newsfirstkannada.com

ಇದು ಆರ್​ಸಿಬಿಯ ಹೊಸ ಅಧ್ಯಾಯ -ಕನ್ನಡದಲ್ಲಿ ಕೊಹ್ಲಿ ಮಾತು ಕೇಳಿ ಖುಷಿಪಟ್ಟ ಅಭಿಮಾನಿಗಳು.. ವಿಡಿಯೋ

Share :

Published March 20, 2024 at 8:14am

Update March 20, 2024 at 8:15am

  RCB ಅನ್​ಬಾಕ್ಸ್​ ಈವೆಂಟ್​ನಲ್ಲಿ ಮೊಳಗಿದ ಅಪ್ಪು ಸಾಂಗ್

  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ

  ವಿರಾಟ್ ಕೊಹ್ಲಿ ಮಾತು ಕೇಳ್ತಿದ್ದಂತೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್​ ತಂಡದ ಅನ್​ಬಾಕ್ಸ್​ ಈವೆಂಟ್ ಅನ್ನು ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವೇದಿಕೆಯಲ್ಲಿ ಮಾತನಾಡುತ್ತ ಕೊಹ್ಲಿ ಅವರು ‘ಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿದರು. ಈ ವೇಳೆ ಕಾರ್ಯಕ್ರದಲ್ಲಿ ನೆರೆದಿದ್ದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ಕೊಹ್ಲಿಯನ್ನು ಕೊಂಡಾಡಿದರು.

ಈ ಅದ್ಧೂರಿ ಕಾರ್ಯಕ್ರಮಕ್ಕೆ ಆರ್​ಸಿಬಿಯ ಎಲ್ಲ ಸ್ಟಾರ್​ ಆಟಗಾರರು ಆಗಮಿಸಿದ್ದು ಸ್ಟೇಡಿಯಂನಲ್ಲಿ ಹಬ್ಬದ ವಾತವರಣ ಏರ್ಪಟ್ಟಿತ್ತು. ಇನ್ನೊಂದು ವಿಶೇಷ ಅಂದರೆ ಡಾ.ಪುನೀತ್​ ರಾಜ್​ಕುಮಾರ್​ ಅವರ ರಾಜಕುಮಾರ ಸಿನಿಮಾದ ಸಾಂಗ್​ ಹಾಕಲಾಗಿತ್ತು. ಕಾರ್ಯಕ್ರದಲ್ಲಿ ನೆರೆದಿದ್ದ ಅಪ್ಪು ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ನೀನೇ ರಾಜಕುಮಾರ​ ಸಾಂಗ್​ ಹಾಡಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇದು ಆರ್​ಸಿಬಿಯ ಹೊಸ ಅಧ್ಯಾಯ -ಕನ್ನಡದಲ್ಲಿ ಕೊಹ್ಲಿ ಮಾತು ಕೇಳಿ ಖುಷಿಪಟ್ಟ ಅಭಿಮಾನಿಗಳು.. ವಿಡಿಯೋ

https://newsfirstlive.com/wp-content/uploads/2024/03/KOHLI-3.jpg

Load More