newsfirstkannada.com

ಕ್ರಿಕೆಟ್ ಆಟಕ್ಕೆ ಸೇರಿಸಿಕೊಂಡಿಲ್ಲ ಎಂದು 112ಗೆ ಕರೆ ಮಾಡಿದ ಹುಡುಗ! ಮುಂದೇನಾಯ್ತು ಗೊತ್ತಾ?

Share :

Published January 21, 2024 at 9:15am

Update January 21, 2024 at 9:16am

    ಸಣ್ಣ ಪುಟ್ಟ ವಿಚಾರಕ್ಕೆ 112ಗೆ ಕರೆ ಮಾಡುತ್ತಿರುವ ಎಳೆಯರು

    ಮಕ್ಕಳ ಅನಗತ್ಯದ ಕರೆಯಿಂದ ಪೊಲೀಸರಿಗೆ ತಲೆ ಬಿಸಿ

    ಅಮ್ಮ-ಮಗಳ ಜಗಳ ಬಿಡಿಸಲು ಬಂದ ಪೊಲೀಸರಿಗೆ ಕ್ಲಾಸ್

ಬೆಂಗಳೂರು: ಸಣ್ಣ ಪುಟ್ಟ ವಿಚಾರಕ್ಕೆ 112ಗೆ ಕರೆ ಬರುತ್ತಿದ್ದು, ಇದರಿಂದ ಪೊಲೀಸರಿಗೆ ತಲೆ ಬಿಸಿಯಾಗಿದೆ. ಅದರಂತೆಯೇ ಕ್ರಿಕೆಟ್ ಆಟಕ್ಕೆ ಸೇರಿಸಿಕೊಂಡಿಲ್ಲ ಎಂದು 112 ಗೆ ಕರೆ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಬಿಳಿ ಟೀ-ಶರ್ಟ್​ ತೊಟ್ಟ ಹುಡುಗನಿಂದ ಪೊಲೀಸರಿಗೆ ಕರೆ ಹೋಗಿದೆ.

ಕ್ರಿಕೆಟ್ ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹುಡುಗ 112 ಗೆ ಕರೆ ಮಾಡಿದ್ದಾನೆ. ಇದನ್ನು ಆಲಿಸಿದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಪ್ಲೇಂಟ್ ಅಟೆಂಡ್ ಮಾಡಿದ್ದಾರೆ. ಆತನನ್ನು ಗೆಳೆಯರೊಂದಿಗೆ ಆಟ ಆಡಲು ಸೇರಿಸಿ ಬಳಿಕ ಅಲ್ಲಿಂದ ತೆರಳಿದ್ದಾರೆ.

ಮತ್ತೊಂದೆಡೆ ಅಮ್ಮ ಮಗಳ ಜಗಳದಲ್ಲಿ ಪೊಲೀಸರು ಹೈರಾಣಾಗಿದ್ದಾರೆ. ಮಾಹಿತಿ ಕೇಳಿದ ಪೊಲೀಸರಿಗೆ ತಾಯಿ ಬಾಯಿಗೆ ಬಂದಂತೆ ಬೈದಿದ್ದಾರೆ.

ತಾಯಿಯನ್ನ ಪುಟ್ಟ ವಿಷಯಕ್ಕೆ ಮಗಳಿಗೆ ಹಲ್ಲೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಗಳು 112 ಗೆ ಕರೆ ಮಾಡಿದ್ದಾಳೆ. ಈ ಹಿನ್ನಲೆ ಪೊಲೀಸರು ಮಾಹಿತಿ ಕೇಳಲು ಮುಂದಾದಾಗ ತಾಯಿ ಫೋನ್ ಕಸಿದು ಏಕವಚನದಲ್ಲಿ ತಾಯಿ ಪೊಲೀಸರನ್ನ ನಿಂದಿಸಿದ್ದಾರೆ. ತಾಯಿ ಪೊಲೀಸರಿಗೆ ನಿಂದಿಸಿರೋ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್ ಆಟಕ್ಕೆ ಸೇರಿಸಿಕೊಂಡಿಲ್ಲ ಎಂದು 112ಗೆ ಕರೆ ಮಾಡಿದ ಹುಡುಗ! ಮುಂದೇನಾಯ್ತು ಗೊತ್ತಾ?

https://newsfirstlive.com/wp-content/uploads/2024/01/112.jpg

Load More