ಪ್ರೀತಿ, ಪ್ರೇಮ ಮದುವೆ.. ಶಿವಮೊಗ್ಗದಲ್ಲಿ ಬೆಚ್ಚಿ ಬೀಳಿಸಿದ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆಗಿದ್ದೇನು?

author-image
admin
Updated On
ಪ್ರೀತಿ, ಪ್ರೇಮ ಮದುವೆ.. ಶಿವಮೊಗ್ಗದಲ್ಲಿ ಬೆಚ್ಚಿ ಬೀಳಿಸಿದ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆಗಿದ್ದೇನು?
Advertisment
  • ಕೆಲ ದಿನಗಳ ಹಿಂದೆ ಯುವತಿ ನಾಪತ್ತೆ ಪ್ರಕರಣ ದಾಖಲಾಗಿತ್ತು
  • ನಾಪತ್ತೆ ಪ್ರಕರಣದಿಂದ ಬಯಲಾಗಿದ್ದು ಗಂಡನ ಕೊಲೆ ರಹಸ್ಯ!
  • ಪ್ರೀತಿಸಿ ಮದುವೆಯಾದವಳನ್ನು ಹತ್ಯೆ ಮಾಡಿದ ಪಾಪಿ ಮಾಡಿದ್ದೇನು?

ಪ್ರೀತಿಸಿ ಮದುವೆಯಾದವಳನ್ನು ಗಂಡನೇ ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಿರೋ ಪ್ರಕರಣ ಶಿವಮೊಗ್ಗದಲ್ಲಿ ಬೆಚ್ಚಿ ಬೀಳಿಸಿದೆ. ಕೊಪ್ಪ ಬಳಿ ಅಚ್ಚರಡಿಯಿಂದ ನಾಪತ್ತೆಯಾಗಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗಾರ ಯಾರು? ಆಗಿದ್ದೇನು? 

ಕಳೆದ ಕೆಲ ದಿನಗಳ ಹಿಂದೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಯುವತಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಪ್ಪ ಪೊಲೀಸರು ಭಯಾನಕ ಕೊಲೆ ಪ್ರಕರಣದ ಸತ್ಯವನ್ನು ಬಯಲು ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಬಳಿ ಈ ಕೊಲೆ ನಡೆದಿದೆ.

publive-image

ಏನಿದು ಘಟನೆ?
ಕೊಪ್ಪದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್‌ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಯುವಕ, ಯುವತಿ ಬೇರೆ ಬೇರೆ ಸಮುದಾಯದವರಾಗಿದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಇದನ್ನೂ ಓದಿ: ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು? 

ಆರೋಪಿ ಸೃಜನ್ ಕೊಪ್ಪದಲ್ಲಿರುವ ಹೆಂಡತಿ ಮನೆಯಲ್ಲಿ ವಾಸ ಮಾಡುತ್ತಿದ್ದ. ಯುವತಿ ತನ್ನನ್ನು ಸಾಗರದಲ್ಲಿರುವ ನಿನ್ನ ಮನೆಗೆ ಕರೆದೊಯ್ಯುವಂತೆ ಕೇಳಿದ್ದಾಳೆ. ಈ ವಿಚಾರಕ್ಕೆ ಸೃಜನ್ ದಂಪತಿ ಮಧ್ಯೆ ಜಗಳವಾಗಿದೆ. ಈ ಜಗಳದ ಮಧ್ಯೆ ಯುವಕ, ಯುವತಿಯನ್ನ ಆಕೆಯ ತಾಯಿಯ ಮನೆಗೆ ಹೋಗುವಂತೆ ಸೂಚಿಸಿದ್ದಾನೆ. ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ಮನೆ ತುಂಬಿಸಿಕೊಳ್ಳುತ್ತೇನೆ ಎಂದಿದ್ದ ಸೃಜನ್ ಉಲ್ಡಾ ಹೊಡೆದಿದ್ದಾನೆ.

publive-image

ಸೃಜನ್ ಮಾತು ನಂಬಿ ಮದುವೆಯಾಗಿದ್ದ ಯುವತಿ ತಾಯಿ ಮನೆಗೆ ವಾಪಸ್ ಹೋಗಲು ಸಿದ್ಧಳಿರಲಿಲ್ಲ. ಇದೇ ವಿಚಾರವಾಗಿ ಸಾಗರಕ್ಕೆ ಬಂದು ಯುವತಿ ಗಲಾಟೆ ಮಾಡಿದ್ದಾಳೆ. ಸಾಗರದಿಂದ ಹೆದ್ದಾರಿಪುರಕ್ಕೆ ಬಂದು ಆತನ ಜೊತೆ ಮಾತನಾಡಿದ್ದಾಳೆ. ಅಲ್ಲಿಯೂ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಯುವಕ ಹಲ್ಲೆ ಮಾಡಿದ್ದು ಯುವತಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: VIDEO: ಕಣ್ಣೆದುರೇ ವಿಮಾನ ಪತನ.. 18 ಮಂದಿ ಭಸ್ಮ.. ಬದುಕಿ ಬಂದ ಪೈಲಟ್​​ 

ಆರೋಪಿಯ ವಿಚಾರಣೆಯಲ್ಲಿ ಯುವತಿಯನ್ನ ಕೊಂದಿದ್ದು ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಆನಂದಪುರದ ಮುಂಬಾಳು ಬಳಿ ಯುವತಿಯ ಶವವನ್ನು ಹೂತು ಹಾಕಿದ್ದಾನೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ತಹಸೀಲ್ದಾರ್‌ ಸಮ್ಮುಖದಲ್ಲಿ ಹೂತಿಟ್ಟ ಶವ ಮೇಲಕ್ಕೆ ತೆಗೆಯಲು ಮುಂದಾಗಿದ್ದಾರೆ. ಆನಂದಪುರ ಠಾಣೆ ಪೊಲೀಸರಿಂದ ಹೆದ್ದಾರಿಪುರದಲ್ಲಿ ಮಹಜರು ಮಾಡಿದ್ದು, ಘಟನಾ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment