/newsfirstlive-kannada/media/post_attachments/wp-content/uploads/2024/11/tharun.jpg)
ಸ್ಯಾಂಡಲ್‌ವುಡ್ ಸ್ಟಾರ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಅದ್ಧೂರಿ ಮದುವೆಯಾದ ಮೇಲೆ ಹನಿಮೂನ್‌ಗಾಗಿ ಮಾಲ್ಡೀವ್ಸ್​ಗೆ ಹೋಗಿದ್ದರು ಈ ಮುದ್ದಾದ ಜೋಡಿ. ಹನಿಮೂನ್‌ನಲ್ಲಿ ಮೂಡ್​ನಲ್ಲಿ ಜಾಲಿಯಾಗಿ ಸುತ್ತಾಡಿದ್ದ ಈ ಜೋಡಿ ಈಗ ದೀಪಾವಳಿ ಹಬ್ಬದಲ್ಲಿದ್ದಾರೆ.
ಇದನ್ನೂ ಓದಿ:ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ
/newsfirstlive-kannada/media/post_attachments/wp-content/uploads/2024/10/tharun.jpg)
ದೀಪಾವಳಿಯ ನಿಮಿತ್ತ ಈ ಸ್ಟಾರ್​ ಜೋಡಿ ಬ್ಯೂಟಿಫುಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ಮೊದಲ ಹಬ್ಬವನ್ನು ತುಂಬಾ ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದೆ. ಇನ್ನೂ ಸೋಷಿಯಲ್​ ಮೀಡಿಯಾದಲ್ಲಿ ಕಲರ್​ಫುಲ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/sonal2-1.jpg)
ವಿಶೇಷ ಎಂದರೆ ನಟ ತರುಣ್​ ಹಾಗೂ ಸೋನಲ್​ ಅವರು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರು ಧರಿಸಿಕೊಂಡಿದ್ದ ಬಟ್ಟೆಗಳು ಎಲ್ಲರ ಗಮನ ಸೆಳೆದಿದೆ. ಈ ಸ್ಟಾರ್ ಜೋಡಿ ಬಹಳ ಸುಂದರವಾಗಿ ಕಾಣಲು ಅವರ ಉಡುಪುಗಳೆ ಕಾರಣ. ನಟಿ ಧರಿಸಿದ ಬ್ಲೌಸ್ ಡಿಸೈನ್, ಸೀರೆಯ ಮೇಲೆ ಹಾಕಿರೋ ಡಿಸೈನ್​ ಹಾಗೂ ತರುಣ್​​ ಸುಧೀರ್ ಅವರು ಕೂಡ ಸೇಮ್​ ಕಾಸ್ಟ್ಯೂಮ್ ಧರಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/tharun3.jpg)
ನಟಿ ಸೋನಲ್ ಮೊಂತೆರೊ ಹಾಗೂ ತರುಣ್​ ಸುಧೀರ್​ ಧರಿಸಿದ ಬಟ್ಟೆಯ ಮೇಲೆ ಡಿಸೈನ್ ಮಾಡಿದ್ದು, ಕಾಸ್ಟೂಮ್ ಡಿಸೈನರ್ ರಶ್ಮಿ ರಾವ್​. ಹೌದು, ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿರೋ ರಶ್ಮಿ ಅನೂಪ್ ರಾವ್​ ಅವರು ಕಿರುತೆರೆ ನಟನ ಪತ್ನಿಯಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟ ಅಮಿತ್​ ರಾವ್ ಅವರ ಪತ್ನಿ ಅವರೇ ಸೋನಲ್ ಮೊಂತೆರೊ ಹಾಗೂ ತರುಣ್​ ಸುಧೀರ್ ಅವರ ಬಟ್ಟೆ ಮೇಲೆ ಡಿಸೈನ್ ಮಾಡಿದ್ದಾರೆ.
ಇನ್ನು, ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಮದುವೆಯ ಸಮಯದಲ್ಲೂ ಅವರ ಕಾಸ್ಟೂಮ್ ಅನ್ನು ಡಿಸೈನ್​ ಮಾಡಿದ್ದು ಕೂಡ ಕಾಸ್ಟೂಮ್ ಡಿಸೈನರ್ ರಶ್ಮಿ ಅನೂಪ್ ರಾವ್. ದೀಪಾವಳಿ ಹಬ್ಬಕ್ಕಾಗಿಯೇ ರಶ್ಮಿ ಅನೂಪ್ ರಾವ್ ಅವರು ಸ್ಟಾರ್​ ಜೋಡಿಗೆ ಈ ಒಟ್ಟೆ ಕಾಸ್ಟೂಮ್ ಡಿಸೈನರ್ ಮಾಡಿದ್ದಾರೆ. ಸದ್ಯ ಇವರು ಬಟ್ಟೆ ಡಿಸೈನ್​ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
/newsfirstlive-kannada/media/post_attachments/wp-content/uploads/2024/08/amith.jpg)
ಯಾರು ಈ ರಶ್ಮಿ ಅನೂಪ್ ರಾವ್?
ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿರೋ ರಶ್ಮಿ ಅನೂಪ್ ರಾವ್​ ಅವರು ಕಿರುತೆರೆ ನಟನ ಪತ್ನಿಯಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟ ಅಮಿತ್​ ರಾವ್ ಅವರ ಪತ್ನಿ ಅವರೇ ಸೋನಲ್ ಮೊಂತೆರೊ ಅವರ ಬ್ಲೌಸ್ ಡಿಸೈನ್ ಮಾಡಿದ್ದಾರೆ. ಸದ್ಯ ನಟ ಅಮಿತ್​ ರಾವ್​ ಲಕ್ಷ್ಮೀ ನಿವಾಸ ಧಾರಾವಾಹಿ ನಟಿಸುತ್ತಿದ್ದಾರೆ. ತೆರೆ ಮಂದೆ ಅಮಿತ್ ರಾವ್ ಅವರು ಮಿಂಚುತ್ತಿದ್ದರೆ, ತೆರೆ ಹಿಂದೆ ಅವರ ಪತ್ನಿ ರಶ್ಮಿ ಅನೂಪ್ ರಾವ್​​ ಅವರು ಕಂಗೊಳಿಸುತ್ತಿದ್ದಾರೆ.
View this post on Instagram
ಕಿರುತೆರೆಯ ಬಹುತೇಕ ಧಾರಾವಾಹಿಗಳ ಕಲಾವಿದರಿಗೆ ರಶ್ಮಿ ಅವರೇ ವಿನ್ಯಾಸ ಮಾಡುತ್ತಿದ್ದಾರೆ. ಸೀತಾರಾಮ ಧಾರಾವಾಹಿಯಿಂದ ಪೌರಾಣಿಕ ಧಾರಾವಾಹಿವರೆಗೆ ಎಲ್ಲಾ ಸೀರಿಯಲ್‌ಗಳಿಗೂ ರಶ್ಮಿ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರಂತೆ. ನಿಶ್ಚಿತಾರ್ಥ, ಮದುವೆ, ಮಕ್ಕಳ ಸಮಾರಂಭ ಸೇರಿ ಸಾಕಷ್ಟು ಸಮಾರಂಭಗಳಲ್ಲಿ ವಧು ವರರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಸ್ಟೂಮ್ ಡಿಸೈನರ್ ಅವರಿಗೆ ಭಾರೀ ಬೇಡಿಕೆ ಇದ್ದು, ಸಾಕಷ್ಟು ಜನರು ರಶ್ಮಿ ಅವರು ಮಾಡುವ ಡಿಸೈನ್​ಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us