/newsfirstlive-kannada/media/post_attachments/wp-content/uploads/2025/03/FIRST-NIGHT-1.jpg)
ಮದುವೆ ಹಾಗೂ ಮೊದಲ ರಾತ್ರಿ, ಇವೆರಡೂ ಮಾನವ ಜಗತ್ತಿನ ಅತ್ಯಮೂಲ್ಯ ಕ್ಷಣಗಳು. ನಾನೊಬ್ಬನಿಗೆ, ಒಬ್ಬಳಿಗೆ ಮೀಸಲು ಎಂದು ಉಳಿಸಿಕೊಂಡು ಬಂದಿರುವ ನಮ್ಮ ದೈಹಿಕ ಹಾಗೂ ಮನಸ್ಸಿನ ಪಾವಿತ್ರ್ಯವನ್ನು ಅಂದು ನಮ್ಮಿಷ್ಟದ ಜೀವಕ್ಕೆ ಸಮರ್ಪಿಸುವ ದಿನ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಮೌಲ್ಯಗಳು ಕಾಣ ಸಿಗುವುದು ತುಂಬಾ ಅಪರೂಪ. ಅಲ್ಲಿ ಮದುವೆಗೆ ಒಂದು ಪಾವಿತ್ರ್ಯ ನಂಟು ಇದ್ದರು. ದೈಹಿಕ ಮಿಲನಕ್ಕೆ ಯಾವುದೇ ಕಟ್ಟುಪಾಡುಗಳನ್ನು ಕಟ್ಟಿಕೊಂಡವರಲ್ಲ. ಅದೊಂದು ಪಾಪ ಎಂದೂ ಕೂಡ ಭಾವಿಸಿಲ್ಲ. ಭಾರತದಲ್ಲಿ ದೈಹಿಕ ಮಿಲನ ಮಡಿವಂತಿಕೆಗಳಿಂದ ತುಂಬಿದೆ. ಹಾದಿ ತಪ್ಪಿದೆ ಅವರನ್ನು ಬೇರೆಯದ್ದೇ ದೃಷ್ಟಿಯಿಂದ ನೋಡಲಾಗುತ್ತದೆ. ಅದಕ್ಕೆ ಇಲ್ಲಿ ಮದುವೆ ಮತ್ತು ಮೊದಲ ರಾತ್ರಿಗೆ ವಿಶೇಷ ಪ್ರಾಮುಖ್ಯತೆಗಳನ್ನು ನೀಡಲಾಗಿದೆ.
ಆದ್ರೆ ಇದೇ ಭಾರತದಲ್ಲಿ ಒಂದು ರಾಜ್ಯದಲ್ಲಿ ಮದುವೆಗೆ ಮುನ್ನವೇ ಎಲ್ಲರ ಒಪ್ಪಿಗೆಯೊಂದಿಗೆ ಮೊದಲ ರಾತ್ರಿ ನಡೆಯುತ್ತೆ. ಮೊದಲ ರಾತ್ರಿ ಮುಗಿಸಿದ ನಂತರ ಜೋಡಿಗಳು ಹಸೆಮಣೆ ಏರುತ್ತಾರೆ. ನಿಮಗೆ ಆಶ್ಚರ್ಯವಾದರೂ ಕೂಡ ಇದು ಸತ್ಯ.
ಇಂತಹದೊಂದು ಪರಂಪರೆ ಛತ್ತೀಸ್ಗಢದ ಬಸ್ತಾರದಲ್ಲಿ ನಡೆದುಕೊಂಡು ಬಂದಿದೆ. ಇಲ್ಲಿ ಮದುವೆಯಾಗುವ ಜೋಡಿಗಳು ಮೊದಲು ತಮ್ಮ ಮೊದಲ ರಾತ್ರಿಯಲ್ಲಿ ಮಿಲನೋತ್ಸವ ಆಚರಿಸಿಕೊಂಡೇ ಬರಬೇಕು.
ಬಸ್ತರ್ನಲ್ಲಿ ಒಂದು ವಿಶೇಷವಾದ ಸಮುದಾಯವಿದೆ. ಈ ಒಂದು ಸಮುದಾಯದಲ್ಲಿ ಇಂತಹದೊಂದು ಪರಂಪರೆ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಮದುವೆಗೆ ಮುನ್ನ ಪ್ರೀತಿ ಮಾಡಲು ಹಾಗೂ ಮೊದಲ ರಾತ್ರಿ ಮುಗಿಸಿಕೊಂಡು ಬರಲು ಸಮುದಾಯದ ಹಿರಿಯರು ಹಾಗೂ ಗಂಡು ಹೆಣ್ಣಿನ ಕಡೆಯವರು ಜೋಡಿಗೆ ಅವಕಾಶ ಮಾಡಿ ಕೊಡುತ್ತಾರೆ. ಮತ್ತು ಅದು ಅತ್ಯಂತ ಅವಶ್ಯಕ ಎಂದು ಕೂಡ ಹೇಳುತ್ತಾರೆ. ಈ ಒಂದು ಪದ್ಧತಿಗೆ ಇಲ್ಲಿ ಗೋಟುಲು ಎಂದು ಹೆಸರು. ಈ ಗೋಟುಲು ಪರಂಪರೆಯನ್ನು ಅಲ್ಲಿಯ ಮದಿಯಾ ಎಂಬ ಆದಿವಾಸಿಗಳು ಪವಿತ್ರ ಹಾಗೂ ಲೈಂಗಿಕತೆಯ ಬಗ್ಗೆ ನೀಡುವ ಶಿಕ್ಷಣ ಎಂದು ಪರಿಭಾವಿಸುತ್ತಾರೆ.
ಇದನ್ನೂ ಓದಿ:18 ವರ್ಷದ ಯುವತಿಗೆ ದಪ್ಪ ಆಗುವ ಭಯ.. ಆನ್‌ಲೈನ್ ಡಯಟ್ ಫಾಲೋ ಮಾಡಿ ದಾರುಣ ಸಾವು!
ಇದರ ಮೂಲಗಳನ್ನು ಹುಡುಕಿಕೊಂಡು ಹೋದಾಗ ಈ ಒಂದು ಪದ್ಧತಿಯನ್ನು ಶುರು ಮಾಡಿದ್ದು ಲಿಂಗೋಪೆನ್ ಅಥವಾ ಲಿಂಗೋದೇವ ಎಂಬುವವರ ಶುರು ಮಾಡಿದರು ಎಂಬ ನಂಬಿಕೆ ಇದೆ. ಇನ್ನು ಪ್ರಥಮ ರಾತ್ರಿ ಮುಗಿಸಿ ಮದುವೆಯಾದ ಬಳಿಕ ಗಂಡು ಮತ್ತು ಹೆಣ್ಣು ಇಬ್ಬರೂ ಕೂಡ ಹೆಸರನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ ಕೂಡ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ