newsfirstkannada.com

ಬಣ್ಣದ ಹೆಸರಲ್ಲಿ ಭಾರತೀಯರ ನಿಂದನೆ; ಎಲೆಕ್ಷನ್‌ ಹೊತ್ತಲ್ಲೇ ಕಿಡಿ ಹೊತ್ತಿಸಿದ ಕಾಂಗ್ರೆಸ್ಸಿಗ!

Share :

Published May 8, 2024 at 6:16pm

  ಪೂರ್ವ ಭಾಗದ ಭಾರತೀಯರು ನೋಡಲು ಚೈನೀಸ್ ರೀತಿ ಕಾಣುತ್ತಾರೆ

  ದಕ್ಷಿಣ ಭಾರತದ ಜನರು ನೋಡಲು ಆಫ್ರಿಕಾದ ಜನರ ರೀತಿ ಕಾಣುತ್ತಾರೆ

  ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ಮೋದಿ ಖಂಡನೆ

ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿರುವಾಗಲೇ ಕಾಂಗ್ರೆಸ್, ಬಿಜೆಪಿ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಇವತ್ತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಪಿತ್ರೋಡಾ ಅವರ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ರಾಹುಲ್‌ ಗಾಂಧಿ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ಯಾಮ್ ಪಿತ್ರೋಡಾ ಅವರು ವೈವಿಧ್ಯತೆ ಇದ್ದರೂ ಭಾರತ ಒಗ್ಗಟ್ಟಿನ ದೇಶವಾಗಿದೆ. ಭಾರತದ ಪೂರ್ವ ಭಾಗದ ಜನರು ನೋಡಲು ಚೈನೀಸ್ ರೀತಿ ಕಾಣುತ್ತಾರೆ. ಭಾರತದ ಪಶ್ಚಿಮದ ಜನರು ನೋಡಲು ಅರಬ್ ರೀತಿ ಕಾಣುತ್ತಾರೆ. ಉತ್ತರ ಭಾರತದ ಜನರು ನೋಡಲು ಬಹುಶಃ ಬಿಳಿ ಬಣ್ಣದವರು. ದಕ್ಷಿಣ ಭಾರತದ ಜನರು ನೋಡಲು ಆಫ್ರಿಕಾದ ಜನರ ರೀತಿ ಕಾಣುತ್ತಾರೆ ಎಂದಿದ್ದಾರೆ.

ಸ್ಯಾಮ್ ಪಿತ್ರೋಡಾ ಅವರ ಈ ವಿವಾದಾತ್ಮಕ ಹೇಳಿಕೆ ಬಹಳಷ್ಟು ಚರ್ಚೆಗೀಡಾಗಿದ್ದು ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ದೇಶದ ಜನರನ್ನು ಬಣ್ಣದ ಮೇಲೆ ನಿಂದನೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಇದಕ್ಕೆ ಜವಾಬ್ದಾರರು ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ‘ಸತ್ತ ಮೇಲೆ ಅರ್ಧ ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ’- ಏನಿದು ಸ್ಯಾಮ್ ಪಿತ್ರೋಡಾ ಮತ್ತು ಕಾಂಗ್ರೆಸ್​​ ವಿವಾದ? 

ಸ್ಯಾಮ್ ಪಿತ್ರೋಡಾ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದ ಬಳಿಕ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಖಂಡಿಸಿದೆ. ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಮತ್ತು ಸಂಸದ ಜೈರಾಮ್ ರಮೇಶ್ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದೇಶದ ವೈವಿಧ್ಯತೆ ಬಗ್ಗೆ ನೀಡಿರೋ ಹೇಳಿಕೆ ಖಂಡನಿಯ. ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡನೆ ಮಾಡುತ್ತೆ. ಅವರ ಮಾತನ್ನ ಯಾವುದೇ ಕಾರಣಕ್ಕೂ ಒಪ್ಪಲು ಸಾದ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಅಮೆರಿಕಾದ ಪಿತ್ರಾರ್ಜಿತ ಆಸ್ತಿ ತೆರಿಗೆ ಹಕ್ಕು ಬಗ್ಗೆ ಭಾರತದಲ್ಲೂ ಚರ್ಚೆ ನಡೆಸಬೇಕು ಎಂದಿದ್ದರು. ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡಿತ್ತು. ಇದೀಗ ಭಾರತದ ಜನರನ್ನು ಜನಾಂಗೀಯವಾಗಿ ಹೋಲಿಕೆ ಮಾಡಿ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಣ್ಣದ ಹೆಸರಲ್ಲಿ ಭಾರತೀಯರ ನಿಂದನೆ; ಎಲೆಕ್ಷನ್‌ ಹೊತ್ತಲ್ಲೇ ಕಿಡಿ ಹೊತ್ತಿಸಿದ ಕಾಂಗ್ರೆಸ್ಸಿಗ!

https://newsfirstlive.com/wp-content/uploads/2024/05/Sam-Pitroda-PM-Modi.jpg

Load More