/newsfirstlive-kannada/media/post_attachments/wp-content/uploads/2025/07/SIDDU-DK.jpg)
ಪವರ್ ಶೇರಿಂಗ್ ಫೈಟ್ನಲ್ಲಿ ದಿನಕ್ಕೊಂದು ಟರ್ನ್. ಕ್ಷಣಕ್ಕೊಂದು ಟ್ವಿಸ್ಟ್ ಕಾಣಸಿಗ್ತಿದೆ. ಸಿದ್ದರಾಮಯ್ಯ 5 ವರ್ಷದ ಜಪ ಮಾಡ್ತಿದ್ರೆ, ಡಿ.ಕೆ.ಶಿವಕುಮಾರ್ ಮೌನಕ್ಕೆ ಜಾರಿದ್ರು. ಈ ಬೆನ್ನಲ್ಲೇ ಶಿರಡಿ ಸಾಯಿಬಾಬಾನ ದರ್ಶನಕ್ಕೆ ಮುಂದಾಗಿದ್ರು. ಈ ಹೊತ್ತಲ್ಲೇ ಮತ್ತೆ ಡಿಕೆಶಿ ದೆಹಲಿಗೆ ಹಾರಿದ್ದಾರೆ.
ದಂಪತಿ ಸಮೇತ ಶಿರಡಿ ಸಾಯಿಬಾಬಾ ದರ್ಶನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್, ಶ್ರದ್ಧೆ ನಂಬಿಕೆ ಮತ್ತು ತಾಳ್ಮೆ ಇದ್ದರೆ ಎಲ್ಲವೂ ಸಾಧ್ಯ ಅಂತ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಪ್ರಯತ್ನ ವಿಫಲವಾಗಬಹುದು ಪ್ರಾರ್ಥನೆ ವಿಫಲವಾಗಲ್ಲ ಅಂತಾ ಸಂದೇಶ ರವಾನಿಸಿದ್ರು.
ಇದನ್ನೂ ಓದಿ: ವಿಶ್ವಕ್ಕೆ ದೊಡ್ಡ ಮೆಸೇಜ್ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!
ಪ್ರಾರ್ಥನೆ ವಿಫಲವಾಗಲ್ಲ
ಪವಿತ್ರವಾದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಬಾಬಾರವರ ದಿವ್ಯ ದರ್ಶನ ಪಡೆದಿರುವುದು ನಿಜಕ್ಕೂ ಪುಣ್ಯಕರ ಅನಿಸುತ್ತಿದೆ. ಶ್ರದ್ಧೆ, ನಂಬಿಕೆ ಮತ್ತು ತಾಳ್ಮೆ ಯಿಂದ ಎಲ್ಲವೂ ಸಾಧ್ಯ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ-ಡಿ.ಕೆ ಶಿವಕುಮಾರ್, ಡಿಸಿಎಂ
ಪ್ರಾರ್ಥನೆ ವಿಫಲವಾಗಲ್ಲ ಅಂತಾ ದೇವರ ಮೊರೆ ಹೋದ ಬೆನ್ನಲ್ಲೇ ಹೈಕಮಾಂಡ್ ಗಂಟೆ ಬಾರಿಸಿದಂತಿದೆ. ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ದಾರಿ ಹಿಡಿದಿದ್ದಾರೆ.
ದೆಹಲಿ ದಾರಿಯಲ್ಲಿ ಡಿಕೆಶಿ
- ಡೆಲ್ಲಿಯಲ್ಲೇ ಸಿಎಂ ಸಂದೇಶ ಬಳಿಕ 2 ದಿನ ಸೈಲೆಂಟ್ ಆಗಿದ್ದ ಡಿಕೆಶಿ
- ರಾಹುಲ್ ಗಾಂಧಿ ಭೇಟಿಯಾಗದೇ ವಾಪಸ್ ಆಗಿದ್ದ ಸಿಎಂ, ಡಿಸಿಎಂ
- ಡಿ.ಕೆ ಶಿವಕುಮಾರ್ಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ
- ಶಿರಡಿ ಸಾಯಿಬಾಬಾನ ದರ್ಶನ ಪಡೆದ ಬೆನ್ನಲ್ಲೇ ವರಿಷ್ಠರ ಸಂದೇಶ
- ಪುಣೆಯಿಂದ ನೇರವಾಗಿ ದೆಹಲಿಗೆ ತೆರಳಿರುವ ಡಿ.ಕೆ ಶಿವಕುಮಾರ್
- ಹೈಕಮಾಂಡ್ ಯಾವುದೇ ಆಹ್ವಾನ ಕೊಟ್ಟಿಲ್ಲ ಅಂತಿರೋ ಡಿಕೆಶಿ
- ಖಾಸಗಿ ಕಾರ್ಯಕ್ರಮಕ್ಕಾಗಿ ಹೋಗ್ತಿರೋದೆಂದ ಡಿ.ಕೆ ಶಿವಕುಮಾರ್
ಒಟ್ನಲ್ಲಿ ಡಿ.ಕೆ ಶಿವಕುಮಾರ್ ತಾಳ್ಮೆಯ ದೀಕ್ಷೆ ಪಡೆದು, ಪ್ರಾರ್ಥನೆ ಮೂಲಕ ಫಲ ಬಯಸ್ತಿರೋ ಹೊತ್ತಲ್ಲಿ ಮತ್ತೆ ಡಿ.ಕೆ ಶಿವಕುಮಾರ್ಗೆ ದೆಹಲಿಗೆ ಪ್ರಯಾಣಿಸ್ತಿದ್ದಾರೆ. ಸಹಜವಾಗಿ ಇಂದು ಕುತೂಹಲದ ಬುಟ್ಟಿಯನ್ನ ಓಪನ್ ಮಾಡಿದೆ. ಕುರ್ಚಿ ಕುರುಕ್ಷೇತ್ರದ ನಡುವೆ ಈ ಬೆಳವಣಿಗೆ ದೊಡ್ಡ ಮಹತ್ವವನ್ನೇ ಪಡೆದುಕೊಂಡಿದೆ.
ಇದನ್ನೂ ಓದಿ: Voter ID ಇದೆಯಾ.. ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಸಿದ್ಧತೆ, ದಾಖಲೆ ಏನ್ ಕೊಡಬೇಕು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ