/newsfirstlive-kannada/media/post_attachments/wp-content/uploads/2025/03/Trump-And-zelenskyy.jpg)
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಶುರುವಾಗಿ ಹೆಚ್ಚು ಕಡಿಮೆ ಮೂರು ವರ್ಷಗಳೇ ಕಳೆದಿವೆ. ಪಾಶ್ಚಾತ್ಯ ದೇಶಗಳು ಒಂದಲ್ಲ ಒಂದು ರೀತಿ ಉಕ್ರೇನ್ಗೆ ಇಷ್ಟು ವರ್ಷ ಸಹಾಯ ಮಾಡುತ್ತಲೇ ಇದ್ದವು. ಟ್ರಂಪ್ ಆಡಳಿತಕ್ಕೆ ಬಂದ ಮೇಲೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಕದನಗಳು ನಿಲ್ಲಬಹುದು. ಅಮೆರಿಕಾ ಮಧ್ಯಪ್ರವೇಶಿಸಬಹುದು ಎಂದೇ ಎಲ್ಲರ ಊಹೆಯಾಗಿತ್ತು. ಆದರೆ ಈಗ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ನ ಅಧಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒವೆಲ್ ಕಚೇರಿಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದಾರೆ.
ರಷ್ಯಾದ ಜೊತೆ ಕದನ ವಿರಾಮ ಮಾಡುವಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೊಲೊಡಿಮಿರ್ ಝೆಲೆನ್ಸ್ಕಿಗೆ ಸಲಹೆ ನೀಡಿದರು ಆದ್ರೆ ಈ ಡೀಲ್ಗೆ ಉಕ್ರೇನ್ ಅಧ್ಯಕ್ಷ ಒಪ್ಪಿಗೆ ನೀಡಲಿಲ್ಲ. ಇದೇ ವಿಚಾರವಾಗಿ ಉಭಯ ನಾಯಕರ ನಡುವೆ ವಾಕ್ ಸಮರ ಏರ್ಪಟ್ಟಿದೆ. ಅಮೆರಿಕಾ ಉಪಾಧ್ಯಕ್ಷನ ಸಲಹೆಯನ್ನು ಝಲೆನ್ಸ್ಕಿ ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಡೊನಾಲ್ಡ್ ಟ್ರಂಪ್ ಝಲೆನ್ಸ್ಕಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅವರ ಮನವೊಲಿಸಲು ಕೂಡ ಪ್ರಯತ್ನಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗೆದ ಉಕ್ರೇನ್ ಅಧ್ಯಕ್ಷನ ನಡೆಯಿಂದ ನಾವು ನಮ್ಮ ಬೆಂಬಲ ಹಿಂಪಡೆಯುವುದಾಗಿ ಟ್ರಂಪ್ ವಾರ್ನಿಂಗ್ ಮಾಡಿದ್ದಾರೆ.
ಉಕ್ರೇನ್ ಅಧ್ಯಕ್ಷರ ಜೊತೆ ಮಾತನಾಡಿದ ಡೊನಾಲ್ಡ್ ಟ್ರಂಪ್, ತುಂಬಾ ಸರಳವಾಗಿ ತಿಳಿಸಿ ಹೇಳಿದ್ದಾರೆ. ನಿಮ್ಮ ಪರಿಸ್ಥಿತಿ ಸದ್ಯ ಸರಿಯಿಲ್ಲ. ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಉಕ್ರೇನ್ ಇದೆ, ನಿಮಗೆ ಈಗ ಬೇರೆ ಆಯ್ಕೆಗಳಿಲ್ಲ. ನೀವು ಕೋಟ್ಯಾಂತರ ಜೀವಗಳ ಜೊತೆ ಜೂಜಾಡುತ್ತಿದ್ದೀರಿ, ಅಷ್ಟು ಮಾತ್ರವಲ್ಲ ನೀವು ಮೂರನೇ ಮಹಾಯುದ್ಧದೊಂದಿಗೆ ಜೂಜಿಗೆ ಇಳಿದಿದ್ದೀರಿ. ನಿಮ್ಮ ಹೇಳಿಕೆಗಳು ತುಂಬಾ ಅಗೌರವದಿಂದ ಕೂಡಿವೆ ಎಂದಿದ್ದಾರೆ.
ಇದನ್ನೂ ಓದಿ:ಜನರ ಜೀವದ ಜತೆ ಆಟ ಆಡಬೇಡ.. ಮಾತಾಡಲು ಬಂದ ಅಧ್ಯಕ್ಷನಿಗೆ ಡೊನಾಲ್ಡ್ ಟ್ರಂಪ್ ಬಿಗ್ ವಾರ್ನಿಂಗ್!
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಈ ನಡೆಯನ್ನು ಅನೇಕರು ಹೊಗಳಿದ್ದಾರೆ. ಇಂತಹದೊಂದು ದ್ವಿಪಕ್ಷೀಯ ಮಾತುಕತೆ ಈ ಹಿಂದೆ ಎಂದು ಕಂಡು ಬಂದಿಲ್ಲ. ಈ ರೀತಿಯ ನೇರವಾದ ಮಾತುಕತೆಗಳು ಸದ್ಯದ ಪರಿಸ್ಥಿತಿಗೆ ಬೇಕಾಗಿವೆ. ಒಬ್ಬ ಜಾಗತಿಕ ಮೂರ್ಖ ಜೋಕರ್ ಹಾಗೂ ಕಾಮಿಡಿಯನ್ ನ್ಯಾಟೋವನ್ನು ನಂಬಿ ಕುಳಿತುಕೊಂಡಿದ್ದಕ್ಕಾಗಿ ಈಗ ಲಕ್ಷಾಂತರ ಜೀವಗಳು ಬಲಿಯಾಗಿವೆ.
ಸಾಂಪ್ರದಾಯಿಕ ದ್ವಿಪಕ್ಷೀಯ ಮಾತುಕತೆಗಳು ಜಗತ್ತಿನ ಯಾವ ಸಮಸ್ಯೆಯನ್ನು ಇತಿಹಾಸದಲ್ಲಿಯೇ ಬಗೆಹರಿಸಲು ಸಾಧ್ಯವಾಗಿಲ್ಲ. ಇದೊಂದು ಸಮಯ ವ್ಯರ್ಥದ ಪ್ರಯತ್ನವಷ್ಟೇ. ನಮ್ಮ ಪ್ರಜ್ಞೆಯ ಅರಿವು ನಮಗಿರಬೇಕು. ಸ್ವಚ್ಛವಾದ ಉದ್ದೇಶಗಳು ಹಾಗೂ ನಿಸ್ವಾರ್ಥದಿಂದ ಮಾತ್ರ ನೇರವಾಗಿ ವ್ಯವಹಾರ ಮಾಡಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: 227 ಪ್ರಯಾಣಿಕರಿದ್ದ ವಿಮಾನ ನಾಪತ್ತೆ.. 7 ದೇಶದ 34 ಶಿಪ್, 28 ಏರ್‌ಕ್ರಾಫ್ಟ್‌ನಿಂದ ಹುಡುಕಿದ್ರೂ ಸಿಕ್ಕೇ ಇಲ್ಲ!
ಇದು ಅನೇಕರಿಗೆ ಭೀಕರತೆ ಅನಿಸಬಹುದು ಆದ್ರೆ ಈ ಹಿಂದಿನ ಅಮೆರಿಕಾದ ಅಧ್ಯಕ್ಷ ಬೈಡನ್ ಏನು ಮಾಡಿದ್ದಾರೆಂದು ನೆನಪಿರಲಿ. ಅಫ್ಘಾನಿಸ್ತಾನವನ್ನು ಸರ್ವನಾಶ ಮಾಡಿದರು. ಇರಾನ್, ಇರಾಕ್, ಉಕ್ರೇನ್, ಲಿಬಿಯಾ, ಕುವೈತ್, ವಿಯೆಟ್ನಾಮ್ ಇವೆಲ್ಲವನ್ನು ತಮ್ಮ ಸೂಪರ್ ಪವರ್ ಹಾಗೂ ದ್ವಿಪಕ್ಷೀಯ ಮಾತುಕತೆಗಳಿಂದಲೇ ಹಾಳುಗೆಡವಿದರು. ಎಲ್ಲಾ ಒಪ್ಪಂದಗಳು ಮುರಿದು ಬಿದ್ದು ಅಲ್ಲಿ ಯುದ್ಧಗಳು ಎದ್ದು ನಿಂತವು. ಈಗ ಒಂದು ವೇಳೆ ಈ ರೀತಿಯ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಟ್ರಂಪ್ ಒಂದು ವೇಳೆ ಯುದ್ಧವನ್ನು ನಿಲ್ಲಸಿದ್ದೇ ಆದಲ್ಲಿ ಅನೇಕ ಅಮಾಯಕ ಜೀವಗಳನ್ನು ಉಳಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ