Advertisment

ಸೋನಲ್​ ಮೂಲತಃ ಎಲ್ಲಿಯವ್ರು? ತರುಣ್​ಗೆ ಲವ್​ ಆಗಿದ್ದೇಗೆ? ಸಖತ್​ ಆಗಿದೆ ಈ ಸ್ಟೋರಿ

author-image
AS Harshith
Updated On
ಇಂದು ತರುಣ್​-ಸೋನಲ್ ಮದ್ವೆ.. ನಿರ್ದೇಶಕನ ಕೈ ಹಿಡಿಯುತ್ತಿರೋ ಈ ನಟಿ​ ಯಾರು? ಮೂಲತಃ ಎಲ್ಲಿಯವ್ರು?
Advertisment
  • ಲವ್​ ಮಾಡಿದ ನಟಿಯನ್ನು ಮದ್ವೆಯಾಗುತ್ತಿದ್ದಾರೆ ತರುಣ್​ ಸುಧೀರ್
  • ಸೋನಲ್​ ಮತ್ತು ತರುಣ್​ ಮೊದಲ ಭೇಟಿಯಾಗಿದ್ದು ಎಲ್ಲಿ ಗೊತ್ತಾ?
  • ಸೋನಲ್​ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ? ಪರಿಚಯ ಹೇಗಾಯ್ತು?

ನಟ, ನಿರ್ದೇಶಕ ತರುಣ್​ ಸುಧೀರ್ ಕೊನೆಗೂ ವಿವಾಹವಾಗುತ್ತಿದ್ದಾರೆ. ತಾನಿಷ್ಟ ಪಟ್ಟ ನಟಿಯನ್ನೇ ಮದುವೆಯಾಗುತ್ತಿದ್ದಾರೆ. ಈ ಕುರಿತಾಗಿ ನಿನ್ನೆ ಘೋಷಣೆಯನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಮದುವೆ ದಿನಾಂಕದ ಜೊತೆಗೆ ನಟಿ ಸೋನಲ್​ ಮೊಂತೆರೊ ಅವರನ್ನು ಮದ್ವೆ ಆಗೋದಾಗಿ ಹೇಳಿದ್ದಾರೆ. ಅಂದಹಾಗೆಯೇ ನಟಿ ಸೋನಲ್​ ಯಾರು? ಅವರ ಹಿನ್ನೆಲೆ ಏನು? ತಿಳಿಯೋಣ.

Advertisment

ಸ್ಯಾಂಡಲ್​ವುಡ್​ ಖ್ಯಾತ ನಟ ದಿ. ಸುಧೀರ್​ ಅವರ 2ನೇ ಮಗ ತರುಣ್​ ಸುಧೀರ್ ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಬಂದವರು. ಕನ್ನಡದ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಬಳಿಕ ಡೈರೆಕ್ಟರ್​ ಕ್ಯಾಪ್​ ತೊಟ್ಟ ಇವರು ನಿರ್ದೇಶನದತ್ತ ಇಳಿದರು. ಸದ್ಯ ತರುಣ್​​ರವರು ನಟಿ ಸೋನಲ್​ ಮೊಂತೆರೊ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ವಿಭಿನ್ನವಾಗಿ ಪ್ರೀ ವೆಡ್ಡಿಂಗ್​ ಶೂಟಿಂಗ್​ ವಿಡಿಯೋ ಹಂಚಿಕೊಂಡು ಮದುವೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ​.

publive-image

ಇದನ್ನೂ ಓದಿ: ದರ್ಶನ್​​ಗೆ ಫುಡ್​​ ಪಾಯಿಸನ್​ ಆಗಿರೋದು ನಿಜಾನಾ? ವೈದ್ಯಕೀಯ ವರದಿಯಲ್ಲಿ ಸತ್ಯ ಬಹಿರಂಗ

ಸೋನಲ್​ ಮೊಂತೆರೊ ಮೂಲತಃ ಮಂಗಳೂರಿನವರು. ತುಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2015ರಲ್ಲಿ ತುಳು ಭಾಷೆಯ ‘ಎಕ್ಕ ಸಕ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು.

Advertisment

ಸೋನಲ್​ ಅವರು, ‘ಜೈ ತುಳುನಾಡು’, ‘ಪಿಲಿಬೈಲ್‌ ಯಮುನಕ್ಕ’ ತುಳು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಳಿಕ 2018ರಲ್ಲಿ ‘ಅಭಿಸಾರಿಕೆ’‌ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಪಡೆದರು. ಅದೇ ವರ್ಷ ಒಳ್ಳೇ ಹುಡುಗ ಪ್ರಥಮ್ ಜೊತೆ ‘ಎಂಎಲ್‌ಎ’ ಚಿತ್ರದಲ್ಲಿ ನಟಿಸಿದರು.

publive-image

ಇದನ್ನೂ ಓದಿ: VIDEO: ಈಕೆ ಮಾಡೋ ಪರಾಠಾ ಸಖತ್​ ಫೇಮಸ್; ಈ ಯುವತಿಗಾಗಿ ಯುವಕರ ಹುಡುಕಾಟ.. ಏನಿದರ ಸ್ಪೆಷಾಲಿಟಿ?

ಇದಾದ ಬಳಿಕ ‘ಮದುವೆ ದಿಬ್ಬಣ’ ಚಿತ್ರದಲ್ಲಿ ನಾಯಕಿಯಾಗಿ ಸೋನೆಲ್ ಕಾಣಿಸಿಕೊಂಡರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರಕ್ಕೆ ಸೋನೆಲ್ ನಾಯಕಿಯಾಗಿ ಮಿಂಚಿದರು. 2021ರಲ್ಲಿ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ಕಾಣಸಿಕೊಂಡರು.

Advertisment

‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್​​ಗೆ ಸೋನಲ್​ ಜೋಡಿಯಾಗಿ ಕಾಣಿಸಿಕೊಂಡರು. ಅಂದಹಾಗೆಯೇ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ‘ರಾಬರ್ಟ್’​ ಚಿತ್ರದಿಂದಲೇ ತರುಣ್ ಮತ್ತು ಸೋನಲ್ ನಡುವೆ ಆತ್ಮೀಯತೆ ಹೆಚ್ಚಾಗಿ ಕೊನೆಗೆ ಪ್ರೀತಿ ಹುಟ್ಟಿಕೊಂಡಿತು.

publive-image

ಇದನ್ನೂ ಓದಿ: ಈ ಹುಡುಗಿಯ ಟ್ರೆಂಡ್​​ಗೆ ಬದಲಾಗ್ತಿದ್ದಾರೆ ಹುಡುಗರು; ಡಾ. ಬ್ರೋನಂತೆ ಫೇಮಸ್ ಆಗ್ತಿರೋ ಚೆಲುವೆ ಯಾರು..?

ರಾಬರ್ಟ್ ಸಿನಿಮಾ ತರುಣ್ ಸುಧೀರ್ ಹಾಗೂ ಸೋನಲ್​ಗೆ ಬ್ರೇಕ್‌ ಕೊಟ್ಟ ಚಿತ್ರ. ಈ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಬಳಗದಲ್ಲಿ ಸೋನಲ್ ಹೆಚ್ಚಾಗಿ ಕಾಣಿಸಿಕೊಂಡರು. ‘ರಾಬರ್ಟ್’ ನಂತರ ‘ಗರಡಿ’ ಚಿತ್ರದಲ್ಲಿ‌ ಸೋನಲ್ ನಾಯಕಿಯಾದರು.

Advertisment

ದರ್ಶನ್ ಆಪ್ತ ಯಶಸ್ ಸೂರ್ಯ ‘ಗರಡಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ದರ್ಶನ್ ಆಪ್ತರಾಗಿರುವ ಬಿಸಿ ಪಾಟೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸದ್ಯ ಸೋನಲ್ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಬೇಕಿದೆ. ಉಪೇಂದ್ರ ನಟನೆಯ ‘ಬುದ್ದಿವಂತ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಮಾರ್ಗರೆಟ್ ಲವ್ ಆಫ್ ರಾಮಾಚಾರಿ’ ಚಿತ್ರದಲ್ಲೂ ಸೋನಲ್ ಅಭಿನಯಿಸುತ್ತಿದ್ದಾರೆ.

publive-image

ತರುಣ್​ ಸುಧೀರ್​ರವರು ಸೋನಲ್​​ರನ್ನು ವಿವಾಹವಾಗುವ ಮೂಲಕ​ ಕುಡ್ಲದ ಅಳಿಯನಾಗಲಿದ್ದಾರೆ. ಅನೇಕರು ಈ ಜೋಡಿಯ ವಿವಾಹದ ದಿನ ಆದಷ್ಟು ಬೇಗ ಬರಲಿ ಎಂದು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment