/newsfirstlive-kannada/media/post_attachments/wp-content/uploads/2024/06/kalki1.jpg)
ಇಂದು ಡಾರ್ಲಿಂಗ್ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟನೆಯ ಬಹುನೀರಿಕ್ಷಿತ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ:ಜೈಲಲ್ಲಿ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ.. ಸೆರೆವಾಸದಲ್ಲಿ ಚಿಂತಾಕ್ರಾಂತನಾದ ಸಾರಥಿ ಮಾಡ್ತಿರೋದೇನು?
ಇನ್ನು, ಕಲ್ಕಿ 2898 AD ಸಿನಿಮಾ ರಿಲೀಸ್ ಬೆನ್ನಲ್ಲೇ ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ಗೆ ಬಿಗ್ ಆಫರ್ವೊಂದು ಬಂದಿದೆ. ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಟಾಕ್ಸಿಕ್ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದೆ. ಆದರೆ ಇದರ ಮಧ್ಯೆ ಟಾಕ್ಸಿಕ್ ಸಿನಿಮಾಗೆ ಡಿಎನ್ಇಜಿ ವಿಎಫ್ಎಕ್ಸ್ ಕಂಪನಿಯೂ ಪಾರ್ಟ್ನರ್ ಆಗಿದೆ. ಡಿಎನ್ಇಜಿ ಹಾಲಿವುಡ್ನ ಖ್ಯಾತ ವಿಎಫ್ಎಕ್ಸ್ ಕಂಪನಿಯಾಗಿದೆ.
ಹಾಲಿವುಡ್ ಡ್ಯೂನ್- 2, ಗಾಡ್ಜಿಲ್ಲಾ x ಕಾಂಗ್ ಸಿನಿಮಾಗೆ ಗ್ರಾಫಿಕ್ಸ್ ಮಾಡಲಾಗಿತ್ತು. ಅಷ್ಟೇ ಏಕೆ ಇಂದು ರಿಲೀಸ್ ಆಗಿರೋ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾಗೂ ಇದೇ ಟೀಂ ವಿಎಫ್ಎಕ್ಸ್ ಕೆಲಸ ಮಾಡಿತ್ತು. ಕಲ್ಕಿ ಸಿನಿಮಾದ ಕ್ವಾಲಿಟಿ ನೋಡಿ ಟಾಕ್ಸಿಕ್ ಸಿನಿಮಾಗೆ ಬಿಗ್ ಆಫರ್ವೊಂದು ಬಂದಿದೆ. ಇದೇ ಗ್ರಾಫಿಕ್ಸ್ ಟೀಂ ಯಶ್ ನಿರ್ಮಾಣದ ರಾಮಾಯಣ ಸಿನಿಮಾಗೂ ಕೆಲಸ ಮಾಡಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಟಾಕ್ಸಿಕ್ ಸಿನಿಮಾಗೆ ಡಿಎನ್ಇಜಿ ಗ್ರಾಫಿಕ್ಸ್ ಸಪೋರ್ಟ್ ಮಾಡಲಿದೆ. ಸದ್ಯ ಟಾಕ್ಸಿಕ್ ಸಿನಿಮಾವನ್ನು ಏಪ್ರಿಲ್ 10, 2025 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ನಿರ್ದೇಶಕರು ದಿನಾಂಕ ನಿಗದಿಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ