ಪೆಟ್ರೋಲ್ ದರ ಏರಿಕೆ ಪಕ್ಕಾ! ಇಸ್ರೇಲ್, ಇರಾನ್ ಯುದ್ಧದ ಎಫೆಕ್ಟ್ ಯಾವ, ಯಾವ ದೇಶಕ್ಕೆ ಗೊತ್ತಾ?

author-image
admin
Updated On
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಮತ್ತೆ ಶಾಕ್​; ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳ; ಲೀಟರ್​​ ಎಷ್ಟು?
Advertisment
  • ಇರಾನ್, ಇಸ್ರೇಲ್ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಇಲ್ಲ
  • ಇರಾನ್‌ನ ತೈಲ ನಿಕ್ಷೇಪಗಳ ಮೇಲೆ ದಾಳಿ ಮಾಡಿರುವ ಇಸ್ರೇಲ್
  • ಪ್ರತಿ ದಿನ 2 ಮಿಲಿಯನ್ ಬ್ಯಾರೆಲ್ಸ್‌ ತೈಲ ರಫ್ತು ಮಾಡುವ ಇರಾನ್

ಕ್ಷಿಪಣಿಗಳ ದಾಳಿ, ಬೆಂಕಿಯ ಮಳೆಯಲ್ಲಿ ಇಸ್ರೇಲ್‌, ಇರಾನ್‌ ಬೆಂದು ಹೋಗುತ್ತಿದೆ. ಮಧ್ಯಪ್ರಾಚ್ಯದ 2 ದೇಶಗಳ ಮಧ್ಯೆ ಸೇಡಿನ ಸಂಘರ್ಷ ದಿನ ಕಳೆದಂತೆ ಜ್ವಾಲಾಮುಖಿಯಂತೆ ಉರಿಯುತ್ತಿದೆ. ಇರಾನ್, ಇಸ್ರೇಲ್ ಯುದ್ಧದ ಕಾರ್ಮೋಡ ಇಡೀ ವಿಶ್ವಕ್ಕೆ ಆವರಿಸಿದ್ದು, ಇದರ ಎಫೆಕ್ಟ್ ಏಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ತಟ್ಟುವ ಸಾಧ್ಯತೆ ಇದೆ.

publive-image

ಇರಾನ್ ಮೇಲೆ ಇಸ್ರೇಲ್ ಹಾಗೂ ಇಸ್ರೇಲ್ ಮೇಲೆ ಇರಾನ್ ಬೆಂಕಿಯ ಮಳೆಯನ್ನೇ ಸುರಿಸುತ್ತಿದೆ. ಇರಾನ್, ಇಸ್ರೇಲ್ ಸಂಘರ್ಷ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರ ಎಫೆಕ್ಟ್ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಬಿದ್ದಿದ್ದು, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

[caption id="attachment_89556" align="aligncenter" width="800"]publive-image ಇರಾನ್ ದೇಶದ ತೈಲ ಉತ್ಪಾದನೆಯ ಘಟಕ[/caption]

ಇಸ್ರೇಲ್‌, ಇರಾನ್‌ನ ತೈಲ ನಿಕ್ಷೇಪಗಳ ಮೇಲೆ ದಾಳಿ ಮಾಡಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ. ಅಷ್ಟೇ ಅಲ್ಲದೇ ಇರಾನ್‌ ತೈಲ ಸರಬರಾಜುಗೆ ಅಡಚಣೆಯುಂಟಾಗಿದ್ದು, ಜಾಗತಿಕ ಇಂಧನ ಭದ್ರತೆಗೂ ಧಕ್ಕೆಯಾಗಿದೆ.

ಜಾಗತಿಕ ತೈಲ ನಿಕ್ಷೇಪಗಳಲ್ಲಿ ಇರಾನ್ ಇಡೀ ಜಗತ್ತಿನಲ್ಲೇ ಶೇಕಡಾ 9ರಷ್ಟು ನಿಕ್ಷೇಪಗಳನ್ನು ಹೊಂದಿದೆ. ಪ್ರತಿ ದಿನ ಈ ತೈಲ ನಿಕ್ಷೇಪಗಳಿಂದ 1.5 ರಿಂದ 2 ಮಿಲಿಯನ್ ಬ್ಯಾರೆಲ್ಸ್‌ ತೈಲವನ್ನು ರಫ್ತು ಮಾಡಲಾಗುತ್ತಿದೆ. ಇಸ್ರೇಲ್ ದಾಳಿಯಿಂದಾಗಿ ಇರಾನ್‌ನಲ್ಲಿ ತೈಲ ಉತ್ಪಾದನೆಯ ಪ್ರಮಾಣ ಕೂಡ ಕುಸಿದಿದೆ. ಇದರಿಂದ ಜಾಗತಿಕವಾಗಿ ತೈಲ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.

publive-image

ಇರಾನ್‌ ದೇಶದಿಂದ ಜಾಗತಿಕ ಮಾರುಕಟ್ಟೆಗೆ ಕಚ್ಚಾ ತೈಲದ ರಫ್ತು ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ತಾತ್ಕಾಲಿಕವಾಗಿ ತೈಲಗಳ ಬೆಲೆ ಏರಿಕೆಯಾಗುವ ಸುಳಿವು ಈಗಾಗಲೇ ಸಿಕ್ಕಿದೆ. ಮಾರುಕಟ್ಟೆಯ ವಿಶ್ಲೇಷಕರು ಹೇಳುವ ಪ್ರಕಾರ ಇರಾನ್-ಇಸ್ರೇಲ್ ಸಂಘರ್ಷ ಹೀಗೆ ಮುಂದುವರಿದರೆ ತೈಲ ಬೆಲೆ ಮುಂದಿನ ವಾರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರಾಜ್ಯ ರಾಜಧಾನಿ ಬೆಂಗಳೂರಲ್ಲಿ 1 ಲೀಟರ್ ಪೆಟ್ರೋಲ್ ದರ 102 ರೂಪಾಯಿ 92 ಪೈಸೆ. ಡೀಸೆಲ್ ದರ 1 ಲೀಟರ್‌ಗೆ 89 ರೂಪಾಯಿ 02 ಪೈಸೆ ಇದೆ.

ಇದನ್ನೂ ಓದಿ: ಇಸ್ರೇಲ್, ಇರಾನ್‌ ಮಧ್ಯೆ ಸದಾ ಸಂಘರ್ಷ ಯಾಕೆ? ಬದ್ಧ ವೈರಿಗಳ ರಣಕಾಳಗಕ್ಕೆ ಅಸಲಿ ಕಾರಣ ಇಲ್ಲಿದೆ 

ಇರಾನ್ ದೇಶದ ತೈಲ ರಫ್ತು ಏರುಪೇರಾದ್ರೆ ಏಷ್ಯಾದ ಹಲವು ದೇಶಗಳಲ್ಲಿ ಅಲ್ಪಾವಧಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಭಾರತ, ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಲಿದೆ. ಚೀನಾ, ಇರಾನ್‌ನಿಂದ ಅತಿ ಹೆಚ್ಚು ತೈಲವನ್ನು ಖರೀದಿಸುವ ರಾಷ್ಟ್ರವಾಗಿದೆ. ಹೀಗಾಗಿ ಇರಾನ್‌ ತೈಲ ರಫ್ತು ಕುಸಿತಗೊಂಡರೆ ಏಷ್ಯಾದ ಬಲಿಷ್ಠ ರಾಷ್ಟ್ರಗಳು ದುಬಾರಿ ಬೆಲೆ ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment