Advertisment

INDvsSL: ರೋಚಕ ಘಟ್ಟ ತಲುಪಿದ ಮೊದಲ ಟಿ20 ಪಂದ್ಯ; ಟೀಂ ಇಂಡಿಯಾ ಟಾರ್ಗೆಟ್‌ಗೆ ಲಂಕಾ ಸವಾಲು

author-image
admin
Updated On
INDvsSL: ರೋಚಕ ಘಟ್ಟ ತಲುಪಿದ ಮೊದಲ ಟಿ20 ಪಂದ್ಯ; ಟೀಂ ಇಂಡಿಯಾ ಟಾರ್ಗೆಟ್‌ಗೆ ಲಂಕಾ ಸವಾಲು
Advertisment
  • ಮೊದಲ ಟಿ20 ಪಂದ್ಯದಲ್ಲಿ ಭಾರತ, ಲಂಕಾ ರೋಚಕ ಹಣಾಹಣಿ
  • ಭಾರತದ ಬೌಲರ್‌ಗಳಿಗೆ ಸಿಂಹಸ್ವಪ್ನವಾದ ಲಂಕಾ ಆರಂಭಿಕರು
  • 6 ಬೌಂಡರಿ, 1 ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್

ಭಾರತ, ಶ್ರೀಲಂಕಾ ಮಧ್ಯೆ ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯ ರೋಚಕ ಹಂತ ತಲುಪಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಟೀಂ ಇಂಡಿಯಾ ಶ್ರೀಲಂಕಾಗೆ 214 ರನ್‌ಗಳ ಟಾರ್ಗೆಟ್ ನೀಡಿದೆ. ಈ ಟಾರ್ಗೆಟ್‌ ಬೆನ್ನತ್ತಿದ ಸಿಂಹಳೀಯರು ಭಾರತದ ಬೌಲರ್‌ಗಳಿಗೆ ಅಕ್ಷರಶಃ ಸಿಂಹಸ್ವಪ್ನವಾಗಿದ್ದಾರೆ.

Advertisment

ಇದನ್ನೂ ಓದಿ: 4,4,4,4,4,4,4,4,6,6; ಸೂರ್ಯ ಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್‌.. ಮೊದಲ ಪಂದ್ಯದಲ್ಲೇ ಹೊಸ ಭರವಸೆ! 

ಭಾರತವನ್ನು ಸೋಲಿಸಲು ಪಣತೊಟ್ಟಿರುವ ಲಂಕಾ ತಂಡಕ್ಕೆ ಪಾತುಂ ನಿಸ್ಸಾಂಕ ಸಿಲ್ವ ಹಾಗೂ ಕುಸಾಲ್ ಮೆಂಡಿಸ್ ಅತ್ಯುತ್ತಮ ಅಡಿಪಾಯ ಹಾಕಿದ್ದಾರೆ. ಆರಂಭದಲ್ಲಿ ಜೊತೆಯಾದ ಪಾತುಂ ಮತ್ತು ಕುಸಾಲ್ ಜೋಡಿ 84 ರನ್‌ಗಳ ಜೊತೆಯಾಟ ಆಡಿದೆ.

publive-image

ಲಂಕಾದ ಆರಂಭಿಕ ಜೋಡಿ ಟೀಂ ಇಂಡಿಯಾಗೆ ಕಾಡುತ್ತಿರುವಾಗ ಅರ್ಷದೀಪ್ ಸಿಂಗ್ ಖಡಕ್‌ ಬ್ರೇಕ್ ಹಾಕಿದರು. ಕುಸಾಲ್ ಮೆಂಡಿಸ್ 45 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಕ್ರೀಸ್‌ನಲ್ಲಿ ಉಳಿದ ಪಾತುಂ ನಿಸ್ಸಾಂಕ ಸಿಲ್ವ ಅವರು ಆಕರ್ಷಕ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.

Advertisment

ಲಂಕಾಗೆ 214 ರನ್ ಟಾರ್ಗೆಟ್‌!
ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್‌, ಶುಭ್ಮನ್ ಗಿಲ್‌ ಉತ್ತಮ ಆರಂಭವನ್ನೇ ನೀಡಿದ್ದರು. ಶುಭ್ಮನ್ ಗಿಲ್ 34 ರನ್‌ಗಳಿಗೆ ಔಟ್ ಆದ್ರೆ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಸ್ಫೋಟಕ ಆಟ ಪ್ರದರ್ಶಿಸಿದರು.

publive-image

ಲಂಕನ್ನರನ್ನು ಬೆಂಡೆತ್ತಿದ ಸೂರ್ಯ ಕುಮಾರ್ ಯಾದವ್ 8 ಬೌಂಡರಿ, 2 ಅಮೋಘ ಸಿಕ್ಸರ್ ಬಾರಿಸಿದರು. ಕೇವಲ 22 ಬಾಲ್‌ನಲ್ಲಿ ಸೂರ್ಯ ಕುಮಾರ್ ಸಿಡಿಸಿದ ಅರ್ಧ ಶತಕ ಸಿಡಿಸಿ ಗಮನ ಸೆಳೆದರು. ಸೂರ್ಯ ಕುಮಾರ್ ಒಂದೊಂದು ಬೌಂಡರಿ, ಸಿಕ್ಸರ್‌ಗೆ ಲಂಕನ್ನರು ಅಕ್ಷರಶಃ ಬೆವರಿ ಹೋಗಿದ್ರು. 58 ರನ್ ಸಿಡಿಸಿದ್ದ ಸೂರ್ಯ ಕುಮಾರ್ ಅವರು ಎಲ್‌ಬಿಡಬ್ಲೂ ಬಲೆಗೆ ಬೀಳುತ್ತಿದ್ದಂತೆ ಶ್ರೀಲಂಕಾ ಬೌಲರ್‌ಗಳು ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಮೊದಲ ಟಿ20; ಸಿಂಹಳೀಯರ ಬೇಟೆಗೆ ಬಲಿಷ್ಟ ಟೀಂ ಇಂಡಿಯಾ; ಪ್ಲೇಯಿಂಗ್ 11ರಲ್ಲಿ ಯಾರು?

Advertisment

ಸೂರ್ಯ ಕುಮಾರ್ ಔಟ್ ಆದ ಬಳಿಕ ರಿಷಬ್ ಪಂತ್ ಟೀಂ ಇಂಡಿಯಾಗೆ ಆಸರೆಯಾದರು. 6 ಬೌಂಡರಿ, 1 ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಭಾರತ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಆದರೆ 49 ರನ್ ಗಳಿಸಿದ ರಿಷಬ್ ಪಂತ್ ಔಟ್ ಆಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. ಸ್ಟಾರ್ ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ 9 ರನ್‌ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೊನೆಗೆ 20 ಓವರ್‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಲಷ್ಟೇ ಶಕ್ತವಾಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment