ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು; ಕಾರಣವೇನು?

author-image
admin
Updated On
ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು; ಕಾರಣವೇನು?
Advertisment
  • ಪದೇ ಪದೇ ಯಾಕೆ ಎದ್ದು ಹೋಗ್ತಿದ್ದೀರಾ ಅಂದ್ರೆ ಉತ್ತರವೇ ಇಲ್ಲ!
  • ವರನ ವಿಚಿತ್ರ ವರ್ತನೆಗೆ ಅನುಮಾನಗೊಂಡ ಹೆಣ್ಣಿನ ಕಡೆಯವರು
  • ಮದುವೆ ಮಂಟಪದಲ್ಲಿ ದೊಡ್ಡ ಗಲಾಟೆಯಾಗಿ ಪೊಲೀಸರ ಆಗಮನ

ನವದೆಹಲಿ: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ. ಗಂಡು-ಹೆಣ್ಣಿನ ಅನುಬಂಧಕ್ಕೆ ಗುರು-ಹಿರಿಯರು, ಬಂಧು ಬಳಗದವರು ಸಾಕ್ಷಿಯಾಗುತ್ತಾರೆ. ಆದರೆ ದೆಹಲಿಯ ಸಾಹಿಬಾಬಾದ್​ನಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಮದುವೆ ಕೈಂಕರ್ಯಗಳಲ್ಲೆವೂ ಶಾಸ್ತ್ರೋಕ್ತವಾಗಿ ಸಾಗಿತ್ತು. ಆದ್ರೆ ಮದುವೆ ಗಂಡು ಮಾತ್ರ ಪದೇ ಪದೇ ವಾಶ್​ರೂಂಗೆ ಎದ್ದು ಹೋಗ್ತಿದ್ದ ಇದ್ದು ದಿಢೀರನೇ ಮ್ಯಾರೇಜ್ ಕ್ಯಾನ್ಸಲ್ ಆಗಿ ರಂಪಾಟವೇ ನಡೆದಿದೆ.

ದೆಹಲಿಯ ಸಹಿದಾಬಾದ್​ನಲ್ಲಿ ಗಾಂಧಿನಗರ ನಿವಾಸಿ ಅವಿನಾಶ್‌ ಎಂಬ ಯುವಕನಿಗೆ ವಿವಾಹ ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಅವಿನಾಶ್ ಪದೇ ಪದೇ ಎದ್ದು ವಾಶ್‌ರೂಮ್‌ಗೆ ಅಂತ ಹೇಳಿ ಎದ್ದು ಹೋಗುತ್ತಿದ್ದ. ವಾಶ್​ರೂಮ್ ಹೋಗಿ ಬಂದಾಗಲೆಲ್ಲ ವಿಚಿತ್ರವಾಗಿ ವರ್ತಿಸುತ್ತಿದ್ದ.

ಇದನ್ನೂ ಓದಿ: ಹುಟ್ಟೂರಿಗೆ ಶವವಾಗಿ ಬಂದ ಶೋಭಿತಾ ಶಿವಣ್ಣ; ಬ್ರಹ್ಮಗಂಟು ಸೀರಿಯಲ್ ನಟಿ ದುರಂತಕ್ಕೆ ಕಣ್ಣೀರಿಟ್ಟ ಜನ 

ಮದುಮಗ ಅವಿನಾಶ್‌ಗೆ ಎಲ್ಲರೂ ಯಾಕೆ ಪದೇ ಪದೇ ಎದ್ದು ಹೋಗ್ತಿದ್ದೀರಾ ಅಂತ ಕೇಳಿದ್ರೆ ಉತ್ತರ ಕೊಟ್ಟಿರಲಿಲ್ಲ. ವಾಶ್‌ರೂಮ್‌ಗೆ ಹೋಗಿ ಬಂದಾಗ ಅವಿನಾಶ್‌ಗೆ ಸರಿಯಾಗಿ ನಡೆಯಲು ಕೂಡ ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ವಧು ಏನೇ ಕೇಳಿದರೂ ಆತ ಯಾವ ಉತ್ತರ ನೀಡುತ್ತಿರಲಿಲ್ಲ.

publive-image

ವರನ ಈ ವಿಚಿತ್ರ ವರ್ತನೆಗೆ ಅನುಮಾನಗೊಂಡ ಹೆಣ್ಣಿನ ಕಡೆಯವರು ಅವನನ್ನೇ ಹಿಂಬಾಲಿಸಿದ್ದಾರೆ. ಅಲ್ಲಿ ನಡೆಯುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ವಾಶ್‌ರೂಮ್‌ಗೆ ಅಂತ ಸುಳ್ಳು ಹೇಳಿ ಹೋಗುತ್ತಿದ್ದ ಅವಿನಾಶ್ ಸ್ನೇಹಿತರೊಂದಿಗೆ ಸೇರಿ ಮಾದಕ ದ್ರವ್ಯ ಸೇವಿಸುತ್ತಿದ್ದ. ಮದುಮಗನ ಡ್ರಗ್ಸ್​​ ಸೇವನೆ ಬಗ್ಗೆ ತಿಳಿದ ಮದುವೆ ಮನೆಯಲ್ಲಿದ್ದವರು ಫುಲ್ ಶಾಕ್ ಆಗಿದ್ದಾರೆ.

ಕೊನೆಗೆ ವಧು ಮದುವೆ ಮಂಟಪದಲ್ಲಿ ಅವಿನಾಶ್​ನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾರೆ. ಈ ವೇಳೆ ವರನ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಎಂಟ್ರಿಯಾದ ಮೇಲೆ ಮದುವೆ ಮುರಿದು ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment