/newsfirstlive-kannada/media/post_attachments/wp-content/uploads/2024/07/Tarun.jpg)
ಕನ್ನಡದ ಖ್ಯಾತ ನಟ ದಿ. ಸುಧೀರ್ ಅವರ 2ನೇ ಮಗ ತರುಣ್​ ಸುಧೀರ್​ ಕೊನೆಗೂ ಸಿಹಿಸುದ್ದಿ ಕೊಟ್ಟಿದ್ದಾರೆ. ತನ್ನಿಷ್ಟದ ಗೆಳತಿಯನ್ನು ವಿವಾಹವಾಗುವ ವಿಚಾರವನ್ನ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆ ಮೂಲಕ ಗಾಸಿಪ್ಸ್​ಗೆ ಬ್ರೇಕ್​ ಹಾಕಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಮದುವೆಯಾಗುತ್ತಿರುವ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ವಿವಾಹಕ್ಕೆ ದಿನಾಂಕ ಫಿಕ್ಸ್​ ಆಗಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಸ್ಪೆಷಲ್ ವಿಡಿಯೋ ಮೂಲಕ ತರುಣ್ ಹಾಗೂ ಸೋನಲ್ ಮದುವೆಯ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಸಿನಿಮಾ ಥಿಯೇಟರ್​ನ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ. ಆ ಮೂಲಕ ಸ್ಯಾಂಡಲ್​ವುಡ್​ ಸ್ಟಾರ್ ಡೈರೆಕ್ಟರ್ ಮತ್ತು ಬ್ಯೂಟಿಫುಲ್ ಹೀರೋಯಿನ್ ತಾವಿಬ್ಬರು ಒಂದಾಗುವ ಬಗ್ಗೆ ಹೇಳಿದ್ದಾರೆ.
View this post on Instagram
ಇದನ್ನೂ ಓದಿ: Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ
ಅಂದಹಾಗೆಯೇ ಆಗಸ್ಟ್ 10-11 ರಂದು ತರುಣ್​ ಸುಧೀರ್​ ಮತ್ತು ಸೋನಲ್​ ಮದುವೆ ನಡೆಯಲಿಕ್ಕಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆನ್ಷನ್​ ಹಾಲ್​ನಲ್ಲಿ ವಿವಾಹ ನಡೆಯಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ