Advertisment

ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ?

author-image
Veena Gangani
Updated On
ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ?
Advertisment
  • ಸ್ಯಾಂಡಲ್​ವುಡ್ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಮದುವೆ ಸುದ್ದಿ ನಿಜಾನಾ?
  • ಖ್ಯಾತ ನಟಿಯನ್ನ ವಿವಾಹವಾಗಲಿದ್ದಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್
  • ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದ ಸೋನಾಲ್ ಮಂಥೆರೊ

ರಾಬರ್ಟ್, ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅದು ಕೂಡ ರಾಬರ್ಟ್ ಸಿನಿಮಾ ನಟಿ ಸೋನಾಲ್ ಮಂಥೆರೊ ಅವರ ಜೊತೆ ಮದುವೆ ಆಗಲಿದ್ದಾರಂತೆ. ಹಿಂದೆ ಇಂತಾದೊಂದು ಗುಸು ಗುಸು ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Advertisment

publive-image

ಹೌದು, ಸ್ಯಾಂಡಲ್​ವುಡ್ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಅವರು ಸದ್ಯ ಮಹಾನಟಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಆದರೆ ಇದರ ಮಧ್ಯೆ ದಿಢೀರ್ ಅಂತ ತರುಣ್ ಸುಧೀರ್‌ ಅವರು ಆಗಸ್ಟ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಖ್ಯಾತ ನಟಿಯನ್ನ ತರುಣ್ ಸುಧೀರ್ ವಿವಾಹವಾಗಲಿದ್ದಾರೆ ಎಂಬ ಗಾಸಿಪ್​ಗಳು ಎಲ್ಲೆಡೆ ವೈರಲ್​ ಆಗುತ್ತಿವೆ. ಆದರೆ ಈ ಸುದ್ದಿ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಅವರು ಆಗಲಿ, ನಟಿ ಸೋನಾಲ್ ಮಂಥೆರೊ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಸೀಕ್ರೆಟ್ ಮೆಂಟೇನ್.. ಈ ಪ್ರಶ್ನೆಗಳಿಗೆ ಇನ್ನೂ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ

publive-image

ರಾಬರ್ಟ್ ಸಿನಿಮಾ ರಿಲೀಸ್ ಬಳಿಕ ತರುಣ್ ಸುಧೀರ್ ಅವರು ಮದುವೆ ಆಗ್ತಾರಂತೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ ತುಂಬೆಲ್ಲಾ ಕೇಳಿಬಂದಿತ್ತು. ಅದಾದ ಬಳಿಕ ಕಾಟೇರ ಚಿತ್ರವನ್ನ ತರುಣ್ ಸುಧೀರ್ ತೆರೆಗೆ ತಂದರು. ಮಗನಿಗೆ ಬೇಗ ಮದುವೆ ಮಾಡಬೇಕು ಅಂತ ತಾಯಿ ಮಾಲತಿ ಸುಧೀರ್‌ ಅವರು ನಿರ್ಧರಿಸಿದ್ದಾರಂತೆ. ಹೀಗಾಗಿ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದೆ ಅಂತ ಹೇಳಲಾಗುತ್ತಿದೆ.

Advertisment

publive-image

ಯಾರು ಈ ನಟಿ ಸೋನಾಲ್ ಮಂಥೆರೊ ?

ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದರು. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಾಲ್ ಮಂಥೆರೊ ಅಭಿನಯಿಸಿದ್ದರು. ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ. ಆದರೆ ಸೋನಾಲ್ ಮಂಥೆರೊ ಅವರೇ ತರುಣ್ ಸುಧೀರ್ ಅವರ ಕೈ ಹಿಡಿಯಲಿದ್ದಾರೆ ಅಂತ ಮಾತುಗಳು ಹೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತರುಣ್ ಸುಧೀರ್ ಅವರು ಪ್ರತಿಕ್ರಿಯೆ ನೀಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment