newsfirstkannada.com

ತರುಣ್​​ ಕೈ ಹಿಡಿಯುತ್ತಿರುವ ಸೋನಲ್​ ಯಾರು? ಮೂಲತಃ ಎಲ್ಲಿಯವ್ರು? ಇಲ್ಲಿದೆ ಮಾಹಿತಿ

Share :

Published July 22, 2024 at 2:21pm

Update July 22, 2024 at 2:24pm

    ತರುಣ್​ ಸುಧೀರ್-ಸೋನಲ್ ಮದ್ವೆ ಡೇಟ್​​ ಅನೌನ್ಸ್​

    ಪ್ರೀ ವೆಡ್ಡಿಂಗ್​ ಶೂಟ್​​ನ ವಿಡಿಯೋ ಹಂಚಿಕೊಂಡ ಜೋಡಿ

    ಸೋನಲ್​ ಕುಡ್ಲದ ಕುವರಿಯೇ.. ಕರಾವಳಿ ಬೆಡಗಿಯೇ?

ಸ್ಯಾಂಡಲ್​ವುಡ್​ ಖ್ಯಾತ ನಟ ದಿ. ಸುಧೀರ್​ ಅವರ 2ನೇ ಮಗ ತರುಣ್​ ಸುಧೀರ್ ವಿವಾಹವಾಗುತ್ತಿದ್ದಾರೆ. ನಟಿ ಸೋನಲ್​ ಮೊಂತೆರೊ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ವಿಭಿನ್ನವಾಗಿ ಪ್ರೀ ವೆಡ್ಡಿಂಗ್​ ಶೂಟಿಂಗ್​ ವಿಡಿಯೋ ಹಂಚಿಕೊಂಡು ಮದುವೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ​.

ಅಂದಹಾಗೆಯೇ ಸ್ಟಾರ್​ ನಿರ್ದೇಶಕ ತರುಣ್​ ಸುಧೀರ್​ ಅವರನ್ನು ವಿವಾಹವಾಗುತ್ತಿರುವ ನಟಿ ಸೋನಲ್​ ಯಾರು? ಅವರು ಮೂಲತಃ ಎಲ್ಲಿಯವರು? ಈವರೆಗೆ ಅವರು ಮಾಡಿದ ಸಿನಿಮಾಗಳು ಯಾವ್ಯಾವುವು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತರುಣ್​-ಸೋನಲ್​ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಸ್ಟಾರ್​ ನಟನ ತಮಾಷೆಯೇ ಈ ಪ್ರೀತಿಗೆ ಕಾರಣವಾಯ್ತಾ?

ಸೋನಲ್​ ಮೊಂತೆರೊ ಮೂಲತಃ ಮಂಗಳೂರಿನವರು. ತುಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2015ರಲ್ಲಿ ತುಳು ಭಾಷೆಯ ‘ಎಕ್ಕ ಸಕ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು.

ಸೋನಲ್​ ಅವರು, ‘ಜೈ ತುಳುನಾಡು’, ‘ಪಿಲಿಬೈಲ್‌ ಯಮುನಕ್ಕ’ ತುಳು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಳಿಕ 2018ರಲ್ಲಿ ‘ಅಭಿಸಾರಿಕೆ’‌ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಪಡೆದರು. ಅದೇ ವರ್ಷ ಒಳ್ಳೇ ಹುಡುಗ ಪ್ರಥಮ್ ಜೊತೆ ‘ಎಂಎಲ್‌ಎ’ ಚಿತ್ರದಲ್ಲಿ ನಟಿಸಿದರು.

ಇದನ್ನೂ ಓದಿ: ನಟಿ ಸೋನಲ್​ ಕೈಹಿಡಿಯಲಿದ್ದಾರೆ​ ತರುಣ್​.. ಕೊನೆಗೂ ಮದುವೆ ದಿನಾಂಕ ಅನೌನ್ಸ್​ ಮಾಡಿದ ‘ಕಾಟೇರ’ ನಿರ್ದೇಶಕ

ಇದಾದ ಬಳಿಕ ‘ಮದುವೆ ದಿಬ್ಬಣ’ ಚಿತ್ರದಲ್ಲಿ ನಾಯಕಿಯಾಗಿ ಸೋನೆಲ್ ಕಾಣಿಸಿಕೊಂಡರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರಕ್ಕೆ ಸೋನೆಲ್ ನಾಯಕಿಯಾಗಿ ಮಿಂಚಿದರು. 2021ರಲ್ಲಿ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ಕಾಣಸಿಕೊಂಡರು.

‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್​​ಗೆ ಸೋನಲ್​ ಜೋಡಿಯಾಗಿ ಕಾಣಿಸಿಕೊಂಡರು. ಅಂದಹಾಗೆಯೇ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ‘ರಾಬರ್ಟ್’​ ಚಿತ್ರದಿಂದಲೇ ತರುಣ್ ಮತ್ತು ಸೋನಲ್ ನಡುವೆ ಆತ್ಮೀಯತೆ ಹೆಚ್ಚಾಗಿ ಕೊನೆಗೆ ಪ್ರೀತಿ ಹುಟ್ಟಿಕೊಂಡಿತು.

ಇದನ್ನೂ ಓದಿ: Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

ರಾಬರ್ಟ್ ಸಿನಿಮಾ ತರುಣ್ ಸುಧೀರ್ ಹಾಗೂ ಸೋನಲ್​ಗೆ ಬ್ರೇಕ್‌ ಕೊಟ್ಟ ಚಿತ್ರ. ಈ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಬಳಗದಲ್ಲಿ ಸೋನಲ್ ಹೆಚ್ಚಾಗಿ ಕಾಣಿಸಿಕೊಂಡರು. ‘ರಾಬರ್ಟ್’ ನಂತರ ‘ಗರಡಿ’ ಚಿತ್ರದಲ್ಲಿ‌ ಸೋನಲ್ ನಾಯಕಿಯಾದರು.

ದರ್ಶನ್ ಆಪ್ತ ಯಶಸ್ ಸೂರ್ಯ ‘ಗರಡಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ದರ್ಶನ್ ಆಪ್ತರಾಗಿರುವ ಬಿಸಿ ಪಾಟೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸದ್ಯ ಸೋನಲ್ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಬೇಕಿದೆ. ಉಪೇಂದ್ರ ನಟನೆಯ ‘ಬುದ್ದಿವಂತ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಮಾರ್ಗರೆಟ್ ಲವ್ ಆಫ್ ರಾಮಾಚಾರಿ’ ಚಿತ್ರದಲ್ಲೂ ಸೋನಲ್ ಅಭಿನಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತರುಣ್​​ ಕೈ ಹಿಡಿಯುತ್ತಿರುವ ಸೋನಲ್​ ಯಾರು? ಮೂಲತಃ ಎಲ್ಲಿಯವ್ರು? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/07/sonal-monteiro.jpg

Load More