್ತಿದ್ದ. ಬೇಸರದ ಸಂಗತಿ ಏನೆಂದರೆ ದೀಪಕ್ ಪಾಠಕ್ ಅವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment