newsfirstkannada.com

ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್

Share :

Published March 30, 2024 at 9:56pm

Update March 30, 2024 at 10:19pm

  ಗ್ಯಾಸ್​ ತುಂಬಿದ ಟ್ಯಾಂಕರ್​ ಪಲ್ಟಿ ಆತಂಕದಲ್ಲಿ ಸುತ್ತಮುತ್ತಲಿನ ಜನರು

  ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್​

  ಚಹಾ ಕುಡಿಯಲೆಂದು ನ್ಯೂಟ್ರಲಿನಲ್ಲಿ ಇಟ್ಟು ಹೋದ ಗ್ಯಾಸ್​ ಟ್ಯಾಂಕರ್​ ಚಾಲಕ

ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ.

ಅನಿಲ ತುಂಬಿದ ಟ್ಯಾಂಕರ್ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ಚಹಾ ಕುಡಿಯಲು ಡ್ರೈವರ್​ ಗ್ಯಾಸ್ ಟ್ಯಾಂಕರನ್ನು‌ ನಿಲ್ಲಿಸಿದ್ದಾನೆ. ನ್ಯೂಟ್ರಲಲ್ಲಿ ಹಾಕಿ ಚಹಾ ಕುಡಿಯಲು ತೆರಳಿದ್ದಾನೆ. ಆದರೆ ಈ ವೇಳೆ ಚಾಲಕ ಇಲ್ಲದೆ ಚಲಿಸಿದ ಟ್ಯಾಂಕರ್​ ಕಾಮತ್ ಎಕ್ಸಿಕ್ಯೂಟಿವ್ ಸಮೀಪದ ರಸ್ತೆಯ ಪಕ್ಕದಲ್ಲಿನ ಹೊಂಡಕ್ಕೆ ಹೋಗಿ ಬಿದ್ದಿದೆ.

ಟ್ಯಾಂಕರ್​ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ. ಸದ್ಯ ಗ್ಯಾಸ್ ತುಂಬಿರುವ ಟ್ಯಾಂಕರ್ ಬಿದ್ದಿರೋದ್ರಿಂದ ಸುತ್ತಮುತ್ತಲಿನ ಜನರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಕ್ವಿಂಟನ್ ಡಿ ಕಾಕ್ ಅರ್ಧ ಶತಕದಾಟ.. ಪಂಜಾಬ್​ಗೆ 199 ರನ್​ಗಳ ಟಾರ್ಗೆಟ್​​ ನೀಡಿದ ಲಕ್ನೋ ಪಡೆ

ಇನ್ನು ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿದ್ದಾರೆ. ಸದ್ಯಕ್ಕೆ ಯಾವುದೇ ಸೋರಿಕೆ ಕಾರಣದ್ದರಿಂದ ಟ್ಯಾಂಕರನ್ನು ಸ್ಥಳಾಂತರ ಮಾಡಲು ಪ್ರಯತ್ನ ಮುಂದುವರಿದಿದೆ. ಹೊನ್ನಾವರ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್

https://newsfirstlive.com/wp-content/uploads/2024/03/tanker-2.jpg

Load More