/newsfirstlive-kannada/media/post_attachments/wp-content/uploads/2024/11/Darshan_Actor.jpg)
ಮೈಸೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಸದ್ಯ ರೆಗ್ಯೂಲರ್ ಜಾಮೀನು ಮೇಲೆ ಹೊರಗಿದ್ದಾರೆ. ಆದರೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಇನಷ್ಟು ಜಾಸ್ತಿ ಆಗಿದೆ. ಈ ಬಗ್ಗೆ ಡಾಕ್ಟರ್ರೊಬ್ಬರು ಮಾತನಾಡಿದ್ದು ಅನಿವಾರ್ಯ ಬಿದ್ದರೇ ದರ್ಶನ್ಗೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮೈಸೂರಿನಲ್ಲಿ ಮಾತನಾಡಿದ ಖ್ಯಾತ ಮೂಳೆತಜ್ಞ ಡಾ.ಅಜಯ್ ಹೆಗ್ಡೆ ಅವರು, ದರ್ಶನ್ ಅವರು ಬೆನ್ನಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. L5s ಇದು ಮೊದಲ ಸ್ಟೇಜ್ನಲ್ಲಿತ್ತು. ಆದರೆ ಇದರ ತೀವ್ರತೆ ಈಗ ಹೆಚ್ಚಾಗಿದ್ದು 2ನೇ ಹಂತಕ್ಕೆ ಜಾರಿದೆ. ಮೊದಲಿಗಿಂತ ಈಗ ದರ್ಶನ್ ಅವರ ದೇಹದ ತೂಕ ಹೆಚ್ಚಾಗಿದೆ. ಹೀಗಾಗಿ ಅವರಿಗೆ ನಿತ್ಯ ಫಿಜಿಯೋ ಥೆರಪಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಮುಝಾಫರ್ ಅಸ್ಸಾದಿ ಇನ್ನಿಲ್ಲ.. ಸಿಎಂ ಸಂತಾಪ
ದರ್ಶನ್ಗೆ ಪ್ರತಿದಿನ ಮಾತ್ರೆಗಳನ್ನ ನೀಡಲಾಗುತ್ತಿದೆ. L5s ತೊಂದರೆ ಜೊತೆಗೆ ನರದ ತೊಂದರೆ ಕೂಡ ಅವರಿಗಿದೆ. ಸದ್ಯಕ್ಕೆ ದರ್ಶನ್ಗೆ ಮೈಸೂರು ಮೂಲದ ನರತಜ್ಞ ಡಾ.ನವೀನ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಜೊತೆ ನಾನು ಕೂಡ ಸಂಪರ್ಕದಲ್ಲಿದ್ದು ಆರೋಗ್ಯ ಕುರಿತು ಮಾಹಿತಿ ಹಂಚಿಕೊಳ್ಳುತ್ತೇವೆ. ನಮ್ಮದೇ ನುರಿತ ವೈದ್ಯರ ತಂಡ ಅವರಿಗೆ ಫಿಜಿಯೋ ಥೆರಪಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ