ಕುತೂಹಲ ಮೂಡಿಸಿದ ತರುಣ್ ಸುಧೀರ್ ಪೋಸ್ಟರ್!
ಬಾಳ ಸಂಗಾತಿ ಯಾರೆಂಬ ಪ್ರಶ್ನೆಗೆ ಇಂದು ಉತ್ತರಿಸಲಿದ್ದಾರೆ
ಮದುವೆ ದಿನಾಂಕ ಇಂದು ಅಧಿಕೃತವಾಗಿ ಘೋಷಣೆಯಾಗೋ ಸಾಧ್ಯತೆ
ಚಂದನವನದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ತುರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಮದುವೆಯಾಗ್ತಾರೆ ಅನ್ನೋ ಗಾಳಿ ಸುದ್ದಿಗೆ ಇಂದು ಸ್ಪಷ್ಟನೆ ಸಿಗಲಿದೆ. ತಮ್ಮ ರಿಯಲ್ ಜೀವನದ ಹಿರೋಯಿನ್ ಬಗ್ಗೆ ಇಂದು ಬೆಳಗ್ಗೆ 11 ಗಂಟೆ 08 ನಿಮಿಷಕ್ಕೆ ತರುಣ್ ಸುಧೀರ್ ಮಾಹಿತಿ ನೀಡಲಿದ್ದಾರೆ.
ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ. ಒಂದು ಗಂಡು ಒಂದು ಹೆಣ್ಣು ಅನ್ನೋದು ಹಣೆಬರದಲ್ಲೇ ಬರೆದಿರುತ್ತೆ. ಆದ್ರೆ ಆ ಹೆಣ್ಣು ಯಾರು ಅನ್ನೋ ಹುಡುಕಾಟ ಕೆಲದಿನ ಯಕ್ಷ ಪ್ರಶ್ನೆಯಾಗೇ ಉಳಿದಿರುತ್ತೆ. ಸದ್ಯ ಚಂದನವನದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಬಾಳಲ್ಲೂ ಯಕ್ಷಪ್ರಶ್ನೆಯಾಗೇ ಉಳಿದಿದ್ದ ಬಾಳ ಸಂಗಾತಿ ಯಾರೆಂಬ ಪ್ರಶ್ನೆಗೆ ಬೆಳಕಿನ ಕವಿತೆಯೊಂದರ ಉತ್ತರ ಸಿಕ್ಕಿದೆ.
ನಿರ್ದೇಶಕ ತರುಣ್ ಸುಧೀರ್ ಬಾಳಲ್ಲಿಂದು ಬೆಳಕಿನ ಕವಿತೆ!
ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದ್ವು. ಇದೀಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತರುಣ್ ವಿಶೇಷ ಪೋಸ್ಟರ್ವೊಂದನ್ನ ಹಂಚಿಕೊಂಡಿದ್ದು, ಈ ಪೋಸ್ಟರ್ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ
‘ನನ್ನ ಜೀವನದ ಸಿನಿಮಾದಲ್ಲಿ ಇವರೇ ಹೀರೋಯಿನ್’!
ನಿರ್ದೇಶಕ ತರುಣ್ ಸುಧೀರ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ನಿರ್ದೇಶಕ, ತನ್ನ ಜೀವನದ ಹಿರೋಹಿನ್ ಅನ್ನು ಕಂಡುಕೊಂಡಿದ್ದಾರೆ’ ಎಂಬ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಹಿರೋಹಿನ್ ಮತ್ತು ಡೈರೆಕ್ಟರ್ ಎಂದು ಹೆಸರು ಇರುವ ಎರಡು ಚೇರ್ಗಳಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಇಂದು ಬೆಳಗ್ಗೆ 11 ಗಂಟೆ 08 ನಿಮಿಷಕ್ಕೆ ತಿಳಿಸಲಾಗುವುದು ಎಂದು ಈ ಪೋಸ್ಟರ್ನಲ್ಲಿ ತರುಣ್ ಬರೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೆ, ತರುಣ್ ಸುಧೀರ್ ಹಂಚಿಕೊಂಡ ರೀತಿಯಲ್ಲೇ ಸೋನಲ್ ಸಹ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಕೊನೆಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕರುನಾಡಲ್ಲಿ ಹಲವೆಡೆ ಜಲಧಾರೆ, ಇಂದು ಶಾಲೆ- ಕಾಲೇಜುಗಳಿಗೆ ರಜೆ
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ಸೋನಲ್ ತನು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಆಗಿನಿಂದ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಹಾಗೆಯೇ ದಿನ ಕಳೆಯುತ್ತಾ ಈ ಸ್ನೇಹ ಪ್ರೀತಿಯಾಗಿ ಇಬ್ಬರ ಬಾಳಲ್ಲಿ ಬೆಳಕಿನ ಕವಿತೆ ಬರೆದಿತ್ತು. ಸದ್ಯ ಅದೇ ಪ್ರೀತಿ ಸಪ್ತಪದಿಯ ಹಾದಿ ಹಿಡಿದಿದ್ದು ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್ ಗಾಂಧಿ ಪ್ಲಾನ್
ಒಟ್ಟಿನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ದಿನಾಂಕ ಇಂದು ಅಧಿಕೃತವಾಗಿ ಘೋಷಣೆಯಾಗೋ ಸಾಧ್ಯತೆ ಇದೆ. ತರುಣ್ ಬಾಳಲ್ಲಿ ಸೋನಲ್ ಬೆಳಕಿನ ಕವಿತೆ ಬಾರೆಯೋ ದಿನ ಯಾವತ್ತೂ, ಸ್ಯಾಂಡಲ್ವುಡ್ನ ಈ ಕ್ಯೂಟ್ ಜೋಡಿ ಸಪ್ತಪದಿ ತುಳಿಯೋದು ಯಾವತ್ತೂ ಅನ್ನೋ ಕುತೂಹಲಕ್ಕೆ ಇಂದು ಬೆಳಗ್ಗೆ 11 ಗಂಟೆ 8 ನಿಮಿಷಕ್ಕೆ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ