newsfirstkannada.com

ನಟಿ ವಿರುದ್ಧ ಡ್ರಗ್ಸ್​ ಸೇವನೆ, ಅಕ್ರಮ ಸಂಬಂಧ, ವಂಚನೆ ಆರೋಪ.. ಕೇಸ್​ ದಾಖಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟ ಪತಿ!

Share :

Published March 12, 2024 at 12:18pm

Update March 12, 2024 at 12:19pm

  ಮ್ಯಾಟ್ರಿಮೊನಿ ಮೂಲಕ ಪರಿಚಯವಾಗಿ ವಿವಾಹವಾದ ನಟಿ

  ವಿವಾಹದ ಬಳಿಕ ಡ್ರಗ್ಸ್, ಸಿಗರೇಟ್, ನಟಿಯ ಅಕ್ರಮ ಸಂಬಂಧ ಬಯಲಿಗೆ

  ವಿಚ್ಛೇದನ ನೀಡೋದಕ್ಕೂ ತೊಂದರೆ ಕೊಡುತ್ತಿದ್ದಾಳೆ ಎಂದು ಪತಿ ಆರೋಪ

ನಟಿ ಅಡ್ಡಾಲ ಐಶ್ವರ್ಯ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮದುವೆ ಹೆಸರಲ್ಲಿ ವಂಚಿಸಿದ್ದಾಳೆಂದು ಆಕೆಯ ಪತಿಯೇ ಆರೋಪಿಸುವ ಘಟನೆ ಮುನ್ನೆಲೆಗೆ ಬಂದಿದೆ.

ಅಡ್ಡಾಲ ಐಶ್ವರ್ಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡು ಬಂದಿರುವ ನಟಿ. ಈಗ ಆಕೆಯ ವಿರುದ್ಧ ನಟಿಯ ಪತಿ ಪಿನ್ನಿಂಟಿ ಶ್ಯಾಮ್ ದೂರು ನೀಡಿದ್ದಾರೆ. ನನ್ನ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾಗಿ ನನಗೆ ಮೋಸ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮ್ಯಾಟ್ರಿಮೋನಿ ಮೂಲಕ ಪರಿಚಯ

ಪತಿ ಶ್ಯಾಮ್​ಗೆ ಮ್ಯಾಟ್ರಿಮೊನಿ ಮೂಲಕ ಐಶ್ವರ್ಯ ಪರಿಚಯವಾಯಿತು. ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರಿಂದ ಕಳೆದ ವರ್ಷ ಸೆ.6ಕ್ಕೆ ಮದುವೆ ಮಾಂಡಿಕೊಂಡಿದ್ದರು. ನಂತರ ಅ.6 ರಂದು ಇಬ್ಬರೂ ಒಟ್ಟಿಗೆ ಹೈದರಾಬಾದ್​ ಶಿಫ್ಟ್​ ಆಗಿ ಅಲ್ಲೇ ವಾಸ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆಯಷ್ಟೇ ಆಕೆಯ ನಿಜಸ್ವರೂಪ ಬಯಲಿಗೆ ಬಂದಿದೆ. ಡ್ರಗ್ಸ್, ಸಿಗರೇಟ್, ಅಕ್ರಮ ಸಂಬಂಧ, ಬಾಲ್ಯ ವಿವಾಹ ವಿಚಾರ ಬಯಲಾಗಿದೆ.

ಮದುವೆ ಹೆಸರಲ್ಲಿ ಮೋಸ

ಇದೀಗ ಪತಿ ಶ್ಯಾಮ್​ ಮದುವೆ ಹೆಸರಲ್ಲಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ವಿಚ್ಛೇದನ ನೀಡೋದಕ್ಕೂ ತೊಂದರೆ ಕೊಡುತ್ತಿದ್ದಾಳೆಂದು ಅಳಲು ತೋಡಿಕೊಂಡಿದ್ದಾರೆ.ಮಾತ್ರವಲ್ಲದೆ, ಪತ್ನಿ ಐಶ್ವರ್ಯ ವಿರುದ್ಧ ಪತಿ ಶ್ಯಾಮ್​ಕುಮಾರ್​​​ ಕೇಸ್​ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಸಂಬಂಧ

ಇದಲ್ಲದೆ, ಪತ್ನಿ ವಿರುದ್ಧ ಆರು ತಿಂಗಳಲ್ಲಿ ₹25 ಲಕ್ಷ ಪೀಕಿದ ಆರೋಪವನ್ನು ಪತಿ ಶ್ಯಾಮ್​ ಮಾಡಿದ್ದಾರೆ. ತನಗೆ ನ್ಯಾಯ ಒದಗಿಸಿಕೊಡಿ ಎಂದು ಶ್ಯಾಮ್​ಕುಮಾರ್ ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ರಿಯಲ್ ಎಸ್ಟೇಟ್ ಉದ್ಯಮಿ ಜೊತೆ ಐಶ್ವರ್ಯ ಅಕ್ರಮ ಸಂಬಂಧ ಆರೋಪವನ್ನು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ವಿರುದ್ಧ ಡ್ರಗ್ಸ್​ ಸೇವನೆ, ಅಕ್ರಮ ಸಂಬಂಧ, ವಂಚನೆ ಆರೋಪ.. ಕೇಸ್​ ದಾಖಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟ ಪತಿ!

https://newsfirstlive.com/wp-content/uploads/2024/03/Addala-Ishwarya.jpg

Load More