newsfirstkannada.com

ಭೀಕರ ಬರ, ಕೈಗೆ ಬಾರದ ಬೆಳೆ.. ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Share :

Published March 3, 2024 at 2:05pm

Update March 3, 2024 at 2:14pm

  ಹೊಲಕ್ಕೆ ಹಾಕಿದ್ದ ಬಂಡವಾಳವೆಲ್ಲ ವಾಪಸ್ ಬರಲಿಲ್ಲ

  ಬ್ಯಾಂಕ್​, ಸ್ವಸಹಾಯ ಗುಂಪಿನಲ್ಲಿ ಸಾಲ ಪಡೆದಿದ್ದ ರೈತ

  ಸರಿಯಾಗಿ ಮಳೆ ಬಾರದಿದ್ದಕ್ಕೆ ರೈತನಿಗೆ ಕೈಕೊಟ್ಟಿದ್ದ ಬೆಳೆ

ಕೊಪ್ಪಳ: ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೇ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ.

ಹಿರೇಸಿಂದೋಗಿ ಗ್ರಾಮದ ದ್ಯಾಮ ನಾಯಕ (28) ಆತ್ಮಹತ್ಯೆಗೆ ಶರಣಾದ ರೈತ. ಇವರು ಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದರು. ಹೀಗಾಗಿಯೇ ಈ ಬಾರಿ ಬೆಳೆ ಬರುತ್ತದೆ ಎಂದು ಹೊಲಕ್ಕಾಗಿ ಬ್ಯಾಂಕ್ ಮತ್ತು ಸ್ವಸಹಾಯ ಗುಂಪಿನಿಂದ 40 ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡಿದ್ದರು.

ಆದರೆ ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದ ಕಾರಣ ಇವರ ಹೊಲದಲ್ಲಿ ಬೆಳೆ ನಾಶವಾಗಿತ್ತು. ಇದರಿಂದ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದ ರೈತ ಸಾಲ ಕೂಡ ವಾಪಸ್ ಮಾಡಿರಲಿಲ್ಲ. ಇದರಿಂದ ಬೇಸತ್ತು ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಬರ, ಕೈಗೆ ಬಾರದ ಬೆಳೆ.. ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

https://newsfirstlive.com/wp-content/uploads/2024/03/KPL_FARMER.jpg

Load More