newsfirstkannada.com

ಸಿಲಿಂಡರ್ ಸಿಡಿದು ಕಾರ್ಮಿಕರ ಕಾಲೋನಿ ಶೆಡ್​ಗಳಿಗೆ ಬೆಂಕಿ.. ಜೀವ ಭಯದಿಂದ ಓಡಿದ ಜನ

Share :

Published March 10, 2024 at 9:20am

    ಬೆಂಕಿಯಿಂದಾಗಿ ಶೆಡ್​ನಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲು

    ಒಂದು ಸಾಲಿನಲ್ಲಿನ ನಾಲ್ಕೈದು ಶೆಡ್‌ಗಳಿಗೆ ವ್ಯಾಪಿಸಿರುವ ಅಗ್ನಿ

    ಸಿಲಿಂಡರ್ ಸಿಡಿದು ಕಾರ್ಮಿಕರ ಕಾಲೋನಿ ಮನೆಗಳಿಗೆ ಬೆಂಕಿ

ಉತ್ತರಕನ್ನಡ: ಅಡುಗೆ ಸಿಲಿಂಡರ್ ಸಿಡಿದು ಬೆಂಕಿ ಧಗ ಧಗ ಹೊತ್ತಿಕೊಂಡು ನಾಲ್ಕೈದು ಶೆಡ್‌ಗಳಿಗೆ ವ್ಯಾಪಿಸಿರುವ ಘಟನೆ ಕಾರವಾರದ ಮುದಗಾ ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ನಡೆದಿದೆ. ಅದೃಷ್ಟಾವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಾರವಾರದ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯ ಶೆಡ್​ನಲ್ಲಿ ಅಡುಗೆ ಮಾಡುವಾಗ ಸಿಲಿಂಡರ್​ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದು ಕ್ಷಣಾರ್ಧದಲ್ಲಿ ನಾಲ್ಕೈದು ಶೆಡ್​ಗಳಿಗೆ ವ್ಯಾಪಿಸಿಕೊಂಡು ಧಗ ಧಗ ಉರಿದಿದೆ. ಈ ಶೆಡ್​ಗಳೆಲ್ಲ ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪನಿಯ ಕಾರ್ಮಿಕರ ಶೆಡ್‌ಗಳು ಆಗಿವೆ. ಇನ್ನು ಬೆಂಕಿ ಹೊತ್ತಿ ಉರಿದಿದ್ದರಿಂದ ಶೆಡ್​​ನಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಇನ್ನು ಸ್ಫೋಟದ ಶಬ್ಧ ಕೇಳುತ್ತಿದ್ದಂತೆ ಅಕ್ಕ-ಪಕ್ಕದ ಶೆಡ್​ನಲ್ಲಿದ್ದವರೆಲ್ಲ ಎದ್ದೆನೋ, ಬಿದ್ದಿನೋ ಎಂದು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಒಂದು ಸಾಲಿನಲ್ಲಿ 150ಕ್ಕೂ ಹೆಚ್ಚು ಶೆಡ್​ಗಳಿದ್ದು ಅದರಲ್ಲಿ ನಾಲ್ಕೈದಕ್ಕೆ ಮಾತ್ರ ಬೆಂಕಿ ವ್ಯಾಪಿಸಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಂಡರ್ ಸಿಡಿದು ಕಾರ್ಮಿಕರ ಕಾಲೋನಿ ಶೆಡ್​ಗಳಿಗೆ ಬೆಂಕಿ.. ಜೀವ ಭಯದಿಂದ ಓಡಿದ ಜನ

https://newsfirstlive.com/wp-content/uploads/2024/03/UK_BLAST.jpg

Load More