/newsfirstlive-kannada/media/post_attachments/wp-content/uploads/2024/04/BNG_CHILD_DIED.jpg)
ಆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಅವರೆಲ್ಲರೂ ಕುಟುಂಬ ಸಮೇತರಾಗಿ ಸಂಬಂಧಿ ಮದ್ವೆ ಮುಗಿಸಿ ವಾಪಾಸ್ಸಾಗಿದ್ರು. ಎಲ್ಲವೂ ಅಂದುಕೊಂಡಂತೆ ನಡೀತು ಅನ್ನುವಷ್ಟರಲ್ಲಿ ಆ ಕಂದಮ್ಮನ ಪಾಲಿಗೆ ತಂದೆಯೇ ಯಮನಾಗಿ ಎಂಟ್ರಿ ಕೊಟ್ಟಿದ್ದ. ಎತ್ತಿ, ಮುದ್ದಾಡಿದ್ದ ತಂದೆಯೇ ಆ ಮುಗುವಿನ ಉಸಿರನ್ನೇ ನಿಲ್ಲಿಸಿದ್ದ. ಆಟವಾಡ್ತಿದ್ದ ಮಗುವಿನ ಮೇಲೆ ಕಾರು ಹರಿದು ಬಿಟ್ಟಿದೆ. ನೋಡ್ ನೋಡ್ತಿದ್ದಂತೆ ಮಗು ಸಾವನ್ನಪ್ಪಿದೆ. ಹೀಗೆ ಕಾರು ಹತ್ತಿಸಿ ಆ ಕಂದಮ್ಮ ಸಾವಿಗೆ ಕಾರಣವಾಗಿದ್ದು ಬೇಱರು ಅಲ್ಲ, ಸ್ವಂತ ತಂದೆ.
ಇದನ್ನೂ ಓದಿ:VIDEO: ಸಿದ್ದರಾಮಯ್ಯಗೆ ಫ್ರೀ ಬಸ್ ಟಿಕೆಟ್ ಹಾರ ಹಾಕಿದ ವಿದ್ಯಾರ್ಥಿನಿ; ಸಿಎಂ ಫುಲ್ ಖುಷ್
ಏಪ್ರಿಲ್ 21ರ ರಾತ್ರಿ 11 ಗಂಟೆ 26 ನಿಮಿಷಕ್ಕೆ ಸಿಲಿಕಾನ್ ಸಿಟಿಯ ಹೆಚ್.ಎಸ್.ಆರ್ ಲೇಔಟ್ನ ಅಗರದ ಮನೆಯೊಂದರ ಗೇಟ್ ಬಳಿ ನಿಂತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಶೈಹಾ ಜನ್ನತ್ ಸಾವನ್ನಪ್ಪಿದೆ. ತನಗೇ ಗೊತ್ತಿಲ್ಲದ್ದಂತೆ ತಂದೆಯೇ ತನ್ನ ಮಗುವಿನ ಮೇಲೆ ಕಾರು ಹತ್ತಿಸಿ ಜೀವ ತೆಗೆದು ಬಿಟ್ಟಿದ್ದನು.
ವಿಧಿಯ ಆಟವೇ ಘೋರ!
- ಮೃತ ಶೈಹಾ ಜನ್ನತ್ ಮನೆಯಲ್ಲಿ ಮದ್ವೆ ಸಂಭ್ರಮ ಜೋರಾಗಿತ್ತು
- ಸಂಬಂಧಿ ಮದುವೆಗೆ ಚನ್ನಪಟ್ಟಣಕ್ಕೆ ತೆರಳಿ ಕುಟುಂಬಸ್ಥರು ವಾಪಾಸ್
- ಕಾರು ಗೇಟ್ ಬಳಿ ನಿಂತಿತ್ತು, ಕುಟುಂಬಸ್ಥರು ಮನೆಯೊಳಗೆ ಹೋಗಿದ್ರು
- ಮಗುವಿನ ತಂದೆ ಕಾರಿನಲ್ಲಿದ್ದ ಲಗೇಜ್ ಅನ್ನ ಮನೆಯೊಳಗೆ ಇಡ್ತಿದ್ರು
- ಅಷ್ಟೊತ್ತಿಗೆ ಎಲ್ಲೋ ಹೋಗೋದಕ್ಕೆ ಮಗುವಿನ ತಂದೆ ರೆಡಿಯಾಗಿದ್ರು
- ಕಾರು ಸ್ಟಾರ್ಟ್ ಮಾಡೋಣ ಅನ್ನುವಷ್ಟರಲ್ಲಿ ಓಡೋಡಿ ಬಂದ ಮಗು
- ಕಾರ್ನ ಡೋರ್ ಬಳಿಯೇ ನಿಂತಿದ್ದ ಕಂದಮ್ಮ ಶೈಹಾ ಜನ್ನತ್
- ಮಗಳನ್ನ ಗಮನಿಸದೆ ಕಾರನ್ನ ಸ್ಟಾರ್ಟ್ ಮಾಡಿದ ಮಗುವಿನ ತಂದೆ
- ಮಗುವಿನ ಮೇಲೆ ಕಾರು ಹರಿದು ಕಂದಮ್ಮನ ಉಸಿರನ್ನೇ ನಿಲ್ಲಿಸಿತ್ತು
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್ ಶಾಕ್.. ಕೋಟಿ ಕೋಟಿ ಹಣ ಜಪ್ತಿ; ಮೂವರ ವಿರುದ್ಧ FIR
ಸದ್ಯ ಘಟನೆ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇನೆ ಹೇಳಿ ಕೈ ತುತ್ತು ತಿನ್ನಿಸಿ, ಪ್ರೀತಿಯಿಂದ ಸಾಕಿ ಸಲುಹಿದ್ದ ತಂದೆಯ ಕೈಯಿಂದ್ಲೇ ಮಗು ಹೀಗೆ ಸಾವನ್ನಪ್ಪಿದ್ದು, ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ