ಅನುಭವಿ ಪೈಲೆಟ್​​ಗಳೇ ಇದ್ದರು.. Mayday ಕರೆ ಬಂದ ಕೆಲವೇ ಕ್ಷಣದಲ್ಲಿ ಎಲ್ಲವೂ ಸ್ಥಬ್ಧ..

author-image
Ganesh
Updated On
ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..
Advertisment
  • ಗುಜರಾತ್​ನ ಅಹ್ಮದಾಬಾದ್​ನಲ್ಲಿ ವಿಮಾನ ಪತನ
  • ವಿಮಾನದಲ್ಲಿ 242 ಪ್ರಯಾಣಿಕರು ಇರುವ ಬಗ್ಗೆ ಮಾಹಿತಿ
  • ತಾಂತ್ರಿಕ ದೋಷದ ಬಗ್ಗೆ Mayday ಕರೆ ಮಾಡಿದ್ದ ಪೈಲೆಟ್

ಗುಜರಾತ್​ನ ಅಹ್ಮದಾಬಾದ್​ನಲ್ಲಿ ವಿಮಾನ ಪತನಗೊಂಡಿದೆ. ಅಹ್ಮದಾಬಾದ್​ ಏರ್​ಪೋರ್ಟ್​ನಿಂದ (Ahmedabad airport) ಏರ್ ಇಂಡಿಯಾ ವಿಮಾನ (Air India ) ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್​​ (Meghaninagar)ದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ಗುಜರಾತ್​​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ವಿಮಾನ ದುರಂತದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿದೆ.

ಇದನ್ನೂ ಓದಿ: 625 ಅಡಿ ಎತ್ತರದಿಂದ ಮನೆ ಮೇಲೆ ಬಿದ್ದ ವಿಮಾನ.. ಭಯಾನಕ ವಿಡಿಯೋ ಹೇಗಿದೆ..? Video

publive-image

ಸದ್ಯ ವಿಮಾನ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ವಿಮಾನದಲ್ಲಿ ಅನುಭವಿ ಪೈಲೆಟ್​​ ಇದ್ದರು. ಮುಖ್ಯವಾಗಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ (Sumit Sabharwal) ಅನ್ನೋರು ವಿಮಾನ ಆಪರೇಟ್ ಮಾಡ್ತಿದ್ದರು. ಇವರು ಬರೋಬ್ಬರಿ 8200 ಗಂಟೆಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಇವರು ಲೈನ್ ಟ್ರೈನಿಂಗ್ ಕ್ಯಾಪ್ಟನ್ (LTC) ಆಗಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ: ಗುಜರಾತ್​ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ 30 ಮಂದಿ.. ಪತನಗೊಳ್ಳುವ ದೃಶ್ಯ ಸೆರೆ VIDEO

publive-image

ಜೊತೆಗೆ ಸಹ ಪೈಲೆಟ್​ ಕ್ಲೈವ್ ಕುಂದರ್ (Clive Kunder) ಕೂಡ ಇದ್ದರು. ಇವರಿಗೆ 1,100 ಗಂಟೆಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದರು. ATC ಪ್ರಕಾರ ವಿಮಾನವು ರನ್‌ವೇ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಐದು ನಿಮಿಷದಲ್ಲಿ ಪತನಗೊಂಡಿದೆ. ತಾಂತ್ರಿಕ ದೋಷ ಸಂಭವಿಸಿರುವ ಬಗ್ಗೆ ಮೇಡೇ (Mayday call) ಕರೆ ನೀಡಲಾಗಿದೆ. ಅಪಾಯದ ಕರೆಯ ನಂತರ ವಿಮಾನವು ATC ಸಂಪರ್ಕಕ್ಕೆ ಸಿಗಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: BREAKING: ಅಹಮದಾಬಾದ್ ಏರ್ ಪೋರ್ಟ್​ನಲ್ಲಿ ವಿಮಾನ ಪತನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment