/newsfirstlive-kannada/media/post_attachments/wp-content/uploads/2024/07/Sonal-montero-1.jpg)
ಸ್ಯಾಂಡಲ್​ವುಡ್​ ಸ್ಟಾರ್​ ಡೈರೆಕ್ಟರ್​ ತರುಣ್​ ಸುಧೀರ್ ಮತ್ತು ನಟಿ ಸೋನಲ್ ಮೊಂತರೊ​ ವಿವಾಹವಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫ್ರೀ ವೆಡ್ಡಿಂಗ್​ ಫೋಟೋ ಶೂಟ್​ ಮಾಡುವ ಮೂಲಕ ಇಬ್ಬರು ವಿವಾಹ ಬಂಧಿಯಾಗಲು ರೆಡಿ ಎಂಬ ಮುನ್ಸೂಚನೆ ನೀಡಿದ್ದಾರೆ. ಆ ಮೂಲಕ ಈವರೆಗಿದ್ದ ಗಾಸಿಪ್ಸ್​ಗೆ ಬ್ರೇಕ್​ ನೀಡಿದ್ದಾರೆ.
ತರುಣ್​ ಮತ್ತು ಸೋನಲ್​ ಸದ್ದಿಲ್ಲದೆ ಪ್ರೀತಿಸುತ್ತಿದ್ದರು. ಆದರೆ ಈ ಜೋಡಿಗಳ ನಡುವಿನ ಪ್ರೀತಿಯ ಬಗ್ಗೆ ಸಣ್ಣ ಪಿಸುಪಿಸು ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿತ್ತು. ಕೊನೆಗೆ ಈ ಪ್ರೇಮಿಗಳು ಇನ್ನು ಕೆಲವೇ ತಿಂಗಳಲ್ಲಿ ಹಸೆಮಣೆ ಏರುವುದಾಗಿ ಹೇಳಿಕೊಂಡಿದ್ದಾರೆ.
ಅಂದಹಾಗೆಯೇ ತರುಣ್​ ಮತ್ತು ಸೋನಲ್​​ ಮೊದಲು ಭೇಟಿಯಾಗಿದ್ದು ಎಲ್ಲಿ? ಇಬ್ಬರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದೇಗೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಈ ಜೋಡಿ ಪ್ರೀತಿ ಹುಟ್ಟಲು ಕಾರಣವೊಂದಿದೆ. ಅದೇನು ಎಂದು ತಿಳಿಯಬೇಕಾದರೆ ಈ ಸ್ಟೋರಿ ಓದಿ.
ರಾಬರ್ಟ್ ಚಿತ್ರದ ವೇಳೆ ತರುಣ್​ ಸುಧೀರ್ ಮತ್ತು ಸೋನಲ್​​ ಮೊಂತೆರೊ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಚಿತ್ರೀಕರಣ ಸಮಯದಲ್ಲಿ ತರುಣ್ ಮತ್ತು ಸೋನಲ್​ಗೆ ನಟ ದರ್ಶನ್ ತಮಾಷೆಗೆ ರೇಗಿಸ್ತಿದ್ದರಂತೆ. ಹೀಗೆ ದಿನಗಳು ಕಳೆದಂತೆ ಈ ತಮಾಷೆಯೇ ಸಿರೀಯಸ್ ಆಯ್ತು ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/07/Robert.jpg)
ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಂತೆ ಪ್ರೀತಿಯ ಬಂಧನ ಬೆಸೆದಿದೆ. ಆದರೆ ಆ ಪ್ರೀತಿ ಬಹಳ ಗುಟ್ಟಾಗಿ ಉಳಿದಿತ್ತಂತೆ. ಕೊನೆಗೆ ತರುಣ್ ಮತ್ತು ಸೋನಲ್ ಮನಬಿಚ್ಚಿ ಪ್ರೀತಿ ಹಂಚಿಕೊಂಡಿದ್ದರು. ತದನಂತರ ಎರಡು ಮನೆಯವರ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಎರಡು ಕುಟುಂಬದಿಂದಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಜೋಡಿ ಆಗಸ್ಟ್ ತಿಂಗಳಲ್ಲಿ ವಿವಾಹವಾಗಲು ಮುಂದಾಗಿದ್ದಾರೆ.
View this post on Instagram
ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಆಗಸ್ಟ್ 10-11 ರಂದು ತರುಣ್​ ಸುಧೀರ್​ ಮತ್ತು ಸೋನಲ್​ ಮದುವೆ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆನ್ಷನ್​ ಹಾಲ್​ನಲ್ಲಿ ವಿವಾಹ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us