/newsfirstlive-kannada/media/post_attachments/wp-content/uploads/2023/10/INSTA-LOVE.jpg)
ಬಾಗಲಕೋಟೆ: ಇನ್​​ಸ್ಟಾಗ್ರಾಮ್‌ನಲ್ಲಿ ಪ್ರೀತಿಯಾಗಿ ಬಳಿಕ ಮದುವೆ ಮಾಡಿಕೊಂಡ ಭೂಪ, ಹೆಂಡತಿಗೆ ಕೈಕೊಟ್ಟು ಪರಾರಿಯಾಗಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ಇಮ್ರಾನ್ ಕಿಲಾರಿ ಎಂಬಾತ ಬಿಹಾರದ ಮಹಿಳೆಗೆ ವಂಚನೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಮದುವೆ ಬಳಿಕ ಎರಡು ದಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಮ್ರಾನ್ ಬಳಿಕ ಕೈಕೊಟ್ಟು ಪರಾರಿಯಾಗಿದ್ದಾನೆ. ಕಳೆದ ಒಂದು ತಿಂಗಳ ಹಿಂದೆ ಇಸ್ಟಾಗ್ರಾಮ್​ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಮಹಿಳೆ ಬಿಹಾರದ ಮೂಲದವಳಾದ ಹಿನ್ನೆಲೆಯಲ್ಲಿ, ಮದುವೆ ಮಾಡಿಕೊಳ್ಳಲು ಅಲ್ಲಿಗೇ ತೆರಳಿದ್ದ.
ಬಿಹಾರದಲ್ಲಿ ಮಹಿಳೆಯ ಕುಟುಂಬಸ್ಥರು ಇಬ್ಬರಿಗೂ ಮದುವೆ ಮಾಡಿಸಿದ್ದರು. ಮದುವೆ ಬಳಿಕ ಕದಾಂಪುರ ಪುನರ್ವಸತಿ ಕೇಂದ್ರದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ. ಎರಡು ದಿನಗಳ ಕಾಳ ಪತ್ನಿಯ ಜೊತೆ ಸಂಸಾರ ಹೂಡಿದ ಆರೋಪಿ ಇಮ್ರಾನ್ ಪರಾರಿಯಾಗಿದ್ದಾನೆ. ಎರಡು ದಿನಗಳಿಂದ ಗಂಡನಿಗಾಗಿ ಕಾದು ಕುಳಿತ ಮಹಿಳೆ, ಬಾರದ ಹಿನ್ನೆಲೆಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ.
ಮತ್ತೊಂದು ಕಡೆ ಮಹಿಳೆಗೆ ಭಾಷೆ ಬಾರದೆ ದಿಕ್ಕು ತೋಚದಂತಾಗಿದೆ. ನಾನಿಲ್ಲೇ ಸಾಯ್ತೀನಿ ಬಿಹಾರಕ್ಕೆ ಹೋಗಲ್ಲ. ಗಂಡನಿಲ್ಲದೇ ಬಿಹಾರಕ್ಕೆ ಹೋಗಿ ನಾನೇನು ಮಾಡಲಿ ಎಂದು ಮಹಿಳೆ ಕಣ್ಣೀರು ಇಟ್ಟಿದ್ದಾಳೆ. ಅಂದ್ಹಾಗೆ ಇಬ್ಬರಿಗೆ ಇದು ಎರಡನೇಯ ಮದುವೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us