/newsfirstlive-kannada/media/post_attachments/wp-content/uploads/2025/07/tharun-sudhir.jpg)
ಸ್ಯಾಂಡಲ್​ವುಡ್​ ನಟ ಹಾಗೂ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಮಹಾನಟಿ ವೇದಿಕೆ ಮೇಲೆ ಆ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಹೌದು, ಕನ್ನಡದ ನಟ ನವೀನ್ ಕೃಷ್ಣ ಅವರು ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಌಕ್ಟ್ ವಿತ್​ ಸ್ಟಾರ್​ ರೌಂಡ್​ನಲ್ಲಿ ವಂಶಿ ಜೊತೆಗೆ ಅಪ್ಪನ ಪಾತ್ರದಲ್ಲಿ ಸ್ಕಿಟ್​ ಮಾಡಿದ್ದರು.
ಇದನ್ನೂ ಓದಿ:ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​
/newsfirstlive-kannada/media/post_attachments/wp-content/uploads/2025/07/tharun-sudhir2.jpg)
ಇದೇ ವೇಳೆ ನವೀನ್ ಕೃಷ್ಣ ಅವರನ್ನು ನೋಡಿ ಸಖತ್​ ಖುಷಿಯಾಗಿದ್ದ ತರುಣ್​ ಸುಧೀರ್ ನೇರವಾಗಿ ವೇದಿಕೆಗೆ ಬಂದು ಅವರನ್ನು ಅಪ್ಪಿಕೊಂಡಿದ್ದಾರೆ. ಈ ವೇಳೆ ಮಾತಾಡಿದ ತರುಣ್ ಸುಧೀರ್, ನಮ್ಮಿಬ್ಬರದ್ದು 18 ವರ್ಷದ ಗೆಳತನ. ಕಷ್ಟಗಳ ದಿನಗಳಲ್ಲಿ ಒಟ್ಟಿಗೆ ಇದ್ದವರು. ನವೀನ್​ ಸಿನಿಮಾದಲ್ಲಿ ನಾನು ನಟನೆ ಮಾಡಿದ್ದೇ, ಮಗ, ಅಪ್ಪ, ಇವನ ಮೂರು ತಲೆಮಾರುಗಳ ಜೊತೆಗೆ ಕೆಲಸ ಮಾಡಿದ್ದೇನೆ. ಅದ್ಭುತ ಟ್ಯಾಲೆಂಟೆಡ್ ಇವರು. ನಮ್ಮ ಕನ್ನಡ ಇಂಡ್ರಸ್ಟಿಯಲ್ಲಿ ಇರೋ ಅದ್ಭುತ ಪ್ರತಿಭೆ ಇವರು. ಇವನನ್ನು ವೇದಿಕೆ ಮೇಲೆ ನೋಡಿ ಸಖತ್​ ಖುಷಿಯಾಯ್ತು ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/07/tharun-sudhir1.jpg)
ಈ ವೇಳೆ ಮಾತಾಡಿದ ನವೀನ್​ ಕೃಷ್ಣ ಅವರು, ನನ್ನ ಬಗ್ಗೆ ಪ್ರತಿಭೆ ಅಂತ ಹೊಗಳಿದ್ರು. ಪ್ರತಿಭೆ ಇದ್ದರಷ್ಟೇ ಸಾಲದು, ಪ್ರಯತ್ನಗಳು ಇರಬೇಕು. ಆ ಪ್ರಯತ್ನಕ್ಕೆ ತಕ್ಕಹಾಗೇ ಅಷ್ಟು ಅದೃಷ್ಟ ಬರುತ್ತೆ. ಇವರು ಇಷ್ಟು ಮಾಡಿದ್ದಾರೆ, ಅಷ್ಟು ಅದೃಷ್ಟ ಬಂದಿದೆ. ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ, ಸ್ಪರ್ಧಿಯಾಗಿ, ಕೊರಿಯೋಗ್ರಾಫ್​ ಮಾಡಿ ಹಂತ ಹಂತವಾಗಿ ಬಂದು ಸ್ಟ್ರಾಂಗ್​ ಆಗಿ ಬೇರೆ ರಾಜ್ಯದ ನಿರ್ದೇಶಕರು ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಸ್ನೇಹ ಸಿಕ್ಕಿರೋದು ನನ್ನ ಪುಣ್ಯ ಅಂತ ಹೇಳಿದ್ದಾರೆ. ಇದಾದ ಬಳಿಕ ವೇದಿಕೆ ಮೇಲೆ ಇಬ್ಬರು ಸ್ನೇಹಿತರು ಡ್ಯಾನ್ಸ್​ ಮಾಡಿದ್ದಾರೆ.
View this post on Instagram
ಪ್ರೀತಿಯಿಂದ ಧಾರಾವಾಹಿಗಳಲ್ಲಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟು ಸಾಕಷ್ಟು ಜನಪ್ರಿಯತೆ ಪಡೆದಿದ್ದುಕೊಂಡಿದ್ದರು ನಟ ನವೀನ್ ಕೃಷ್ಣ. ಇದಾದ ಬಳಿಕ ಸೀರಿಯಲ್​ನಿಂದ ನೇರವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮಿಂಚಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us