/newsfirstlive-kannada/media/post_attachments/wp-content/uploads/2024/08/marriage2.jpg)
ಹೈದರಾಬಾದ್: ಇತ್ತೀಚಿನ ವರ್ಷಗಳಲ್ಲಿ ಕೃಷಿ ಕೆಲಸ ಮಾಡುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎಂಬ ಮಾತನ್ನು ಕೇಳುತ್ತಲೇ ಬಂದಿದ್ದೇವೆ. ರೈತರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಸಮಸ್ಯೆ ಹೊಸದೇನಲ್ಲ. ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ಇಷ್ಟಪಡದ ಮಹಿಳೆಯರು ರೈತ ವರನನ್ನು ಮದುವೆಯಾಗಲು ನಿರ್ಲಕ್ಷ್ಯ ಮನೋಭಾವವನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಮಧ್ಯೆ ಫಾರೀನ್ನಲ್ಲಿ ಲಕ್ಷ ಲಕ್ಷ ದುಡಿಯೋರಿಗೂ ಹೆಣ್ಣು ಸಿಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.
ಏನಿದು ಕೇಸ್?
ಹುಡುಗನ ಹೆಸರು ರಾಜ್ ಜಾಗೀರ್‌ದಾರ್. ಎನ್ಆರ್ಐ ಆಗಿರೋ ಇವ್ರು ಹೈದರಾಬಾದ್ ಮೂಲದವ್ರು. ಈಗ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಸೆಟಲ್ ಆಗಿದ್ದಾರೆ. ತಿಂಗಳಿಗೆ ಲಕ್ಷಗಟ್ಟಲೇ ಸಂಬಳ ಇದ್ದು, ಟೆಸ್ಲಾ ಕಾರ್ ಕೂಡ ಇದೆ. ಇಷ್ಟಾದ್ರೂ ಇವರಿಗೆ ಮದುವೆ ಆಗಲು ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜ್ ಜಾಗೀರ್‌ದಾರ್ ಹೆಸರಲ್ಲಿ ಯಾವುದೇ ಭೂಮಿ ಇಲ್ಲದಿರುವುದು.
ಯಾರು ಈ ರಾಜ್ ಜಾಗೀರ್‌ದಾರ್?
ರಾಜ್ ಜಾಗೀರ್‌ದಾರ್ ಮಿಡಲ್ ಕ್ಲಾಸ್ ಹುಡುಗ. ಪೋಷಕರ ಬಳಿ ಯಾವುದೇ ಜಮೀನು ಇಲ್ಲ. ಸಾಲ ಮಾಡಿ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಅಷ್ಟೇ ಅಲ್ಲ ವಿದೇಶಕ್ಕೆ ಹೋಗಿ ಸೆಟಲ್ ಆಗಲು ಬೇಕಾದ ಎಲ್ಲಾ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗ ಹೆಣ್ಣು ಕೇಳಲು ಹೋದರೆ ನಿಮ್ಮ ಬಳಿ ಭೂಮಿ ಇದ್ದರೆ ಮಾತ್ರ ಮದುವೆ ಮಾಡಿಕೊಡುತ್ತೇವೆ ಎನ್ನುತ್ತಾರಂತೆ.
ಭೂಮಿ ಖರೀದಿಗೆ ಮುಂದಾದ ಎನ್ಆರ್ಐಗಳು
ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೊಂದಿರಬೇಕು ಮತ್ತು ಕನಿಷ್ಠ 10 ಎಕರೆ ಜಮೀನು ಇರಬೇಕು. ಆಗ ಮಾತ್ರ ಮದುವೆ ಆಗಲು ಹೆಣ್ಣು ಕೊಡುತ್ತೇವೆ ಎನ್ನುವ ಕಂಡೀಷನ್ ಹಾಕಲಾಗಿದೆ. ಇದರ ಪರಿಣಾಮ ಎನ್ಆರ್ಐ ಹುಡುಗರು ಬೆಂಗಳೂರು, ಹೈದರಾಬಾದ್ ಸುತ್ತ ಜಮೀನು ಖರೀದಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಪೋಷಕರೇ ಎಚ್ಚರ! ಸಾಲದ ಹೊರೆ; ಆನ್ಲೈನ್ ಗೇಮಿಂಗ್ನಿಂದ ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ