newsfirstkannada.com

ನಾಳೆಯಿಂದಲೇ ಚುನಾವಣಾ ನೀತಿ ಸಂಹಿತೆ; ದೇಶಾದ್ಯಂತ ಜಾರಿಯಾಗೋ ಕಠಿಣ ಕಾನೂನು ಏನು?

Share :

Published March 15, 2024 at 9:01pm

Update March 15, 2024 at 9:02pm

    ನಾಳೆ ಮಧ್ಯಾಹ್ನದಿಂದಲೇ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ

    ಸಿಎಂ, ಸಚಿವರು ನಾಳೆಯಿಂದ ಸರ್ಕಾರಿ ಸೌಲಭ್ಯವನ್ನು ಬಳಸುವಂತಿಲ್ಲ

    ರಾಜಕೀಯದ ಸಭೆ ಸಮಾರಂಭಕ್ಕೆ ಸರ್ಕಾರಿ ಕಾರು ಬಳಸಬಾರದು

ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಹಬ್ಬ. ಮತಯುದ್ಧ ಅಂತಾನೇ ಬಿಂಬಿತವಾಗಿರುವ 2024ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್‌ 16 ಅಂದ್ರೆ ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ನಡೆಯಲಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಾಗುತ್ತಿದೆ. ಎಲೆಕ್ಷನ್ ಡೇಟ್‌ ಘೋಷಣೆ ಮಾಡುವುದರ ಜೊತೆಗೆ ದೇಶಾದ್ಯಂತ ನಾಳೆಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ತರಲಾಗುತ್ತಿದೆ.

ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸುವಾಗ ದಿನಾಂಕ ಘೋಷಣೆ ಜೊತೆಗೆ ಚುನಾವಣೆಯ ಮಾರ್ಗಸೂಚಿಗಳನ್ನು ಪ್ರಕಟ ಮಾಡಲಾಗುತ್ತದೆ. ಅಂದ್ರೆ ಚುನಾವಣಾ ನೀತಿ ಸಂಹಿತೆಯನ್ನು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಲಾಗುತ್ತದೆ. ಚುನಾವಣಾ ದಿನಾಂಕ ಘೋಷಣೆಯ ಜೊತೆ, ಜೊತೆಗೆ ನಾಳೆ ಮಧ್ಯಾಹ್ನದಿಂದಲೇ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆಯು ಜಾರಿಗೆ ಬರುತ್ತಿದೆ.

ಚುನಾವಣಾ ನೀತಿ ಸಂಹಿತೆ ಯಾಕೆ?
ಪ್ರಜಾಪ್ರಭುತ್ವದ ಮತಯುದ್ಧದಲ್ಲಿ ಮತದಾರರನ್ನ ಮರುಳು ಮಾಡೋ ಪ್ರಯತ್ನಗಳು ಸಾಕಷ್ಟು ನಡೆಯುತ್ತವೆ. ಹೀಗಾಗಿ ವಿಧಾನಸಭೆ, ಲೋಕಸಭೆ ಅಥವಾ ಯಾವುದೇ ಸ್ಥಳೀಯ ಸಂಸ್ಥೆಯ ಚುನಾವಣೆಯೇ ಆಗಲಿ ಹದ್ದಿನ ಕಣ್ಗಾವಲಿನಲ್ಲಿ ನಡೆಸಲು ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ.

ಇದನ್ನೂ ಓದಿ: BIG BREAKING: ನಾಳೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ; ಕರ್ನಾಟಕದಲ್ಲಿ 2 ಹಂತದ ಮತದಾನ?

ನೀತಿ ಸಂಹಿತೆಯಿಂದ ಏನೆಲ್ಲಾ ಬದಲಾವಣೆ?
ಚುನಾವಣಾ ನೀತಿ ಸಂಹಿತೆ ಜಾರಿ ಆಗುವುದರಿಂದ ಜನಪ್ರತಿನಿಧಿಗಳು ಯಾವುದೇ ಅಭಿವೃದ್ಧಿ ಯೋಜನೆಗಳಲ್ಲಿ ಭಾಗಿಯಾಗುವಂತಿಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಿಎಂ, ಪಿಎಂ, ಸಚಿವರು, ಶಾಸಕರು ಅನುಮತಿ ಕೊಡುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆಯನ್ನು ನೆರವೇರಿಸುವಂತಿಲ್ಲ.

ಪ್ರಮುಖವಾಗಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ, ಸಚಿವರು ಚುನಾವಣಾ ನೀತಿ ಸಂಹಿತೆ ಜಾರಿಯಿಂದ ಸರ್ಕಾರಿ ಸೌಲಭ್ಯವನ್ನು ಬಳಸುವಂತಿಲ್ಲ. ಚುನಾವಣಾ ಪ್ರಚಾರ, ರಾಜಕೀಯದ ಸಭೆ ಸಮಾರಂಭಕ್ಕೆ ಸರ್ಕಾರಿ ಕಾರು ಬಳಸಬಾರದು. ಸರ್ಕಾರಿ ಸೌಲಭ್ಯಗಳನ್ನು ಬಳಸುವುದು ನಿಷೇಧವಾಗಲಿದೆ.

ಅಂಬೇಡ್ಕರ್ ಜಯಂತಿ ಸೇರಿದಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ರಾಜಕೀಯ ಭಾಷಣ ಮಾಡುವಂತಿಲ್ಲ. ದೇವಸ್ಥಾನ ಸೇರಿದಂತೆ ಸರ್ಕಾರಿ ಸ್ವತ್ತಲ್ಲಿ ರಾಜಕೀಯ ಚಟುವಟಿಕೆ ಮಾಡಲು ಅವಕಾಶವಿಲ್ಲ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಜನರ ಮೇಲೆ ಪ್ರಭಾವ ಬೀರುವ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಟೆಂಡರ್‌ಗಳಿಗೆ ರಾಜ್ಯ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆಯಲ್ಲಿ ಅತ್ಯಂತ ತುರ್ತು ಪರಿಸ್ಥಿತಿ ಹಾಗೂ ಸರ್ಕಾರಿ ಉದ್ಯೋಗಗಳ ಮಾಸಿಕ ಸಂಬಳ, ಭತ್ಯೆ ಬಿಡುಗಡೆ ಮಾಡಲು ಮಾತ್ರ ಅವಕಾಶ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆಯಿಂದಲೇ ಚುನಾವಣಾ ನೀತಿ ಸಂಹಿತೆ; ದೇಶಾದ್ಯಂತ ಜಾರಿಯಾಗೋ ಕಠಿಣ ಕಾನೂನು ಏನು?

https://newsfirstlive.com/wp-content/uploads/2024/03/Election-commission.jpg

Load More