/newsfirstlive-kannada/media/post_attachments/wp-content/uploads/2025/06/tharun-sudir.jpg)
ಕಳೆದ ವಾರವಷ್ಟೇ ಮಹಾನಟಿ ಸೀಸನ್ 2 ಅದ್ದೂರಿಯಾಗಿ ಲಾಂಚ್ ಆಗಿದೆ. ಉದಯೋನ್ಮುಖ ಪ್ರತಿಭೆಗಳಿಗೆ ಮಹಾನ್​ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಶುರುವಾಗಿದೆ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
/newsfirstlive-kannada/media/post_attachments/wp-content/uploads/2025/06/mahanati-23.jpg)
ವಿಭಿನ್ನ ಕಾನ್ಸೆಪ್ಟ್​ ಜೊತೆಗೆ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಅಭಿನಯದ ಮೇಲೆ ಆಸಕ್ತಿಯಿರೋ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್​ ಕೊಟ್ಟಿದ್ದರು. ಇನ್ನೂ, ಮಹಾನಟಿ ಸೀಸನ್​ 2 ಭರ್ಜರಿ ಸೌಂಡ್​ ಮಾಡ್ತಿದೆ. ನಟಿ ಆಗೋ ಕನಸು ಹೊತ್ತಿರೋ ವಿವಿಧ ಜಿಲ್ಲೆಗಳಿಂದ 24 ಮಂದಿ ಮೆಗಾ ಆಡಿಷನ್​ ಕೊಟ್ಟಿದ್ದರು. ಅವರಲ್ಲಿ ಒಟ್ಟು 16 ಸ್ಪರ್ಧಿಗಳು ಮಹಾನಟಿ ಸೀಸನ್ 2ಕ್ಕೆ ಆಯ್ಕೆ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/06/mahanati.jpg)
ಅದರಲ್ಲಿ ಸಿಂಚನಾ. ಆರ್​ ಮೈಸೂರು, ವರ್ಷಾ ಡಿಗ್ರಜೆ ಚಿಕ್ಕೋಡಿ, ಪೂಜಾ ರಮೇಶ್​ ಬೆಂಗಳೂರು, ವಂಶಿ ರತ್ನ ಕುಮಾರ್​ ದಕ್ಷಿಣ ಕನ್ನಡ, ಖುಷಿ ಬೆಳಗಾವಿ, ಶ್ರೀಯ ಅಗಮ್ಯ ಮೈಸೂರು, ತನಿಷ್ಕ ಮೂರ್ತಿ ಮೈಸೂರು, ಬೆಂಗಳೂರಿನ ಭೂಮಿಕ ಟಿ, ಬೀದರ್​ನ ದಿವ್ಯಾಂಜಲಿ, ಚಿಕ್ಕಮಗಳೂರಿನ ಸೌಗಂಧಿಕ, ತೀರ್ಥಹಳ್ಳಿಯ ಮಾನ್ಯ ರಮೇಶ್​, ಬೆಂಗಳೂರಿನ ನಿವಿಕ್ಷ, ಮೈಸೂರಿನ ಪ್ರೇರಣ ವಿ ಪಾಟೀಲ್​, ದಾವಣಗೆರೆಯ ವರ್ಷ ಕೆ.ಪಿ, ಸುಳ್ಯದ ಸಾಯಿಶ್ರುತಿ, ತುಮಕೂರಿನ ದೀಪಿಕಾ ಆಯ್ಕೆ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/06/mahanati1.jpg)
ಇನ್ನೂ, ಕಳೆದ ವಾರ ಮಹಾನಟಿ ಸೀಸನ್​ 2 ಮೆಗಾ ಆಡಿಷನ್​ ನಡೆದಿತ್ತು. ಈ ಮೆಗಾ ಆಡಿಷನ್​ನಲ್ಲಿ ಬೀದರ್‌ನ ದಿವ್ಯಾಂಜಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಜಡ್ಜಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಅದರಲ್ಲೂ ಮೂಖ್ಯವಾಗಿ ಜಡ್ಜಸ್​ಗಳ ಭಾವುಕರಾಗುವಂತೆ ಮಾಡಿದ್ದಾಳು ದಿವ್ಯಾಂಜಲಿ. ಈ ಪುಟ್ಟ ಹುಡುಗಿಯ ಕಥೆ ಕೇಳಿ ತರುಣ್ ಸುಧೀರ್​ ಪತ್ನಿ ಸೋನಲ್​ ಅವರು ಮನೆಯಲ್ಲಿ ಅತ್ತಿದ್ದಾರಂತೆ. ಈ ಬಗ್ಗೆ ಖುದ್ದು ತರುಣ್​ ಸುದೀಪ್​ ಮಾತಾಡಿ, ನಾನು ಎಲ್ಲೋ ಆಚೆ ಹೋಗಿ ಮನೆಗೆ ಬರೋವಾಗ ಟೈಮ್​ ನೋಡಿಕೊಂಡು ಬಂದೆ. ಮಹಾನಟಿ ಆಗಲೇ ಶುರುವಾಗಿತ್ತು. ನಮ್ಮ ಮನೆಯಲ್ಲಿ ಊರಿಂದ ಬಂದ ಹುಡುಗಿ ಅಳುತ್ತಾ ಇದ್ದಾಳೆ. ಅದನ್ನು ನೋಡಿ ನನಗೆ ಗಾಬರಿ ಆಯ್ತು. ಸ್ವಲ್ಪ ಒಳಗಡೆ ಬಂದು ನೋಡಿದ್ರೆ ಅಲ್ಲಿ ಸೋನಲ್​ ಗಾಬರಿಯಲ್ಲಿ ನಿಂತಿದ್ದಾಳೆ. ಇನ್ನೂ ಮುಂದೆ ಬಂದು ನೋಡಿದ್ರೆ ಮಹಾನಟಿ ಶೋ ಬರ್ತಾ ಇದೆ. ಹುಚ್ಚಿ ಪಾತ್ರದಲ್ಲಿ ಅಭಿನಯ ಮಾಡಿದ ದಿವ್ಯಾಂಜಲಿ ಎಪಿಸೋಡ್​ ನೋಡಿ ಅತ್ತುಕೊಂಡು ಕುತ್ತಿದ್ದಾರೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us