newsfirstkannada.com

T20 World Cup: ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಯಂಗ್​ ಪ್ಲೇಯರ್ಸ್​ ಮಧ್ಯೆ ಪೈಪೋಟಿ.. ಕನ್ನಡಿಗನಿಗೆ ಸಿಗುತ್ತಾ ಚಾನ್ಸ್​?

Share :

Published January 14, 2024 at 10:42am

Update January 14, 2024 at 10:43am

    ಟಿ20 ವಿಶ್ವಕಪ್​ನಲ್ಲಿ ಮ್ಯಾನೇಜ್​ಮೆಂಟ್​ ಯಾರಿಗೆ ಮಣೆ ಹಾಕುತ್ತೆ?

    ದಿನೇ ದಿನೇ ಕಾವೇರುತ್ತಿದೆ ಟೀಮ್​ ಇಂಡಿಯಾದ ಕೀಪರ್​ ಸ್ಥಾನ

    ಟೀಮ್​ ಇಂಡಿಯಾದ ಕೀಪರ್​ ಸ್ಥಾನಕ್ಕೆ ತೀವ್ರ ಪೈಪೋಟಿ ಹೇಗಿದೆ?

ಟಿ20 ವಿಶ್ವಕಪ್ ಟೂರ್ನಿಗೆ ಕೆಲ ದಿನಗಳಷ್ಟೇ ಬಾಕಿ ಇದೆ. ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಸೆಲೆಕ್ಷನ್ ಕಮಿಟಿ ಹೆಜ್ಜೆ ಹಾಕುತ್ತಿದೆ. ಆದ್ರೆ, ಟಿ20 ವಿಶ್ವಕಪ್​​ನ ವಿಕೆಟ್ ಕೀಪರ್ ಯಾರಾಗ್ತಾರೆ ಎಂಬ ವಿಚಾರದಲ್ಲಿ ಮಾತ್ರ. ಬಿಸಿಸಿಐ ಹಾಗೂ ನಾಯಕ ರೋಹಿತ್ ಶರ್ಮಾ ಸಂದಿಗ್ಧತೆಗೆ ಸಿಲುಕಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಯಾರ್​ ಆಗ್ತಾರೆ ವಿಕೆಟ್ ಕೀಪರ್?. ಸದ್ಯ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಮಾತ್ರವೇ ಅಲ್ಲ, ಬಿಸಿಸಿಐ ಹಾಗೂ ನಾಯಕ ರೋಹಿತ್ ಶರ್ಮಾಗೆ ಇನ್ನಿಲ್ಲದೆ ಕಾಡ್ತಿರುವ ಪ್ರಶ್ನೆ ಆಗಿದೆ. ಇದಕ್ಕೆ ಕಾರಣ ವಿಕೆಟ್ ಕೀಪರ್ ಸ್ಥಾನಕ್ಕಿರುವ ಪೈಪೋಟಿ.

ಟೀಮ್ ಇಂಡಿಯಾದಲ್ಲಿ ಟ್ಯಾಲೆಂಟೆಡ್​ ವಿಕೆಟ್​ ಕೀಪರ್​​​ಗಳು ಹಲವರಿದ್ದಾರೆ. ಕೇವಲ ಒಂದೇ ಒಂದು ಸ್ಲಾಟ್​​ಗೆ ನಾಲ್ಕೈದು ಮಂದಿ ಪೈಪೋಟಿ ನಡೆಸ್ತಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲಿ ಟೀಮ್ ಮ್ಯಾನೇಜ್​ಮೆಂಟ್​ ಯಾರಿಗೆ ಮಣೆ ಹಾಕುತ್ತೆ ಚರ್ಚೆ ದಿನೇ ದಿನೇ ಕಾವೇರುತ್ತಿದೆ.

ಕಮ್​​ಬ್ಯಾಕ್ ಸಂಜುಗೆ ಸಿಗುತ್ತಾ ಚಾನ್ಸ್​..?

ಸಂಜು ಸ್ಯಾಮ್ಸನ್​ ಟಿ20 ಫಾರ್ಮೆಟ್​​ಗೆ ಹೇಳಿ ಮಾಡಿಸಿದ ಪ್ಲೇಯರ್​. ವಿಕೆಟ್ ಹಿಂದೆ, ವಿಕೆಟ್ ಮುಂದೆ ಕಮಾಲ್ ಮಾಡೋ ತಾಕತ್ತು ಸಂಜುಗಿದೆ. ಆದ್ರೆ, ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾಗಿರೋ ಸಂಜು, ಸೌತ್ ಆಫ್ರಿಕಾ ಸಿರೀಸ್​ನಲ್ಲಿ ಸಿಡಿಸಿದ ಚೊಚ್ಚಲ ಏಕದಿನ ಶತಕ ಟಿ20 ತಂಡದ ಬಾಗಿಲು ತೆರೆಯುವಂತೆ ಮಾಡಿದೆ. ಆದ್ರೆ, ಟ್ರಿಕ್ಕಿ ಕಂಡೀಷನ್ಸ್​​ನಲ್ಲಿ ಕೈಕೊಡುವ ಈತ, ಟಿ20 ವಿಶ್ವಕಪ್​​​​ನಲ್ಲಿ ಇರ್ತಾರಾ ಅನ್ನೋದೇ ಡೌಟ್​..

ಅಗ್ರೆಸ್ಸಿವ್ ಜಿತೇಶ್​​ಗೆ ಹೊಡೆಯುತ್ತಾ ಜಾಕ್​ಪಾಟ್?

ಜಿತೇಶ್​ ಶರ್ಮಾ, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್. ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಸ್ಟ್ರೈಕ್ ರೇಟ್ ಮೇಲೆಯೇ ಹೆಚ್ಚು ಫೋಕಸ್ ಮಾಡೋ ಜಿತೇಶ್​, ಸಿಕ್ಕ ಅವಕಾಶಗಳನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಲೋವರ್​ ಆರ್ಡರ್​ಗೆ ಹೇಳಿ ಮಾಡಿಸಿದ ಈ ಯಂಗ್ ಮಿಸೈಲ್​​​​​​​​​​​​​​​​​​, ಅಫ್ಘನ್ ಹಾಗೂ ಮುಂದಿನ ಐಪಿಎಲ್​ನಲ್ಲಿ ಅಬ್ಬರಿಸಿದ್ರೆ, ಟಿ20 ವಿಶ್ವಕಪ್ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ.

ಫಸ್ಟ್ ಚಾಯ್ಸ್​ ಕಿಶನ್​​ಗೆ ಸಿಗಲ್ವಾ ಸ್ಥಾನ?

ಇಶಾನ್ ಕಿಶನ್, ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್. ಆದ್ರೆ, ಮೆಂಟಲ್ ಕಂಡೀಷನ್ಸ್​ನಿಂದಾಗಿ ವಿಶ್ರಾಂತಿಗೆ ಮೊರೆ ಹೋಗಿರುವ ಇಶಾನ್ ಕಿಶನ್​ಗೆ, ಈಗ ಇದೇ ವಿಲನ್ ಆಗೋ ಸಾಧ್ಯತೆ ಇದೆ. ಡಿಸ್ಟ್ರಕ್ಟಿವ್ ಬ್ಯಾಟಿಂಗ್ ನಡೆಸಬಲ್ಲ ಈತ, ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲೇಬೇಕಾದ್ರೆ ಐಪಿಎಲ್​ನಲ್ಲಿ ಮ್ಯಾಜಿಕ್ ಮಾಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪಂತ್ ಆಗಮನವೇ ಅಸ್ಪಷ್ಟ..!

ರಿಷಬ್​ ಪಂತ್​ ಡೆಡ್ಲಿ ಆ್ಯಂಡ್ ಡೇರಿಂಗ್ ಬ್ಯಾಟ್ಸ್​ಮನ್. ಆದ್ರೆ, ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಂತ್, ಐಪಿಎಲ್​ನಲ್ಲಿ ಬ್ಯಾಟ್ ಬೀಸುವ ನಿರೀಕ್ಷೆ ಇದೆ. ಆದ್ರೆ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಫಿಟ್ನೆಸ್, ಫಾರ್ಮ್​ನಂತಹ ಪ್ರಶ್ನೆಗಳು ಉದ್ಭವಿಸಲಿವೆ. ಹೀಗಾಗಿ ಪಂತ್ ಆಗಮನ ನಿಜಕ್ಕೂ ಕಷ್ಟವೆನಿಸಿದೆ.

ಕನ್ನಡಿಗನಿಗೆ ತೆರೆಯುತ್ತಾ ಅವಕಾಶದ ಬಾಗಿಲು?

ಕೆ.ಎಲ್ ರಾಹುಲ್ ವಿಕೆಟ್​​​​​​​​​​​​​​ ಕೀಪರ್​ ಆಗಿ ನೆಕ್ಸ್ಟ್​ ಲೆವೆಲ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಕಮಾಲ್ ಮಾಡಿದ್ದ ರಾಹುಲ್, ಟೆಸ್ಟ್​ನಲ್ಲೂ ತಾನೇನು ಅನ್ನೋದನ್ನ ಫ್ರೂವ್ ಮಾಡಿದ್ದಾರೆ. ಈಗ ಟಿ20ಯತ್ತ ಫೋಕಸ್ ಮಾಡಿರೋ ರಾಹುಲ್, ಐಪಿಎಲ್​ನಲ್ಲಿ ಮಿಡಲ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ. ಐಪಿಎಲ್​​ನಲ್ಲಿ ಅಬ್ಬರಿಸಿದ್ರೆ ಟಿ20 ವಿಶ್ವಕಪ್​ನ ಫಸ್ಟ್​ ಚಾಯ್ಸ್ ಆಗೋದು ಫಿಕ್ಸ್.

ಐವರ ಭವಿಷ್ಯಕ್ಕೆ 5 ತಿಂಗಳು ಬಾಕಿ..? ಏನಾಗಲಿದೆ..?

ಟಿ20 ವಿಶ್ವಕಪ್​ಗೆ 5 ತಿಂಗಳುಗಳು ಬಾಕಿ ಇದೆ. ಹೀಗಾಗಿ ವಿಕೆಟ್ ಕೀಪರ್​​ ಸ್ಥಾನದ ರೇಸ್ ಮತ್ತಷ್ಟು ದಿನಗಳ ಕಾಲ ಚಾಲ್ತಿಯಲ್ಲಿರಲಿದೆ. ಸದ್ಯಕ್ಕೆ ತಂಡದಲ್ಲಿರುವ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾಗೆ ಅಡ್ವಾಂಟೇಜ್ ಜಾಸ್ತಿ ಇದೆ. ಆದ್ರೂ ಇಶನ್ ಕಿಶನ್​ ಆಗಮನವನ್ನ ತಳ್ಳಿಹಾಕುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 World Cup: ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಯಂಗ್​ ಪ್ಲೇಯರ್ಸ್​ ಮಧ್ಯೆ ಪೈಪೋಟಿ.. ಕನ್ನಡಿಗನಿಗೆ ಸಿಗುತ್ತಾ ಚಾನ್ಸ್​?

https://newsfirstlive.com/wp-content/uploads/2024/01/KL_RAHUL_WICKET_KEEPING.jpg

Load More