ಇದೇ ಸಿನಿಮಾದಲ್ಲಿ ಸೋನಲ್-ತರುಣ್ಗೂ ಪ್ಯಾರ್ ಆಗೋಯ್ತು
ಇಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣರಾದ್ರ ಸ್ಟಾರ್ ನಟ
ಗುಟ್ಟಾಗಿ ಉಳಿದಿದ್ದ ಪ್ರೀತಿಯನ್ನು ರಟ್ಟು ಮಾಡಿದ ಡೈರೆಕ್ಟರ್
ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತರೊ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಸದ್ದಿಲ್ಲದೆ ಪ್ರೀತಿಸುತ್ತಿದ್ದ ಈ ಜೋಡಿಗಳು ವಿವಾಹವಾಗುವುದಾಗಿ ಕೊನೆಗೂ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಮೂಲಕ ಇಬ್ಬರು ವಿವಾಹ ಬಂಧಿಯಾಗಲು ರೆಡಿ ಎಂಬ ಮುನ್ಸೂಚನೆ ನೀಡಿದ್ದಾರೆ. ಅಂದಹಾಗೆಯೇ ಈ ಜೋಡಿ ನಡುವೆ ಮೊದಲು ಪ್ರೀತಿ ಹುಟ್ಟಿದ್ದೆಲ್ಲಿ ಗೊತ್ತಾ? ಈ ಸ್ಟೋರಿ ಓದಿ.
ರಾಬರ್ಟ್ ಚಿತ್ರದ ವೇಳೆ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೊ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಚಿತ್ರೀಕರಣ ಸಮಯದಲ್ಲಿ ತರುಣ್ ಮತ್ತು ಸೋನಲ್ಗೆ ನಟ ದರ್ಶನ್ ತಮಾಷೆಗೆ ರೇಗಿಸ್ತಿದ್ದರಂತೆ. ಹೀಗೆ ದಿನಗಳು ಕಳೆದಂತೆ ಈ ತಮಾಷೆಯೇ ಸಿರೀಯಸ್ ಆಯ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: ನಟಿ ಸೋನಲ್ ಕೈಹಿಡಿಯಲಿದ್ದಾರೆ ತರುಣ್.. ಕೊನೆಗೂ ಮದುವೆ ದಿನಾಂಕ ಅನೌನ್ಸ್ ಮಾಡಿದ ‘ಕಾಟೇರ’ ನಿರ್ದೇಶಕ
ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಂತೆ ಪ್ರೀತಿಯ ಬಂಧನ ಬೆಸೆದಿದೆ. ಆದರೆ ಆ ಪ್ರೀತಿ ಬಹಳ ಗುಟ್ಟಾಗಿ ಉಳಿದಿತ್ತಂತೆ. ಕೊನೆಗೆ ತರುಣ್ ಮತ್ತು ಸೋನಲ್ ಮನಬಿಚ್ಚಿ ಪ್ರೀತಿ ಹಂಚಿಕೊಂಡಿದ್ದರು. ತದನಂತರ ಎರಡು ಮನೆಯವರ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಎರಡು ಕುಟುಂಬದಿಂದಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಜೋಡಿ ಆಗಸ್ಟ್ ತಿಂಗಳಲ್ಲಿ ವಿವಾಹವಾಗಲು ಮುಂದಾಗಿದ್ದಾರೆ.
View this post on Instagram
ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಆಗಸ್ಟ್ 10-11 ರಂದು ತರುಣ್ ಸುಧೀರ್ ಮತ್ತು ಸೋನಲ್ ಮದುವೆ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆನ್ಷನ್ ಹಾಲ್ನಲ್ಲಿ ವಿವಾಹ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ