newsfirstkannada.com

VIDEO: ಎಂದೂ ಕಾಣದ ಧೂಳು, ಬಿರುಗಾಳಿಗೆ ತತ್ತರಿಸಿದ ಮುಂಬೈ ಮಹಾನಗರ.. ಭಾರೀ ಅನಾಹುತ!

Share :

Published May 13, 2024 at 6:11pm

  ಧೂಳು, ಬಿರುಗಾಳಿ ಅಬ್ಬರಕ್ಕೆ ಮುಂಬೈ ನಗರದಲ್ಲಿ ಜನಜೀವನ ಅಸ್ತವ್ಯಸ್ತ

  ಪೆಟ್ರೋಲ್ ಬಂಕ್ ಮೇಲೆ ಬಿದ್ದ ಅತಿ ದೊಡ್ಡ ಜಾಹೀರಾತು ಫಲಕ!

  ಬೈಕ್ ಸವಾರರು, ಕಾರ್ ಡ್ರೈವರ್‌ಗಳಿಗೆ ಪೊಲೀಸರಿಂದ ಎಚ್ಚರಿಕೆ ಸಂದೇಶ

ಮುಂಬೈನಲ್ಲಿ ಧೂಳು ಸಹಿತ ಭಾರೀ ಬಿರುಗಾಳಿ ಬೀಸಿದ್ದು, ಹಲವು ಅವಾಂತರಗಳನ್ನ ಸೃಷ್ಟಿ ಮಾಡಿದೆ. ಒಂದೊಂದು ದೃಶ್ಯವೂ ಭಯಾನಕವಾಗಿದ್ದು, ಮುಂಬೈ ನಿವಾಸಿಗಳು ಧೂಳು, ಬಿರುಗಾಳಿಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.

ಬಿರುಗಾಳಿಯ ರಭಸಕ್ಕೆ ಮುಂಬೈನ ಘಟಕೋಪುರದ ಪೆಟ್ರೋಲ್ ಬಂಕ್ ಮೇಲೆ ದೊಡ್ಡದಾದ ಜಾಹೀರಾತು ಫಲಕ ಬಿದ್ದಿದೆ. ದೊಡ್ಡ ಜಾಹೀರಾತು ಫಲಕ ಬೀಳುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮುಂಬೈನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

ಜಾಹೀರಾತು ಫಲಕ ಬಿದ್ದ ಪರಿಣಾಮ ಪೆಟ್ರೋಲ್ ಬಂಕ್‌ನಲ್ಲಿದ್ದ 7 ಮಂದಿಗೆ ತೀವ್ರ ಗಾಯಗಳಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭಾರೀ ಮಳೆ.. ಭೀಕರ ಪ್ರವಾಹ.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಅಮೆರಿಕ..! 

ಮತ್ತೊಂದೆಡೆ ಮುಂಬೈನ ವಾಡಾಲದಲ್ಲಿ ಕಬ್ಬಿಣದ ಪಾರ್ಕಿಂಗ್ ಲಾಟ್‌ ಕೂಡ ಕುಸಿದು ಬಿದ್ದಿದೆ. ಭಾರಿ ಮಳೆ, ಬಿರುಗಾಳಿಯಿಂದ ಮುಂಬೈನ ಹಲವಡೆ ಭಾರೀ ಅನಾಹುತ ಸಂಭವಿಸಿದೆ.

ಧೂಳು ಸಹಿತ ಬಿರುಗಾಳಿಯಿಂದ ಮುಂಬೈ ಏರ್ ಪೋರ್ಟ್‌ನಲ್ಲಿ ಕೆಲ ಕಾಲ ವಿಮಾನ ಹಾರಾಟ ಸ್ಥಗಿತ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಬೈಕ್ ಸವಾರರು, ಕಾರ್ ಡ್ರೈವರ್‌ಗಳಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಪೊಲೀಸರು ಸಲಹೆ ನೀಡಿದ್ದಾರೆ. ಪಶ್ಚಿಮ ರೈಲ್ವೇ ಇಲಾಖೆ ಕೂಡ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಎಂದೂ ಕಾಣದ ಧೂಳು, ಬಿರುಗಾಳಿಗೆ ತತ್ತರಿಸಿದ ಮುಂಬೈ ಮಹಾನಗರ.. ಭಾರೀ ಅನಾಹುತ!

https://newsfirstlive.com/wp-content/uploads/2024/05/mumbai-1.jpg

Load More