newsfirstkannada.com

ಬೌ ಬೌ.. ನಾಯಿ ಕಚ್ಚಿದ್ದಲ್ಲ, ಮನುಷ್ಯನೇ ನಾಯಿಗೆ ಸಿಕ್ಕ ಸಿಕ್ಕಲ್ಲಿ ಕಚ್ಚಿ ಬಿಟ್ಟ; ಅಯ್ಯೋ.. ಆಮೇಲೆ ಏನಾಯ್ತು?

Share :

Published July 10, 2023 at 8:55pm

  ಹಿಡಿಯಲು ಅಟ್ಟಾಡಿಸಿಕೊಂಡು ಬಂದ ನಾಯಿ ಮೇಲೆ ರಿವೇಂಜ್‌!

  ಮಧ್ಯರಾತ್ರಿ ಪಾರ್ಕಿಂಗ್ ಜಾಗದಲ್ಲಿ ನಾಯಿ ಮೇಲೆ ತಿರುಗಿಬಿದ್ದ ಆಸಾಮಿ

  ಕಾರು ಚಾಲಕ ನಾಯಿಗೆ ಕಚ್ಚಿದ್ದನ್ನು ನೋಡಿ ಕಂಗಾಲಾದ ಪೊಲೀಸರು

ನಾಯಿ ಮನುಷ್ಯನಿಗೆ ಕಚ್ಚೋದಲ್ಲ, ಮನುಷ್ಯನೇ ನಾಯಿಗೆ ಕಚ್ಚೋ ಕಾಲ ಇದು. ನಿಜಕ್ಕೂ ಈ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಕಳ್ಳನೊಬ್ಬ ಪೊಲೀಸರಿಂದ ಎಸ್ಕೇಪ್‌ ಆಗಲು ಮುಂದಾಗಿದ್ದಾನೆ. ಆಗ ಪೊಲೀಸರು ತಮ್ಮ ನಾಯಿಯನ್ನು ಛೂ ಬಿಟ್ಟಿದ್ದಾರೆ. ಅಟ್ಟಾಡಿಸಿಕೊಂಡು ಬಂದ ನಾಯಿ ಮೇಲೆ ಕೋಪಗೊಂಡ ವ್ಯಕ್ತಿಯೇ ನಾಯಿಗೆ ಸಿಕ್ಕ, ಸಿಕ್ಕಂತೆ ಕಚ್ಚಿ, ಕಚ್ಚಿ ಗಾಯ ಮಾಡಿರುವ ಘಟನೆ ಅಮೆರಿಕಾದ ವ್ಲಿಮಿಂಗ್‌ಟೌನ್‌ನಲ್ಲಿ ನಡೆದಿದೆ.

ವ್ಲಿಮಿಂಗ್‌ಟೌನ್‌ನ ಪಾರ್ಕಿಂಗ್ ಜಾಗದಲ್ಲಿ ಪೊಲೀಸರು ಎಂದಿನಂತೆ ಮಧ್ಯರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ 47 ವರ್ಷದ ಜಮಲ್ ವಿಂಗ್ ಎಂಬ ವ್ಯಕ್ತಿ ಕಾರಿನಲ್ಲಿ ಅಲ್ಲಿಗೆ ಬರ್ತಾನೆ. ಕುಡಿದು ಫುಲ್‌ ಟೈಟಾಗಿದ್ದ ಜಮಲ್ ವಿಂಗ್ ತಾನು ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಕಾರಿನಿಂದ ಇಳಿದು ಅಲ್ಲಿಂದ ಓಡುತ್ತಾನೆ. ಪೊಲೀಸರು ಈ ಖದೀಮನನ್ನು ಹಿಡಿಯಲು ತಮ್ಮ ಹತ್ರ ಇದ್ದ ನಾಯಿಯನ್ನು ಛೂ ಬಿಡುತ್ತಾರೆ.

ಪೊಲೀಸ್ ಡಾಗ್ ಓಡುತ್ತಿದ್ದ ಜಮಲ್ ವಿಂಗ್ ಅನ್ನ ಚೇಸ್ ಮಾಡಲು ಹೋಗುತ್ತೆ. ಆಗ ತಿರುಗಿಬಿದ್ದ ಜಮಲ್ ಪೊಲೀಸರಿಗೆ ಸಿಕ್ಕಿಬೀಳೋ ಭಯದಲ್ಲಿ ನಾಯಿಗೆ ಹಿಗ್ಗಾಮುಗ್ಗ ಕಚ್ಚಿದ್ದಾನೆ. ನಾಯಿ ಮೇಲೆ ತಿರುಗಿಬಿದ್ದ ಕುಡುಕನ ರಾದ್ಧಾಂತಕ್ಕೆ ಅಲ್ಲಿದ್ದ ಪೊಲೀಸರೇ ನಿಜಕ್ಕೂ ಶಾಕ್ ಆಗಿದ್ದಾರೆ. ಕೊನೆಗೆ ನಾಯಿ, ಕಾರು ಚಾಲಕನ ಕಿತ್ತಾಟಕ್ಕೆ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಗಾಯಗೊಂಡ ನಾಯಿ ಹಾಗೂ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕುಡಿದ ಅಮಲಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಯಿಗೆ ಕಚ್ಚಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೌ ಬೌ.. ನಾಯಿ ಕಚ್ಚಿದ್ದಲ್ಲ, ಮನುಷ್ಯನೇ ನಾಯಿಗೆ ಸಿಕ್ಕ ಸಿಕ್ಕಲ್ಲಿ ಕಚ್ಚಿ ಬಿಟ್ಟ; ಅಯ್ಯೋ.. ಆಮೇಲೆ ಏನಾಯ್ತು?

https://newsfirstlive.com/wp-content/uploads/2023/07/America-Dog.jpg

Load More