/newsfirstlive-kannada/media/post_attachments/wp-content/uploads/2024/12/POONCH-TRAGIDY.jpg)
ಜಮ್ಮು ಕಾಶ್ಮೀರದಲ್ಲಿ ಸೇನಾ ಟ್ರಕ್ ಪ್ರಪಾತಕ್ಕೆ ಬಿದ್ದು ಐದು ಜನರು ಸೈನಿಕರು ಹುತಾತ್ಮರಾಗಿದ್ದಾರೆ. ಅದರಲ್ಲಿ ಮೂವರು ರಾಜ್ಯದ ಸೈನಿಕರೇ ಆಗಿದ್ದು ಇಂದು ಅವರ ಪಾರ್ಥಿವ ಶರೀರ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿವೆ
ಬೆಳಗಾವಿ ತಾಲೂಕಿ ಸಾಂಬ್ರಾದ ಯೋಧ ದಯಾನಂದ ತಿರಕಣ್ಣವರ ಸೇರಿ ಮೂವರು ವೀರ ಯೋಧರ ಕಳೆಬರಹ ಜಮ್ಮು ಕಾಶ್ಮೀರದಿಂದ ನಾಗ್ಪುರ, ನಾಗ್ಪುರದಿಂದ ಬೆಳಗಾವಿ ಏರ್​ಪೋರ್ಟ್​ಗೆ ಆಗಮಿಸಿತು.ಸಾಂಬ್ರಾ ವಿಮಾನ ನಿಲ್ದಾಣದ ಗೇಟ್ ಮುಂದುಗಡೆ ಯೋಧರ ಪಾರ್ಥಿವ ಶರೀರಗಳಿವೆ ಪುಷ್ಪ ನಮನ ಸಲ್ಲಿಸಲಾಯ್ತು.
/newsfirstlive-kannada/media/post_attachments/wp-content/uploads/2024/12/POONCH-TRAGIDY-1.jpg)
ಕುಂದಾಪುರದ ಕೋಟೇಶ್ವರ ಬಿಜಾಡಿಯ ಅನೂಪ್​, ಬಾಗಲಕೋಟೆಯ ಮಹೇಶ್ ಮರಿಗೊಂಡ ಹಾಗೂ ಬೆಳಗಾವಿ ದಯಾನಂದ ತಿರಕಣ್ಣವರ ಈ ಮೂವರು ಯೋಧರ ಕಳೆಬರಹ ಈಗಾಗಲೇ ರಾಜ್ಯವನ್ನು ತಲುಪಿವೆ.
ಇದನ್ನೂ ಓದಿ: ಗೌತಮ್ ದಿವಾನ್ ಹೆತ್ತತಾಯಿ ಕನ್ನಡತಿ ಕ್ಯಾತಿಯ ಅಮ್ಮಮ್ಮ.. ತೆರೆ ಹಿಂದಿನ ಸುಂದರ ಕ್ಷಣ ಹೇಗಿರುತ್ತೆ ಗೊತ್ತಾ?
ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರಿಂದ ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ. ಬಳಿಕ ಹುತಾತ್ಮ ಯೋಧರ ಕಳೆಬರಹಗಳನ್ನು ಕುಟುಂಬಸ್ಥರಿಗೆ ಸೇನಾ ಅಧಿಕಾರಿಗಳು ಹಸ್ತಾಂತರ ಮಾಡಲಿದ್ದು, ನಂತರ ಮರಾಠಾ ಲೈಟ್ ಇನ್ಫೆಂಟ್ರಿಯಿಂದ ರಸ್ತೆ ಮಾರ್ಗದ ಮೂಲಕ ಹುಟ್ಟೂರಿನತ್ತ ಯೋಧರ ಕಳೆಬರಹಗಳು ತೆಗೆದುಕೊಂಡು ಹೋಗಲಾಗುತ್ತದೆ.
ಇನ್ನು ಸಾಂಬ್ರಾ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಅದೇ ಗ್ರಾಮದ ಯೋಧ ದಯಾನಂದ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us